Thursday, February 28, 2013

ವಿದ್ಯುತ್ ಇಲಾಖೆಯ ಮೇಲ್ವಿಚಾರಕನ ಅನುಚಿತ ವರ್ತನೆ :ದೂರುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಮಂಜೇಶ್ವರ ವಿದ್ಯುತ್ ಇಲಾಖೆಯ ಮೇಲ್ವಿಚಾರಕನೊಬ್ಬ ಸಂಘಟನೆಯೊಂದರ ಕಾರ್ಯದರ್ಶಿಯಲ್ಲಿ ಉಡಾಫೆಯಿಂದ ವರ್ತಸಿದ ಬಗ್ಗೆ ದೂರು ದಾಖಲಾಗಿದೆ.
ಮಂಜೇಶ್ವರ ವಿದ್ಯುತ್ ಇಲಾಖೆಯ ಮೇಲ್ವಿಚಾರಕ ರತನ್ ಎಂಬವನು ಮಂಜೇಶ್ವರ ಗ್ರಾಹಕರ ವೇದಿಕೆಯ ಕಾರ್ಯದರ್ಶಿಯವರಲ್ಲಿ ಅನುಚಿತವಾಗಿ ವರ್ತಿಸಿ ಉಡಾಫೆಯಿಂದ ಉತ್ತರಿಸಿ ಅವಾಚ್ಯ ಶಭ್ದಗಳಿಂದ ನಿಂದಿಸಿರುವುದಾಗಿ ವೇದಿಕೆಯ ಅಧ್ಯಕ್ಷರಾದ ಮುರಳೀಧರ್ ಭಟ್ ಕೇರಳ ವಿದ್ಯುತ್ ಇಲಾಖೆಯ ವಿಜಿಲೆನ್ಸ್ ಹಾಗು ಅಸಿಸ್ಟಂಟ್ ಇಂಜಿನಿಯರ್ ರವರಿಗೆ ದೂರನ್ನು ನೀಡಿರುತ್ತಾರೆ.ಇವತ್ತು ಸಂಜೆ ಅನೀರಿಕ್ಷಿತವಾಗಿ ಉಂಟಾದ ವಿದ್ಯುತ್ ಮೊಟಕಿನ ಬಗ್ಗೆ ವಿವರಣೆಯನ್ನು ಕೇಳಲು ವೇದಿಕೆಯ ಕಾರ್ಯದರ್ಶಿ ರಹಿಮಾನ್ ಉದ್ಯಾವರ ರವರು ಕಚೇರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ ಪೋನನ್ನು ಎತ್ತಿದ ಮೇಲ್ವಿಚಾರಕ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ನೀಡದೆ  ಅನುಚಿತವಾಗಿ ವರ್ತಿಸಿ ಅವಾಚ್ಯ ಶಭ್ದಗಳನ್ನು ಬಳಸಿ ಉಡಾಫೆಯಿಂದ ಉತ್ತರಿಸಿರುವುದಾಗಿ ದೂರಲಾಗಿದೆ. ಮೊದಲು ಕೂಡಾ ಹಲವು ಸಲ ರಾತ್ರಿ ವೇಳೆಯಲ್ಲಿ ವಿದ್ಯುತ್ ಕಚೇರಿಯಲ್ಲಿ ಇಂತಹ ಅನುಭವಗಳು ಎದುರಾಗಿರುವುದಾಗಿ ದೂರಲ್ಲಿ ಉಲ್ಲೇಖಿಸಲಾಗಿದೆ

No comments:

Post a Comment