Saturday, February 9, 2013

ಸಂಸತ್ ದಾಳಿ ರೂವಾರಿ ಅಫ್ಜಲ್‌ಗುರುಗೆ ಗಲ್ಲು


ಸಂಸತ್ ದಾಳಿ ರೂವಾರಿ ಅಫ್ಜಲ್‌ಗುರುಗೆ ಗಲ್ಲು


ಹೊಸದಿಲ್ಲಿ: ಸಂಸತ್ ದಾಳಿ ರೂವಾರಿ ಅಫ್ಜಲ್‌ಗುರುವನ್ನು ಇಂದು ಬೆಳಗ್ಗೆ 8ಗಂಟೆಗೆ ತಿಹಾರ್ ಜೈಲ್‌ನಲ್ಲಿ ಗಲ್ಲಿಗೇರಿಸಲಾಯಿತು.
ಏಳು ವರ್ಷಗಳ ಹಿಂದೆಯೇ ಅಫ್ಜಲ್‌ಗುರುಗೆ ಗಲ್ಲು ಶಿಕ್ಷೆ ನೀಡುವುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ನಂತರ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿಯನ್ನು ಅಫ್ಜಲ್ ನೀಡಿದ್ದ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಫ್ಜಲ್‌ಗುರು ನೀಡಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತಗೊಳಿಸಿದ ಪರಿಣಾಮ ಈ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು.
ರಾತ್ರಿ 12 ಗಂಟೆಗೆ ಗಲ್ಲು ಶಿಕ್ಷೆಯ ಕುರಿತು ಅಫ್ಜಲ್‌ಗೆ ಮಾಹಿತಿ ನೀಡಲಾಯಿತು. ನಂತರ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಬೆಳಗ್ಗೆ 8 ಗಂಟೆಗೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಯಿತು.
ಅಫ್ಜಲ್ ಗುರುಗೆ ಗಲ್ಲು ಶಿಕ್ಷೆಯನ್ನು ನೀಡುವ ಕುರಿತು 2 ತಿಂಗಳ ಹಿಂದೆಯೇ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಹಲವು ಅಧಿಕಾರಿಗಳನ್ನೊಳಗೊಂಡು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಗಲ್ಲು ಶಿಕ್ಷೆ ನೀಡಿದರೆ ಎದುರಾಗುವ ಸಮಸ್ಯೆ ಹಾಗೂ ಯಾವ ರೀತಿಯ ಭದ್ರತೆ ನೀಡಬೇಕು. ಗಲ್ಲು ಶಿಕ್ಷೆಯ ಪರಿಣಾಮ ಎದುರಾಗ ಬಹುದಾದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ತಿಹಾರ್ ಜೈಲಿನ 3ನೆ ಕೊಠಡಿಯಲ್ಲಿ ಅಫ್ಜಲ್‌ಗುರುವನ್ನು ಗಲ್ಲಿ ಗೇರಿಸಲಾಗಿದ್ದು. ಈತನ ಅಂತ್ಯ ಕ್ರಿಯೆಯನ್ನು ತಿಹಾರ್ ಜೈಲಿನಲ್ಲಿಯೇ ನಡೆಸಲು ಕೆಂದ್ರ ಸರಕಾರ ತೀರ್ಮಾನಿಸಿದೆ.

ಮೃತದೇಹ ಕೇಳಿದ ಸಂಬಂಧಿಕರು: ಅಫ್ಜಲ್‌ಗುರುನ ಮೃತ ಶರೀರವನ್ನು ತಿಹಾರ್ ಜೈಲಿನಲ್ಲಿ ಅಂತ್ಯಕ್ರಿಯೆ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಆತನ ಸಹೋದರ ಮುಷ್ತಾಕ್ ಅಹ್ಮದ್ ಹಾಗೂ ಕುಟುಂಬದ ಸದಸ್ಯರು ಮೃತ ದೇಹವನ್ನು ನಮಗೆ ಹಸ್ತಾಂತರಿಸಿ, ನಾವು ನಮ್ಮ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯ ಕ್ರಿಯೆ ಮಾಡುತ್ತೇವೆ ಎಂದು ಕೇಳಿ ಕೊಂಡಿದ್ದಾರೆ.
ಆದರೆ ಕೇಂದ್ರ ಸರಕಾರ ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ, ತಿಹಾರ್ ಜೈಲ್‌ನಲ್ಲಿಯೇ ಅಂತ್ಯ ಕ್ರಿಯೇ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿ

No comments:

Post a Comment