Friday, February 15, 2013

ಶ್ರೀಲಂಕಾ ಜೈಲಿನಲ್ಲಿರುವ ಮಂಜೇಶ್ವರದ ವ್ಯಕ್ತಿಯಿಂದ ಬಿಡುಗಡೆಗಾಗಿ ಯಾಚನೆಮಂಜೇಶ್ವರ:ಕಳೆದ 15 ವರ್ಷಗಳಿಂದ ಶ್ರೀಲಂಕಾದ ಕೊಲಂಬೋ ಜೈಲಿನಲ್ಲಿ ಖೈದಿಯಾಗಿ ಕಾಲಕಳೆಯುತ್ತಿರುವ ಮಂಜೇಶ್ವರ ನಿವಾಸಿಯೊಬ್ಬರು ಪ್ರಪ್ರಥಮ ಬಾರಿಗೆ ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಿಡುಗಡೆ ಕ್ರಮಕ್ಕಾಗಿ ನೆರವು ಯಾಚಿಸಿದ್ದಾರೆ.
ಇಲ್ಲಿಗೆ ಸಮೀಪದ ಹೊಸಂಗಡಿ ಪಿರಾರ ಮೂಲೆ ನಿವಾಸಿ ಇಸ್ಮಾಯಿಲ್ ಎಚ್.ಕೆ.ಎಂಬವರಾಗಿದ್ದಾರೆ ನೆರವನ್ನು ಯಾಚಿಸಿದವರು.ಕಳೆದ ೧೫ ವರ್ಷಗಳಿಂದ ಅಸಹಾಯಕ ಸ್ಥಿತಿಯಲ್ಲಿ ಶ್ರೀಲಂಕಾದ ಕೊಲಂಬೋ ಜೈಲಿನಲ್ಲಿದ್ದಾರೆ.ಹೊಸಂಗಡಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಇಸ್ಮಾಯಿಲ್ 1998 ರಲ್ಲಿ ಬಟ್ಟೆ ಖರೀದಿಸಲು ತಮಿಳುನಾಡಿನ ಚೆನ್ನೈ ಗೆ ತೆರಳಿದ್ದರು ಅಲ್ಲಿಯ ಕೆಲವು ಏಜಂಟ್ ಗಳು ಇವರಲ್ಲಿ ಕೊಲಂಬೋ ಕ್ಕೆ ಬಟ್ಟೆಬರೆ ಸಾಗಿಸಲು ತಿಳಿಸಿದ್ದು ಅದರಂತೆ ಬಟ್ಟೆ ಬರೆ ಜತೆಯಾಗಿ ಕೊಳಂಬೋ ಕ್ಕೆ  ತೆರಳಿದ ಇಸ್ಮಾಯಿಲ್ ರವರನ್ನು ವಿಮಾನ ನಿಲ್ದಾನದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬಟ್ಟೆ ಬರೆಗಳ ಜತೆಯಾಗಿ ಮಾದಕ ವಸ್ಥುಗಳನ್ನು ಪತ್ತೆ ಹಚ್ಚಿದ್ದರು ಅವಾಗಲೇ ಇಸ್ಮಾಯಿಲ್ ರವರಿಗೆ ಗೊತ್ತಾದದ್ದು ತಾನು ಮೋಸ ಹೋದ ವಿಷಯ ಕೂಡಲೇ ಅಧಿಕಾರಿಗಳು ಇಸ್ಮಾಯಿಲ್ ರವರನ್ನು ಜೈಲಿಗಟ್ಟಿರುತ್ತಾರೆ.ಇದೀಗ ಸುದೀರ್ಘವಾದ 15 ವರ್ಷ ಕಳೆದರೂ ಇವರ ಸತ್ಯಾಂಶವನ್ನು ಯಾರಿಂದಲೂ ಬಹಿರಂಗಗೊಳಿಸಲು ಸಾದ್ಯವಾಗಿಲ್ಲ. ಇದೀಗ ಇಸ್ಮಾಯಿಲ್ ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಿಡುಗಡೆ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

No comments:

Post a Comment