Friday, February 22, 2013

ರಿಕ್ಷಾ ಚಾಲಕನಿಗೆ ತಂಡದಿಂದ ಹಲ್ಲೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿದ ತಂಡವೊಂದು ಚಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ ಘಟನೆ ಉಪ್ಪಳಕ್ಕೆ ಸಮೀಪದ ಪ್ರತಾಪ ನಗರದಿಂದ ವರದಿಯಾಗಿದೆ.
ಪುಳಿಕುತ್ತಿ ನಿವಾಸಿ ಆಟೋ ಚಾಲಕ ಸಮೀರ್(೨೫) ಎಂಬವನಾಗಿದ್ದಾನೆ ಹಲ್ಲೆಗೊಳಗಾದ ವ್ಯಕ್ತಿ.ಹಲ್ಲೆಯಿಂದ ಗಾಯಗೊಂಡ ಸೆಮೀರ್ ನನ್ನು ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ನಿನ್ನೆ ಸಂಜೆ ಮನೆಯಿಂದ ಬಾಡಿಗೆಗೆಂದು ತೆರಳುತ್ತಿರುವಾಗ ಮನೆಯ ಅಲ್ಪ ದೂರದಲ್ಲಿ ಬೈಕ್ ನಲ್ಲಿ ಆಗಮಿಸಿದ ವ್ಯಕ್ತಿಯೊಬ್ಬ ರಿಕ್ಷಾವನ್ನು ತಡೆದು ನಿಲ್ಲಿಸಿ ಹಿಗ್ಗಾ ಮಗ್ಗಾ ಥಳಿಸಿದನೆಂದು ದೂರಲಾಗಿದೆ ಜತೆಯಾಗಿ ಇತರ ಮೂವರು ತಲುಪಿ ಜತೆಯಾಗಿ ಸೇರಿ ಥಳಿಸಿರುವುದಾಗಿ ದೂರಲಾಗಿದೆ. ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುತ್ತಾರೆ.

No comments:

Post a Comment