Thursday, February 14, 2013

ಗಂಡು ಮಗು ಆಗದಿದ್ದರೆ ನರಕಕ್ಕೆ ಹೋಗುತ್ತಾರಂತೆ!: ಈ ನರಕ ಎಲ್ಲಿದೆ? ಸುಪ್ರೀಂ ಕೋರ್ಟ್ ಪ್ರಶ್ನೆ!ಹೊಸದಿಲ್ಲಿ: ಕುಸಿಯುತ್ತಿರುವ ಲಿಂಗಾನುಪಾತದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಕಳವಳ ವ್ಯಕ್ತಪಡಿಸಿತು ಹಾಗೂ ಲಿಂಗ ಪತ್ತೆ ಕ್ಲಿನಿಕ್‌ಗಳನ್ನು ತಡೆಯುವಲ್ಲಿ ಹಾಗೂ ಕಾನೂನು ಭಂಜಕರನ್ನು ಶಿಕ್ಷಿಸುವಲ್ಲಿನ ವೈಫಲ್ಯಕ್ಕಾಗಿ ರಾಜ್ಯ ಸರಕಾರಗಳಿಗೆ ಛೀಮಾರಿ ಹಾಕಿತು.
‘‘ಗಂಡು ಮಗು ಆಗದಿದ್ದರೆ ತಾವು ನರಕಕ್ಕೆ ಹೋಗುವುದಾಗಿ ಜನರಲ್ಲಿ ನಂಬಿಕೆಯೊಂದಿದೆ’’ ಎಂದು ಹೇಳಿದ ನ್ಯಾಯಾಲಯ, ‘‘ಈ ನರಕ ಎಲ್ಲಿದೆ?’’ ಎಂದು ಪ್ರಶ್ನಿಸಿತು!
ಪಂಜಾಬ್, ಹರ್ಯಾಣ, ದಿಲ್ಲಿ, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರಗಳು ಸಲ್ಲಿಸಿದ ವರದಿಗಳನ್ನು ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಪರಿಶೀಲಿಸಿತು. ‘‘ಕಾನೂನು ಅನುಷ್ಠಾನ ಸಂಸ್ಥೆಗಳಲ್ಲಿ ನಿರ್ಲಕ್ಷದ ಧೋರಣೆಯಿದೆ. ಅವುಗಳನ್ನು ಹೇಗೆ ಎಬ್ಬಿಸುವುದು’’ ಎಂದು ನ್ಯಾಯಪೀಠ ಹೇಳಿತು.
ಲಿಂಗ ಪತ್ತೆಯನ್ನು ನಿಲ್ಲಿಸಲು ರಾಜ್ಯ ಸರಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತ್ರೈಮಾಸಿಕ ಆಧಾರದಲ್ಲಿ ಪರಿಶೀಲನೆ ನಡೆಸುವುದಾಗಿ ನ್ಯಾಯಾಲಯ ಹೇಳಿತು.

No comments:

Post a Comment