Tuesday, February 19, 2013

ಅಪಾಯದಂಚಿನಲ್ಲಿರುವ ಮರದ ಅರ್ಧಬಾಗ ಮುರಿದು ಬಿದ್ದರೂ:ಎಚ್ಚೆತ್ತುಗೊಳ್ಳದ ಅಧಿಕಾರಿಗಳು
ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ:ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿ ಬ್ರ‍ಹತಾಕಾರದ ಮರವೊಂದರ ಅರ್ಧಬಾಗ ಪಕ್ಕದಲ್ಲೇ ಇರುವ ಎರಡು ಮನೆಗಳ ಆವರಣಗೋಡೆಗೆ ಬಿದ್ದು ಆವರಣ ಗೋಡೆಯ ಅರ್ಧಬಾಗ ನಾಶವಾಗಿದ್ದು ಸ್ಥಲದಲ್ಲಿದ್ದ ವಿದ್ಯಾರ್ಥಿಗಳು ಹಾಗು ಆಟೋ ರಿಕ್ಷಾಗಳು ಅದೃಷ್ಟವಶಾತ್ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.ಮರದ ಬಾಕಿ ಉಳಿದ ಬಾಗ ಅಪಾಯದಂಚಿನಲ್ಲಿದ್ದು ಇದರ ಬಗ್ಗೆ ಸಂಭಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾರೂ ಸ್ಪಂಧಿಸುವುದಿಲ್ಲವೆಂದು ದೂರಲಾಗಿದೆ.
ಉಪ್ಪಳ ಹಿದಾಯತ್ ನಗರದಲ್ಲಿರುವ ಸರಕಾರಿ ಹೈಯರ್ ಸೆಕಂಡರಿ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಬ್ರ‍ಹತ್ ಆಕಾರದ ಮರವೊಂದು ಇತ್ತೀಚೆಗೆ ಧೀಡೀರಣೆ ಮುರಿದು ಬಿದ್ದು ವಿಧ್ಯುತ್ ತಂತಿಯ ಮೇಲೆ ಬಿದ್ದು ಅಲ್ಲಿಂದ ನೇರವಾಗಿ ಅರಬಿಕ್ ಕೊಟೇಜ್  ಅಬ್ದುಲ್ಲಾ ಹಾಗು ಆಯಿಷಾ ಮಂಜಿಲ್ ನ ಅಬ್ದುಲ್ ಖಾದರ್ ಎಂಬವರ ಮನೆಯ ಆವರಣಗೋಡೆಗೆ ಬಿದ್ದು ಸ್ಪೋಟದ ರೀತಿಯಲ್ಲಿ ಶಭ್ದವಾಗಿ ಬೆಂಕಿ ಹೊತ್ತಿಕೊಂಡಿತ್ತು.ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗು ಆಟೋ ರಿಕ್ಷಾಗಳು ಅದೃಷ್ಟವಷಾತ್ ಯಾವುದೇ ಅಪಾಯಗಳಿಲ್ಲದೆ ಪಾರಾದ ಘಟನೆ ನಡೆದಿದೆ. ಇದೀಗ ಇದರ ಅರ್ಧಬಾಗ ಅಪಾಯದಂಚಿನಲ್ಲಿದೆ  ಈಗಾಗಲೇ ನಾಗರಿಕರು ಈ ಬಗ್ಗೆ ಪಂಚಾಯತ್ ಅಧಿಕೃತರ ಹಾಗು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರುಗಳ ಗಮನಕ್ಕೆ ತಂದಿದ್ದರೂ ಯಾರೂ ಈ ಬಗ್ಗೆ ಗಮನ ಹರಿಸಲಿಲ್ಲವೆಂದು ನಾಗರಿಕರು ದೂರಿದ್ದಾರೆ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ಅಧಿಕಾರಿಗಲ ವಿರುದ್ದ ನಾಗರಿಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.ಇವತ್ತು ಸ್ಥಳಕ್ಕೆ ಬೇಟಿ ನೀಡಿದ ಮಂಜೇಶ್ವರ ಕನ್ಸ್ಯೂಮರ್ ಸೊಸೈಟಿಯ ಅಧಿಕೃತರು ಸಂಭಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಧಿಕಾರಿಗಳು ಇದು ನಮ್ಮ ಕೆಲಸವಲ್ಲ ಜಿಲ್ಲಾಧಿಕಾರಿಗೆ ದೂರು ನೀಡಿ ಎಂಬ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಸಂಭಂಧ ಪಟ್ಟವರು ಇತ್ತ ಕಡೆ ಗಮನ ಹರಿಸಲು ನಾಗರಿಕರು ಆಗ್ರಹಿಸಿದ್ದಾರೆ

No comments:

Post a Comment