Friday, February 1, 2013

ತಾಯಿ ಮಕ್ಕಳು ನಾಪತ್ತೆಮಂಜೇಶ್ವರ:ತಾಯಿ ಹಾಗು ಇಬ್ಬರು ಮಕ್ಕಳು ನಾಪತ್ತೆಯಾದ ಬಗ್ಗೆ ಇಲ್ಲಿಗೆ ಸಮೀಪದ ಉಪ್ಪಳದಿಂದ ವರದಿಯಾಗಿದೆ.
ಉಪ್ಪಳ ಪಾರಕಟ್ಟೆ ಎಜೆಐ ಶಾಲೆ ಸಮೀಪದ ನಿವಾಸಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಶಾಹುಲ್ ಹಮೀದ್ ಎಂಬವರ ಪತ್ನಿ ಸಾಹಿರಾ ಬಾನು(30) ಹಾಗು ಮಕ್ಕಳಾದ ಸಾನಿಯಾ(11) ಮೊಹಮ್ಮದ್ ಸಿನಾನ್(9) ಎಂಬಿವರು ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಿಂಗಳು 26 ರಂದು ಚಿನ್ನಾಭರಣ ಹಾಗು ಬಟ್ಟೆಬರೆಗಳ ಜತೆಯಾಗಿ ನಾಪತ್ತೆಯಾಗಿರುವುದಾಗಿ ಮಹಿಳೆಯ ಸಹೋದರ ಅಬ್ದುಲ್ ರಜಾಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಸಾಹಿರಾ ಬಾನುಳ ಗಂಡ ಕೊಲ್ಲಿಯಲ್ಲಿ ಉದ್ಯೋಗಿಯಾಗಿದ್ದು ಇದೀಗ ಊರಿಗೆ ತಲುಪಿರುತ್ತಾನೆ. ಸಂಭಂಧ ಪೊಲೀಸರು ಕೆಸು ದಾಖಲಿಸಿ ಹುಟುಕಾಟ ಆರಂಭಿಸಿರುತ್ತಾರೆ.

No comments:

Post a Comment