Wednesday, February 6, 2013

ಕಾರಿನಲ್ಲಿ ಮೃತದೇಹ ಪತ್ತೆ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ ಫೆಬ್ರವರಿ -06-2013


ಕಾರಿನಲ್ಲಿ ಮೃತದೇಹ ಪತ್ತೆ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ
ಕಾಸರಗೋಡು, ಫೆ.5: ಒಂದೇ ಕುಟುಂಬದ ನಾಲ್ವರ ಮೃತದೇಹ ಕಾರಿನಲ್ಲಿ ಪತ್ತೆಯಾದ ಘಟನೆಯ ಕುರಿತು ತನಿಖೆಗೆ ಡಿವೈಎಸ್ಪಿ ಕೆ.ವಿ.ರಘುರಾಮನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ತಂಡದಲ್ಲಿ ಕಾಸರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್, ಸಿವಿಲ್ ಪೊಲೀಸ್ ಅಧಿಕಾರಿ ಸಿ.ಕೆ. ಬಾಲಕೃಷ್ಣನ್ ಮೊದಲಾದವರು ಸದಸ್ಯರಾಗಿದ್ದಾರೆ.
ಜನವರಿರ 29ರಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಶಾಲಾ ಬಳಿಯ ಪಿ.ಸಿ. ಸೋನಿಕುಟ್ಟಿ, ಅವರ ಪತ್ನಿ ಕೆ.ಎಂ. ತ್ರೇಸ್ಯಮ್ಮ, ಮಕ್ಕಳಾದ ಜೆರಿನ್ ಮತ್ತು ಜುವೆಲ್‌ರ ಮೃತದೇಹ ಮಾಯಿಪ್ಪಾಡಿ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಪತ್ತೆಯಾಗಿತ್ತು. ತ್ರೇಸ್ಯಮ್ಮ ಹಾಗೂ ಇಬ್ಬರು ಮಕ್ಕಳ ತಲೆಗೆ ಮಾರಕವಾದ ಪೆಟ್ಟು ಬಿದ್ದಿರುವುದೇ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಸೋನಿಕುಟ್ಟಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪರಿಯಾರಂ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಹಾಗೂ ಪೊಲೀಸ್ ಸರ್ಜನ್ ಎಸ್.ಗೋಪಾಲಕೃಷ್ಣ ಪಿಳ್ಳೆ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿದೆ. ಕುಟುಂಬಸ್ಥರು ಸಾವಿನ ಕುರಿತು ಸಂಶಯಗಳು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ತಂಡ ರಚಿಸಲಾಗಿದೆ. ಸುಮಾರು 5 ಕೋಟಿ ರೂ. ಆಸ್ತಿ ಹೊಂದಿರುವ ಸೋನಿಕುಟ್ಟಿ 50 ಲಕ್ಷ ರೂ.ನ ಸಾಲದಿಂದ ಬೇಸತ್ತು ಇಂತಹ ಕೃತ್ಯ ಎಸಗಲಾರರು. ಮಾತ್ರವಲ್ಲ, ದಂಪತಿ ಉತ್ತಮ ಉದ್ಯೋಗದಲ್ಲಿದ್ದು, ಕೃತ್ಯದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇರಬಹುದು ಎಂಬುದು ಕುಟುಂಬಸ್ಥರ ಸಂಶಯ.

ಕಾಸರಗೋಡು: ಒಂದೇ ಕುಟುಂಬದ ನಾಲ್ವರ ಮೃತದೇಹ ಕಾರಿನಲ್ಲಿ ಪತ್ತೆಯಾದ ಘಟನೆಯ ಕುರಿತು ತನಿಖೆಗೆ ಡಿವೈಎಸ್ಪಿ ಕೆ.ವಿ.ರಘುರಾಮನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ತಂಡದಲ್ಲಿ ಕಾಸರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್, ಸಿವಿಲ್ ಪೊಲೀಸ್ ಅಧಿಕಾರಿ ಸಿ.ಕೆ. ಬಾಲಕೃಷ್ಣನ್ ಮೊದಲಾದವರು ಸದಸ್ಯರಾಗಿದ್ದಾರೆ.
ಜನವರಿರ 29ರಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಶಾಲಾ ಬಳಿಯ ಪಿ.ಸಿ. ಸೋನಿಕುಟ್ಟಿ, ಅವರ ಪತ್ನಿ ಕೆ.ಎಂ. ತ್ರೇಸ್ಯಮ್ಮ, ಮಕ್ಕಳಾದ ಜೆರಿನ್ ಮತ್ತು ಜುವೆಲ್‌ರ ಮೃತದೇಹ ಮಾಯಿಪ್ಪಾಡಿ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಪತ್ತೆಯಾಗಿತ್ತು. ತ್ರೇಸ್ಯಮ್ಮ ಹಾಗೂ ಇಬ್ಬರು ಮಕ್ಕಳ ತಲೆಗೆ ಮಾರಕವಾದ ಪೆಟ್ಟು ಬಿದ್ದಿರುವುದೇ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಸೋನಿಕುಟ್ಟಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪರಿಯಾರಂ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಹಾಗೂ ಪೊಲೀಸ್ ಸರ್ಜನ್ ಎಸ್.ಗೋಪಾಲಕೃಷ್ಣ ಪಿಳ್ಳೆ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿದೆ. ಕುಟುಂಬಸ್ಥರು ಸಾವಿನ ಕುರಿತು ಸಂಶಯಗಳು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ತಂಡ ರಚಿಸಲಾಗಿದೆ.
ಸುಮಾರು 5 ಕೋಟಿ ರೂ. ಆಸ್ತಿ ಹೊಂದಿರುವ ಸೋನಿಕುಟ್ಟಿ 50 ಲಕ್ಷ ರೂ.ನ ಸಾಲದಿಂದ ಬೇಸತ್ತು ಇಂತಹ ಕೃತ್ಯ ಎಸಗಲಾರರು. ಮಾತ್ರವಲ್ಲ, ದಂಪತಿ ಉತ್ತಮ ಉದ್ಯೋಗದಲ್ಲಿದ್ದು, ಕೃತ್ಯದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇರಬಹುದು ಎಂಬುದು ಕುಟುಂಬಸ್ಥರ ಸಂಶ

No comments:

Post a Comment