Thursday, February 7, 2013

ಪತ್ರಿಕಾ ಸಿಬ್ಬಂಧಿಗೆ ಹಲ್ಲೆ: ಮಂಜೇಶ್ವರದಿಂದ ವ್ಯಾಪಕ ಖಂಡನೆಮಂಜೇಶ್ವರ:ಕರಾವಳಿ ಅಲೆ ಯ ಸಿಬ್ಬಂದಿ ಹರೀಶ್ ಪುತ್ರನ್ ರವರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆಗೆ ಮಂಜೇಶ್ವರದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸಿಪಿಐ ಖಂಡನೆ: ಕರಾವಳಿ ಅಲೆಯ ಸಿಬ್ಬಂದಿ ಹರೀಶ್ ಪುತ್ರನ್ ರವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ರವರು ಖಂಡಿಸಿದ್ದು ಮಂಗಳೂರಿನಲ್ಲಿ ಪತ್ರಕರ್ತರ ಮೇಲೆ ನಡೆಯುವ ಇಂತಹ ಹಲ್ಲೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಉನ್ನತ ಅಧಿಕಾರಿಗಳು ಪರಾಜಯ ಗೊಂಡಿದ್ದು ಗೂಂಡಾಗಳನ್ನು ಡ್ರಗ್ಸ್ ಮಾಫಿಯಾಗಳನ್ನು ಖಾಸಗಿ ಸೇನೆಗಳ ಹೆಸರು ಇಟ್ಟುಕೊಂಡಿರುವ ಪುಂಡರನ್ನು ರಕ್ಷಿಸುವ ಹೊಣೆಯನ್ನು ಮಾತ್ರ ಕಾನೂನು ಪಾಲಕರು ನಡೆಸುತಿದ್ದಾರೆ.ಇವರು ಪತ್ರಿಕಾ ರಂಗಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಶತ್ರುಗಳಾಗಿ ಮಾರ್ಪಟ್ಟಿದ್ದಾರೆ ಇದಕ್ಕಾಗಿ ಜನಕೀಯ ಚಳವಳಿ ಬೆಳೆದು ಬರಬೇಕೆಂದು ತಿಳಿಸಿದ್ದಾರೆ.
ಸಿಪಿಐ(ಎಂ) ಖಂಡನೆ:ಪತ್ರಿಕಾ ಸಿಬ್ಬಂದಿ ಹರೀಶ್ ಪುತ್ರನ್ ರವರ ಮೇಲೆ ನಡೆದ ಹಲ್ಲೆಯನ್ನು ಮಂಜೇಶ್ವರ ಸಿಪಿಐ(ಎಂ) ಏರಿಯಾ ಕಾರ್ಯದರ್ಶಿ ಕೆ.ಜಯಾನಂದನ್ ರವರು ಖಂಡಿಸಿದ್ದು ಡ್ರಗ್ಸ್ ಮಾಫಿಯಾಗಳ ಹಾಗು ಗೂಂಡಾಗಳ ಅಟ್ಟಹಾಸದ ವಿರುದ್ದ ಉನ್ನತ ಪೊಲೀಸ್ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತರಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಮಂಜೇಶ್ವರ ಪ್ರೆಸ್ ಕ್ಲಬ್ ಖಂಡನೆ: ಕರಾವಳಿ ಅಲೆ ಪತ್ರಿಕೆಯ ಸಿಬ್ಬಂದಿ ಹರೀಶ್ ಪುತ್ರನ್ ರವರ ಮೇಲೆ ಡ್ರಗ್ಸ್ ಮಾಫಿಯಾಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಮಂಜೇಶ್ವರ ಪ್ರೆಸ್ ಕ್ಲಬ್ ಖಂಡಿಸಿದ್ದು ತಪ್ಪಿಸ್ಥರ ವಿರುದ್ದ ಪೊಲೀಸ್ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರೆಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಮಚ್ಚಂಪ್ಪಾಡಿ ಆಗ್ರಹಿಸಿದ್ದಾರೆ.
ಮಂಜೇಶ್ವರ ಗ್ರಾಹಕರ ವೇದಿಕೆ ಖಂಡನೆ: ಕರಾವಳಿ ಅಲೆ ಸಿಬ್ಬಂದಿ ಹರೀಶ್ ಪುತ್ರನ್ ರವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಖಂಡಿಸಿದ್ದು.ಹಲ್ಲೆಯನ್ನು ನಡೆಸಿದ ಗೂಂಡಾಗಳ ವಿರುದ್ದ ಪೊಲೀಸ್ ಅಧಿಕಾರಿಗಳು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಜೇಶ್ವರ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಮುರಳೀಧರ್ ಭಟ್ ಆಗ್ರಹಿಸಿದ್ದಾರೆ.

No comments:

Post a Comment