Monday, February 18, 2013

ಸ್ವಾತಂತ್ರ್ಯ ಸಮರ ಸೇನಾನಿಗಳ ಅಂತ್ಯ ಸಂಸ್ಕಾರದಲ್ಲಿ ಇಬ್ಬಗೆ ನೀತಿ ಖಂಡನೀಯ-ಸಿಪಿಐ


ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ:ಇತ್ತೀಚೆಗೆ ನಿಧನ ಹೊಂದಿದ ಇಬ್ಬರು ಸ್ವಾಂತಂತ್ರ್ಯ ಸಮರ ಸೇನಾನಿಗಳ ಅಮ್ತ್ಯ ಸಂಸ್ಕಾರ ಕ್ರಿಯೆಯಲ್ಲಿ ಇಬ್ಬಗೆ ನೀತಿಯನ್ನು ಅನುಸರಿಸಿದ ಅಧಿಕೃತರ ನಿಲುವನ್ನು ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಖಂಡಿಸಿದೆ.
ಗುರುವಾರ ಮದ್ಯರಾತ್ರಿ ಮೃತರಾದ ಪೆರುಂಬಳದ .ಕೃಷ್ಣನ್ ಮಾಸ್ಟರ್ ಶವದಹನ ಕಾರ್ಯಕ್ರಮಕ್ಕೆ ಮುಂಚಿತವಾಗಿ ಸ್ವಾತಮ್ತ್ರ್ಯ ಸಮರ ಸೇನಾನಿಯೆಂಬ ನೆಲೆಯಲ್ಲಿ ಔದ್ಯೋಗಿಕ ಗೌರವಗಳೊಂದಿಗೆ ತುಪಾಕಿ ಸಿಡಿಸಿ ವಂದನೆ ಸಲ್ಲಿಸುವ ಕ್ರಮವನ್ನು ಅಧಿಕೃತರು ನಡೆಸಿಯೇ ಇಲ್ಲವೆಂದು ಆರೋಪಿಸಲಾಗಿದ್ದು ಜಿಲ್ಲಾಧಿಕಾರಿಯವರ ರೀಥೋ ಮಾತ್ರವೇ ಸಮರ್ಪಿಸಲ್ಪಟ್ಟದ್ದು ಎಂದು ಹೇಳಲಾಗಿದೆ.ಆದರೆ ಶುಕ್ರವಾರ ಮೃತರಾದ ಚೀಮೇನಿಯ ವಿಜಯ ನಂಬಿಯಾರ್ ರವರ ಶವಧಹನ ಕಾರ್ಯಕ್ರಮಕ್ಕೆ ಮುಂಚಿತವಾಗಿ ಎಲ್ಲಾ ವಿಧದ ಔಧ್ಯೋಗಿಕ ವಿಧಿ ವಿಧಾನಗಳಲ್ಲಿ ಗೌರವ ತುಪಾಕಿ ಸಿಡಿಸಿ ವಂದನೆ ಸಲ್ಲಿಸಿ ನಡೆಸಲಾಗಿದೆ. ರೀತಿಯ ಸ್ವಾತಂತ್ರ್ಯ ಸೇನಾನಿಗಳ ಅಂತ್ಯ ಕ್ರಿಯೆಯಲ್ಲಿ ಇಬ್ಬಗೆ ನೀತಿ ತೋರಿಸಿದ ಸರಕಾರದ ನಿಲುವು ಯಾವುದೇ ರೀತಿಯಿಂದ ನೀತಿಯುಕ್ತವಲ್ಲ. ಸ್ವಾತಂತ್ರ್ಯ ಸಮರ ಸೇನಾನಿಯೊಬ್ಬರಿಗೆ ಔದ್ಯೋಗಿಕ ಗೌರವ ನೀಡಿ ಅಮ್ತ್ಯ ಸಂಸ್ಕಾರ ನದೆಸುವುದು ಇನ್ನೊಬ್ಬ ಸ್ವಾತಂತ್ರ್ಯ ಸಮರ ಸೇನಾನಿಗೆ ಅದೇ ಗೌರವವನ್ನು ನಿರಾಕರಿಸಿದ ಸರಕಾರದ ಕ್ರಮವನ್ನು ಖಂಡಿಸಿದ ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಬಗ್ಗೆ ಸರಕಾರ ಕ್ಶಮೆ ಯಾಚಿಸಬೇಕೆಂದು ಆಗ್ರಹಿಸಿದೆ

No comments:

Post a Comment