Thursday, February 7, 2013

ಮಂಗಳೂರಿನಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಡ್ರಗ್ಸ್ ಜಾಲ; ವೌನವಾಗಿದೆ ಪೊಲೀಸ್ ಇಲಾಖೆ


ಮಂಗಳೂರಿನಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಡ್ರಗ್ಸ್ ಜಾಲ; ವೌನವಾಗಿದೆ ಪೊಲೀಸ್ ಇಲಾಖೆ

ವಿಷಜಾಲದಿಂದ ಮುಕ್ತಗೊಂಡ ಯುವತಿಯ ತಂದೆಯ ಆರೋಪ
 ಮಂಗಳೂರು: ನಗರದಲ್ಲಿ ಅದರಲ್ಲೂ ಪ್ರತಿಷ್ಠಿತ ಕಾಲೇಜುಗಳ ಆವರಣದಲ್ಲೇ ಮಾದಕ ದ್ರವ್ಯದ ವಿಷಜಾಲ ಎಗ್ಗಿಲ್ಲದೆ ಮುಂದುವರಿಯು ತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಎಂಬ ಆರೋಪವನ್ನು ಪೋಷಕರೊಬ್ಬರು ಮಾಡಿದ್ದಾರೆ.
ಮಾದಕ ದ್ರವ್ಯ ಜಾಲದ ಸುಳಿಗೆ ಸಿಲುಕಿ ನಲುಗಿದ್ದ ವಿದ್ಯಾರ್ಥಿನಿಯೊಬ್ಬಳು ಕಳೆದ ಒಂದೂ ವರೆ ವರ್ಷದ ಹಿಂದೆ ಆ ವ್ಯಸನದಿಂದ ಮುಕ್ತ ಗೊಂಡು ನಗರದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ನಡೆಸುತ್ತಿದ್ದಾಳೆ. ಆಕೆಯ ತಂದೆ ಮಾಧ್ಯಮ ದವರೆದುರು ಇಂದು ಈ ವಿಷಜಾಲದ ಬಗ್ಗೆ ಎಳೆಎಳೆಯಾಗಿ ತೆರೆದಿಟ್ಟರು. ನಗರದಲ್ಲಿ ಇಂದು ರಾಜ್ಯ ಮಹಿಳಾ ಆಯೋಗದ ನಿಕಟಪೂರ್ವ ಅಧ್ಯಕ್ಷೆ ಮಂಜುಳಾ ಉಪಸ್ಥಿತಿಯಲ್ಲಿ ನಡೆದ ಕೆಜೆಪಿ ಪಕ್ಷದ ಪತ್ರಿಕಾಗೋಷ್ಠಿಯಲ್ಲಿ ಇವರು ಭಾಗವಹಿಸಿದ್ದರು. 
ನನ್ನ ಮಗಳ ಪರಿಸ್ಥಿತಿ ನಮ್ಮಲ್ಲಿ ರಕ್ತ ಕಣ್ಣೀರು ತರಿಸಿತ್ತು
‘‘10ನೆ ತರಗತಿಯಲ್ಲಿರುವಾಗಲೇ ನನ್ನ ಮಗಳು ಈ ಮಾದಕ ದ್ರವ್ಯದ ವ್ಯಸನಕ್ಕೆ ತುತ್ತಾಗಿದ್ದಳು. ಶಾಲೆಗೆ ಹೋಗುವ ಸಮಯ ಪರಿಚಯವಾದ ಸ್ನೇಹಿತರ ಜೊತೆ ಸೇರಿ ಆಕೆ ನಮಗೆ ಅರಿವಿಲ್ಲ ದಂತೆಯೇ ವೈಟ್ನರ್ ಎಂಬ ಮಾದಕ ವಸ್ತುವಿನ ತೆಕ್ಕೆಗೆ ಸಿಲುಕಿದ್ದಳು. ಅದು ಸಿಗದಿದ್ದಾಗ ಬ್ಲೇಡ್‌ನಲ್ಲಿ ತನ್ನ ಕೈಗಳ ಮೇಲೆ ಸೀಳಿಕೊಂಡು ಬಿಡುತ್ತಿದ್ದಳು. ಅವಳ ಸ್ಥಿತಿ ನಮಗೆ ರಕ್ತ ಕಣ್ಣೀರು ತರಿಸಿತ್ತು’’ ಎಂದು ತಮ್ಮ ಮಗಳ ಜೊತೆ ತಾವನುಭವಿಸಿದ ನರಕ ಯಾತನೆಯನ್ನು ಜಲ್ಲಿಗುಡ್ಡೆ ನಿವಾಸಿ ಬಿಚ್ಚಿಟ್ಟರು. ‘‘ನಮಗೆ ನಮ್ಮ ಮಗಳ ಅಸಹಾಯಕ ಸ್ಥಿತಿ ಅರಿವಾಗಿ ಆಕೆಗೆ ಸುಮಾರು ಆರು ತಿಂಗಳ ಕಾಲ ಚಿಕಿತ್ಸೆ ಕೊಡಿಸಲಾಯಿತು. ಆಕೆಯ ಚಿಕಿತ್ಸೆಯ ಸಂದರ್ಭ ನಾವು ಪಟ್ಟ ಕಷ್ಟ, ನಾವಿಟ್ಟ ಕಣ್ಣೀರು ಅಷ್ಟಿಷ್ಟಲ್ಲ. ಕೈ ಕಾಲುಗಳನ್ನು ಕಟ್ಟಿಹಾಕಿ ಆಕೆಯನ್ನು ಹಗಲು ರಾತ್ರಿಯೆನ್ನದೆ ಕಾವಲು ಕಾಯುವಂತಹ ಪರಿಸ್ಥಿತಿ. ಹೆತ್ತವರಿಗೆ ಇಂತಹ ಪರಿಸ್ಥಿತಿ ಎಂದೂ ಬರಬಾರದು. ಈ ವಿಷಜಾಲ ಈಗಲೂ ಮುಂದು ವರಿಯುತ್ತಿದೆ. ಇದೀಗ ನನ್ನ ಮಗಳು ಸಂಪೂರ್ಣ ವಾಗಿ ಮಾದಕ ವ್ಯಸನದಿಂದ ಹೊರಬಂದು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದಾಳೆ’’ ಎನ್ನುತ್ತಾರವರು.
‘‘ಹೈಸ್ಕೂಲ್‌ನ ಹುಡುಗಿಯರನ್ನು ಆಕರ್ಷಿಸಿ ಕೊಳ್ಳುವ ಈ ಮಾದಕ ದ್ರವ್ಯ ಜಾಲದವರು, ಅವರಿಗೆ ತಿಂಡಿ ತಿನಿಸು ಚಾಕಲೇಟ್ ನೀಡಿ ಪುಸ ಲಾಯಿಸುತ್ತಾರೆ. ಚಾಕಲೇಟ್‌ನಲ್ಲಿ ಆಲ್ಕೋ ಹಾಲ್ ಬೆರೆಸಲಾಗುತ್ತದೆ. ಈ ಚಟಕ್ಕೆ ಬೀಳುವ ಹುಡುಗಿಯರು ಅದರಿಂದ ಹೊರಬರಲಾಗದೆ ಒದ್ದಾಡುತ್ತಾರೆ ಎಂದವರು ತಿಳಿಸಿದರು.
ನಗರದಲ್ಲಿ ಈ ಮಾದಕ ದ್ರವ್ಯ ಜಾಲ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಾಚರಿ ಸುತ್ತಿದೆ. ನನ್ನ ಮಗಳನ್ನು ಈ ವ್ಯಸನಕ್ಕೆ ತುತ್ತಾಗಿ ಸುವಲ್ಲಿ ರಾಜಕಾರಣಿಯೊಬ್ಬರ ಮಗ ಹಾಗೂ ಆತನ ಸ್ನೇಹಿತರು ಶಾಮೀಲಾಗಿದ್ದರು. ನಗರದ ಕೆಲ ಹೊಟೇಲ್‌ಗಳು, ಬಾರ್‌ಗಳಲ್ಲಿ ಈ ಕೃತ್ಯ ಸರಾಗವಾಗಿ ನಡೆಯುತ್ತಿದೆ. ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಕೆಲವರು ನಡೆಸುತ್ತಿರುವ ಪಬ್‌ಗಳು, ಹೊಟೇಲ್‌ಗಳಲ್ಲೂ ಈ ಮಾದಕ ಜಾಲ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಕ್ರಮ ಮಾತ್ರ ಕೈಗೊಳ್ಳುತ್ತಿಲ್ಲ’’ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
‘‘ನನ್ನ ಮಗಳಿಗಾದ ಪರಿಸ್ಥಿತಿಯಿಂದ ನೊಂದ ನಾನು ಈಗ ಸ್ಥಳೀಯರ ತಂಡವೊಂದರ ಮೂಲಕ ಕೆಲವು ಬಾರ್, ಹೊಟೇಲ್‌ಗಳಲ್ಲಿ ಕಾರ್ಯಾ ಚರಿಸುತ್ತಿರುವ ಡ್ರಗ್ಸ್ ಜಾಲದ ವಿರುದ್ಧ ಕಣ್ಣಿಡುತ್ತಿದ್ದೇವೆ. ಮಾದಕ ಜಾಲಕ್ಕೆ ಬಲಿಯಾ ಗುತ್ತಿರುವ ಹೆಣ್ಮಕ್ಕಳು ಕಂಡಲ್ಲಿ ತಿಳಿ ಹೇಳುತ್ತಿ ದ್ದೇವೆ’’ ಎಂದವರು ಹೇಳಿದ್ದಾರೆ.
‘‘ಮಾದಕ ವ್ಯಸನಕ್ಕೆ ತುತ್ತಾದವರಿಗೆ ತಮ್ಮ ಬಗ್ಗೆ ಪರಿಜ್ಞಾನವೇ ಇರುವುದಿಲ್ಲ. ಈ ಅಂಶವನ್ನು ದುರ್ಬಳಕೆ ಮಾಡಿಕೊಳ್ಳುವ ಮಾದಕ ದ್ರವ್ಯ ಜಾಲವು ಹೆಣ್ಮಕ್ಕಳ ನಗ್ನಾವಸ್ಥೆಯ ವೀಡಿಯೊ ಚಿತ್ರೀಕರಣ ಮಾಡುವುದನ್ನೂ ತಳ್ಳಿ ಹಾಕಲಾಗದು. ಈ ಕಾರಣದಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸುವ ಜೊತೆಗೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆರೋಪಿಗಳಿಗೆ ಜಾಮೀನು ಸಿಗದ ಶಿಕ್ಷೆಗೊಳ ಪಡಿಸಬೇಕಿದೆ’’ ಎಂದವರು ಹೇಳಿದ್ದಾರೆ.

No comments:

Post a Comment