Wednesday, February 13, 2013

ರೈಲ್ವೇ ಪ್ರಯಾಣಿಕನಿಗೆ ಅಕ್ರಮಣಮಂಜೇಶ್ವರ:ರೈಲ್ವೇ ನಿಲ್ದಾನದಲ್ಲಿ ಪ್ರಯಾಣಿಕನೋರ್ವನಿಗೆ ತಂಡವೊಂದು ಅಕ್ರಮಣ ನಡೆಸಿದ ಘಟನೆ ಇಲ್ಲಿಗೆ ಸಮೀಪದ ಉಪ್ಪಳದಲ್ಲಿ ನಡೆದಿದೆ.
ಅಕ್ರಮಣಕ್ಕೊಳಗಾದ ವ್ಯಕ್ತಿ ಉಪ್ಪಳ ಪ್ರತಾಪ ನಗರ ನಿವಾಸಿ ಪ್ರವೀಣ ಚಂದ್ರ(23) ಎಂಬವರಾಗಿದ್ದಾರೆ.ಅಕ್ರಮಣದಿಂದ ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಂಗಳೂರಿನಲ್ಲಿ ಖಾಸಗಿ ಫೈನಾನ್ಸೊಂದರಲ್ಲಿ ಉದ್ಯೋಗಿಯಾಗಿರುವ ಇವರು ನಿನ್ನೆ ಸಂಜೆ ರೈಲು ಗಾಡಿಯಲ್ಲಿ ಮಂಗಳೂರಿನಿಂದ ಉಪ್ಪಳ ನಿಲ್ದಾನಕ್ಕೆ ತಲುಪಿ ಪ್ಲಾಟ್ ಫಾರಂ ನಿಂದ ನಡೆದು ಹೋಗುತಿದ್ದ ವೇಳೆ ತಂಡವೊಂದು ಅಕ್ರಮಿಸಿದ್ದು ಕೂಡಲೇ ಪ್ರವೀಣ ಚಂದ್ರ ಸ್ಟೇಶನ್ ಮಾಸ್ಟರ್ ರವರ ಕೊಠಡಿಗೆ ತೆರಳಿದಾಗ ಅಲ್ಲಿಗೂ ಬಂದು ತಂಡ ಅಕ್ರಮಿಸಿರುವುದಾಗಿ ದೂರಲಾಗಿದೆ.ಗಾಯಾಳು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

No comments:

Post a Comment