Thursday, February 14, 2013

ನಾಲ್ವರು ವೀರಪ್ಪನ್ ಸಹಚರರಿಗೆ ಗಲ್ಲು ಸನಿನಹಿತ;ಕ್ಷಮಾದಾನ ಅರ್ಜಿ ತಿರಸ್ಕೃತಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿರುವ ಪಾಲಾರ್‌ನಲ್ಲಿ 1993ರಲ್ಲಿ ನೆಲಬಾಂಬ್ ಸ್ಫೋಟವನ್ನು ನಡೆಸಿ 21 ಮಂದಿ ಪೊಲೀಸರನ್ನು ಹತ್ಯೆಗೈದ ಅಪರಾಧಕ್ಕಾಗಿ ನಾಲ್ವರು ಆರೋಪಿಗಳಾದ ಜ್ಞಾನ ಪ್ರಕಾಶಂ, ಸೈಮನ್, ಮೀಸೆಕಾರ್ ಮಾದಯ್ಯ ಹಾಗೂ ಬಿಲವೇಂದ್ರನ್‌ಗೆ ಸುಪ್ರೀಂಕೋರ್ಟ್ 2004ರ ಜನವರಿಯಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು.

ಹೊಸದಿಲ್ಲಿ: 26/11 ಮುಂಬೈ ದಾಳಿ ಪ್ರಕರಣದ ಅಪರಾಧಿ ಅಜ್ಮಲ್ ಕಸಬ್ ಹಾಗೂ ಸಂಸತ್ ಭವನದ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರುವಿನ ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ ಕೆಲವು ದಿನಗಳ ಬಳಿಕ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ಮೃತ ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನ ನಾಲ್ವರು ಸಹಚರರ ದಯಾಭಿಕ್ಷೆಯ ಮನವಿಗಳನ್ನು ತಳ್ಳಿಹಾಕಿದ್ದಾರೆ.

ಕರ್ನಾಟಕದಲ್ಲಿ 1993ರಲ್ಲಿ ನೆಲಬಾಂಬ್ ಸ್ಫೋಟಿಸಿ 21 ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ವೀರಪ್ಪನ್‌ನ ನಾಲ್ವರು ಸಹಚರರಿಗೆ ಸುಪ್ರೀಂಕೋರ್ಟ್ ಮರಣದಂಡನೆಯನ್ನು ವಿಧಿಸಿತ್ತು.
ಈ ನಾಲ್ವರ ಕ್ಷಮಾದಾನದ ಅರ್ಜಿಗಳನ್ನು ರಾಷ್ಟ್ರಪತಿ ತಿರಸ್ಕರಿಸಿರುವುದನ್ನು ಆರೋಪಿಗಳ ಪರ ವಕೀಲ ಎಸ್.ಬಾಲಮುರುಗನ್ ಬುಧವಾರ ದೃಢಪಡಿಸಿದ್ದಾರೆ. ‘‘ರಾಷ್ಟ್ರಪತಿ ಈ ಆರೋಪಿಗಳ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿರುವ ಸಂದೇಶವನ್ನು ಬೆಳಗಾವಿ ಜೈಲಿನ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಹಾಗೂ ಅದನ್ನು ಕೈದಿಗಳಿಗೂ ತಿಳಿಸಲಾಗಿದೆಯೆಂಬ ಮಾಹಿತಿ ನಮಗೆ ವಿಶ್ವಸನೀಯ ಮೂಲಗಳಿಂದ ದೊರೆತಿದೆಯೆಂದು ನಾಗರಿಕ ಹಕ್ಕುಗಳಿಗಾಗಿನ ಜನತಾ ಒಕ್ಕೂಟ (ಪಿಯುಸಿಎಲ್)ದ ತಮಿಳುನಾಡು ಘಟಕದ ಕಾರ್ಯದರ್ಶಿಯೂ ಆದ ಬಾಲಮುರುಗನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿರುವ ಪಾಲಾರ್‌ನಲ್ಲಿ 1993ರಲ್ಲಿ ನೆಲಬಾಂಬ್ ಸ್ಫೋಟವನ್ನು ನಡೆಸಿ 21 ಮಂದಿ ಪೊಲೀಸರನ್ನು ಹತ್ಯೆಗೈದ ಅಪರಾಧಕ್ಕಾಗಿ ನಾಲ್ವರಿಗೆ ಜ್ಞಾನ ಪ್ರಕಾಶಂ, ಸೈಮನ್, ಮೀಸೆಕಾರ್ ಮಾದಯ್ಯ ಹಾಗೂ ಬಿಲವೇಂದ್ರನ್‌ಗೆ ಸುಪ್ರೀಂಕೋರ್ಟ್ 2004ರ ಜನವರಿಯಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು.
  
ಪ್ರಕರಣಕ್ಕೆ ಸಂಬಂಧಿಸಿ ಈ ನಾಲ್ವರು ಆರೋಪಿಗಳಿಗೆ ಮೈಸೂರಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2004ರಲ್ಲಿ ನಾಲ್ವರು ಆರೋಪಿಗಳಿಗೂ ಮರಣದಂಡನೆಯನ್ನು ವಿಧಿಸಿತು. ತಮಗೆ ಕ್ಷಮಾದಾನ ನೀಡುವಂತೆ ಕೋರಿ ಈ ನಾಲ್ವರು ರಾಷ್ಟ್ರಪತಿಗೆ ಸಲ್ಲಿಸಿದ ಅರ್ಜಿಗಳು 2004ರಿಂದ ಪರಿಶೀಲನೆಗೊಳಗಾಗದೆ ಬಾಕಿಯುಳಿದಿತ್ತು.
ಕರ್ನಾಟಕ ಹಾಗೂ ತಮಿಳುನಾಡಿನ ಗಡಿಪ್ರದೇಶದಲ್ಲಿ ಭಾರೀ ಭೀತಿಯನ್ನು ಸೃಷ್ಟಿಸಿದ್ದ ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನನ್ನು ವಿಶೇಷ ಕಾರ್ಯಾಚರಣೆ ಪಡೆಯ ಪೊಲೀಸರು 2004ರಲ್ಲಿ ಹತ್ಯೆಗೈದಿದ್ದರು.

No comments:

Post a Comment