Thursday, February 7, 2013

ಪತ್ನಿಯ ತಲೆಗೆ ಹೊಡೆದು ಪತಿಯ ಆತ್ಮ ಹತ್ಯೆಮಂಜೇಶ್ವರ:ಕಂಠ ಪೂರ್ತಿ ಕುಡಿದು ಪತ್ನಿಯ ತಲೆಗೆ ಹೊಡೆದು ನೆಲಕ್ಕುರುಳಿಸಿ ತಲವಾರಿನಿಂದ ಸ್ವತಃ ಕಾಲನ್ನು ಕಡಿದು ಆತ್ಮಹತ್ಯೆ ಗೈದ  ಭೀಕರ ಘಟನೆ ನಿನ್ನೆ ರಾತ್ರಿ ಇಲ್ಲಿಗೆ ಸಮೀಪದ ಪೈವಳಿಕೆ ಸಮೀಪದ ಕುರುಡಪದವಿನಲ್ಲಿ ನಡೆದಿದೆ.
ಆತ್ಮ ಹತ್ಯೆ ಗೈಯಲ್ಪಟ್ಟ ವ್ಯಕ್ತಿ ಕುರುಡಪದವು ಸಾದಂಗಯ ನಿವಾಸಿ ರವೀಂದ್ರ ಮೂಲ್ಯ(೪೨) ಎಂಬವರಾಗಿದ್ದಾರೆ.
ಘಟನೆಯ ವಿವರ:ಕಳೆದ ರಾತ್ರಿ ೮ ಗಂಟೆಯ ವೇಳೆ ಕಂಠಪುರ್ತಿ ಕುಡಿದು ಮನೆಗೆ ತಲುಪಿದ ರವೀಂದ್ರ ಪತ್ನಿ ಉಷಾಳೊಂದಿಗೆ ಮಾತಿನ ವಾಗ್ವಾದಕ್ಕಿಳಿದಿದ್ದು ಈ ಮಧ್ಯೆ ರವೀಂದ್ರ ಪತ್ನಿಯ ತಲೆಗೆ ದೊಣ್ಣೆಯೊಂದರಲ್ಲಿ ಬಲವಾದ ಏಟು ಕೊಟ್ಟಿದ್ದು ಇದರಿಂದ ಗಂಭೀರ ಗಾಯಗೊಂಡ ಪತ್ನಿ ಪ್ರಜ್ಞ ತಪ್ಪಿ ಬಿದ್ದಿರುತ್ತಾಳೆ.ಇದರಿಂದ ಭಯಭೀತನಾದ ಪತಿ ಬಳಿಕ ಮನೆಯೊಳಗಿದ್ದ ತಲವಾರಿನಿಂದ ತನ್ನ ಎಡಕಾಲಿಗೆ ಕಡಿದು ಗಾಯಗೊಳಿಸಿದ್ದು ಇದರಿಂದ ಅಮಿತ ರಕ್ತಸ್ರಾವವುಂಟಾಗಿ ಪ್ರಜ್ಞೆ ತಪ್ಪಿ ಬಿದ್ದ ರವೀಂದ್ರ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ.
ಇದೇ ಸಂದರ್ಭ ದಂಪತಿಯ ಮೂವರು ಮಕ್ಕಳ ಪೈಕಿ ಒಬ್ಬಳಾದ ಅನುಶ್ರೀ ಮಾತ್ರವೇ ಮನೆಯಲ್ಲಿದ್ದು ಆದರೆ ಅವಳು ಇದು ತಂದೆ ತಾಯಿಯವರ ಮಾಮೂಲಿ ಜಗಳವೆಂದು ಬಾವಿಸಿ ಇವರ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ.ಆದರೆ ದೀರ್ಘ ಹೊತ್ತು ಕಳೆದರೂ ತಂದೆ ತಾಯಿಯವರ ಸದ್ದಿಲ್ಲದ ಕಾರಣ ಕೋಣೆಯಿಂದ ಹೊರ ಬಂದು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ತಾಯಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡು ಗಾಬರಿ ಗೊಂಡ ಪುತ್ರಿ ಕೂಡಲೇ ನೆರೆಕರೆಯವರಿಗೆ ಮಾಹಿತಿ ನೀಡಿದ್ದಾಳೆ.ತಲೆಗೆ ಗಾಯಗೊಂಡ ಉಷಾಳನ್ನು ಮಂಜೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಮಂಜೇಶ್ವರ ಪೊಲೀಸರು ರವೀಂದ್ರನ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ತಲುಪಿಸಿದ್ದಾರೆ.

No comments:

Post a Comment