Saturday, February 9, 2013

ಉಗ್ರ ಅಫ್ಜಲ್‌ಗೆ ಗಲ್ಲು ಶಿಕ್ಷೆ ಹಿನ್ನೆಲೆ ಜಾಗೃತ ಕ್ರಮಜಮ್ಮು ಕಾಶ್ಮೀರ: ಉಗ್ರ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸುವ ಕುರಿತು ಜಮ್ಮು ಕಾಶ್ಮೀರ ಸರಕಾಕರಕ್ಕೆ ಫೆ.8ರ ರಾತ್ರಿ 8 ಗಂಟೆಗೆ ಸ್ಪಷ್ಟ ಮಾಹಿತಿಯನ್ನು ನೀಡಲಾಗಿತ್ತು. ಜಮ್ಮು ಕಾಶ್ಮೆರದಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾನೂನು ಬದ್ಧವಾಗಿ ಅಫ್ಜಲ್‌ಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಶಿಕ್ಷೆಯ ಕುರಿತು ಕಳೆದ ರಾತ್ರಿ ಸುಮಾರು 8 ಗಂಟೆಗೆ ಗೃಹ ಸಚಿವರು ಮಾಹಿತಿ ನೀಡಿದರು ಎಂದರು.
 ಈ ಕುರಿತು ಭದ್ರತೆ ಸಂಬಂಧಿಸಿದಂತೆ ಕ್ರಮ ಕೈ ಗೊಳ್ಳಲಾಗಿದೆ. ರಾಜ್ಯದ ಪೊಲೀಸ್ ಪಡೆಯನ್ನು ಭದ್ರತೆಗೆ ಬಳಸಿ ಕೊಂಡಿದೆ. ಸೇನೆಯನ್ನು ಬಳಸಿ ಕೊಂಡಿಲ್ಲ ಎಂದುವರು ಸ್ಪಷ್ಟ ಪಡಿಸಿದರು. ಜನತೆ ಯಾವುದೇ ವದಂತಿಗೆ ಕಿವಿ ಕೊಡಬಾರದು ಎಂದವರು ಈ ಸಂದರ್ಭ ಮನವಿ ಮಾಡಿದರು.
ಚೆನ್ನೈ: ಅಫ್ಜಲ್‌ಗುರುಗೆ ಗಲ್ಲು ನೀಡಿರುವ ಕುರಿತು ಕೇಂದ್ರ ವಾರ್ತಾ ಸಚಿವ ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರಕ್ಕೆ ಉಗ್ರರ ಬಗ್ಗೆ ಮೃದು ಧೋರಣೆ ಇಲ್ಲ. ಯುಪಿಎ ಸಾಮಾಜಿಕ ಶಾಂತಿ, ಕೋಮು ಸೌಹಾರ್ದತೆಗೆ ಹೆಚ್ಚಿನ ಮಹತ್ವ ನೀಡಿದೆ, ರಾಷ್ಟ್ರದ ಹಿತಾಸಕ್ತಿಯಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದರು.
  ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ, ಫೆ.3 ರಂದು ಅಫ್ಜಲ್‌ನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಯವರಿಂದ ತಿರಸ್ಕೃತ ಗೊಂಡಿತು. 4 ರಂದು ಅಫ್ಜಲ್ ಗಲ್ಲು ಶಿಕ್ಷೆ ಕೊಡುವಂತೆ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ನಾನೂ ಸಹಿ ಮಾಡಿದೆ 8 ರಂದು ಗಲ್ಲು ಶಿಕ್ಷೆ ನೀಡಲು ದಿನಾಂಕ, ಸಮಯವನ್ನು ನಿರ್ಧರಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
 ಅಫ್ಜಲ್‌ಗೆ ಗಲ್ಲು ಶಿಕ್ಷೆ ನೀಡಿರುವ ಕುರಿತು ಪ್ರತಿಕ್ರಿಯೇ ನೀಡಿದ ಬಾಲಿವುಡ್ ಚಲನಚಿತ್ರ ನಟ ಅಮಿತಭ್ ಬಚ್ಚನ್ ದೇಶ ದ್ರೋಹಿಗಳು ಯಾರೇ ಆಗಿದ್ದರು ಅವರಿಗೆ ಶಿಕ್ಷೆಯಾಗ ಬೇಕು ಎಂದರು.
  ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಕುರಿತು ಮಾತನಾಡಿ,  ತಡವಾಗಿಯಾದರೂ ಶಿಕ್ಷೆಯಾಯಿತು ಇದು ಸ್ವಾಗತಾರ್ಹವಾಗಿದೆ ಎಂದರು.
 ಈ ಬಗ್ಗೆ ಸಿಟಿ ರವಿ ಮಾತನಾಡಿ, ಅಫ್ಜಲ್‌ಗೆ ಸಂಸತ್ ದಾಳಿ ನಡೆದ ಕೆಲವೇ ತಿಂಗಳುಗಳಲ್ಲಿಯೇ ಶಿಕ್ಷೆ ವಿಧಿಸ ಬೇಕಿತ್ತು. ಭಯೋತ್ಪಾದನೆಗೆ ಇದು ಎಚ್ಚರಿಕೆಯ ಕ್ರಮವಾಗಿದೆ. ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದೆ ಎಂದರು.

No comments:

Post a Comment