Saturday, February 9, 2013

ತಾಲೂಕು ಘೋಷಣೆ: ಕಡಬದಲ್ಲಿ ಸಂಭ್ರಮ


ತಾಲೂಕು ಘೋಷಣೆ: ಕಡಬದಲ್ಲಿ ಸಂಭ್ರಮ


 ಫೆಬ್ರವರಿ -09-2013

ತಾಲೂಕು ಘೋಷಣೆ: ಕಡಬದಲ್ಲಿ ಸಂಭ್ರಮ
     ತಸ್ಲೀಮ್ ಕಡಬ
ಕಡಬ, ಫೆ.8: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್‌ನಲ್ಲಿ ಕಡಬ ತಾಲೂಕು ರಚನೆಯ ಘೋಷಣೆ ಮಾಡುತ್ತಿದ್ದಂತೆಯೇ ಕಡಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಆರು ದಶಕಗಳ ಬೇಡಿಕೆ ಕೊನೆಗೂ ಸಾಕಾರಗೊಂಡಿದೆ.
ಅತ್ತ ವಿಧಾನಸಭೆಯಲ್ಲಿ ಕಡಬವನ್ನು ತಾಲೂಕಾಗಿ ಘೋಷಿಸುತ್ತಿದ್ದಂತೆಯೇ ಇತ್ತ ಕಡಬದಲ್ಲಂತೂ ತಾಲೂಕು ರಚನೆಯಾದಷ್ಟು ಸಂಭ್ರಮದ ವಾತಾ ವರಣ ಸೃಷ್ಟಿಯಾಗಿತ್ತು. ಸಂಜೆ ಸಾರ್ವಜನಿಕರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಖುಷಿಪಟ್ಟರು. ತಾಲೂಕು ರಚನೆ ಕುರಿತಂತೆ ಪ್ರತಿಕ್ರಿಯಿಸಿದ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಪಿಲಿಫ್, ನಮ್ಮ ಬಹುದೊಡ್ಡ ಬೇಡಿಕೆ ಈಡೇರಿದೆ. ಇದಕ್ಕಾಗಿ ಸಮಿತಿಯು ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಶೀಘ್ರದಲ್ಲೇ ಕಡಬಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ವ್ಯವಸ್ಥೆ ಒದಗುವಂತಾ ಗಲು ಸರಕಾರವು ಆಸಕ್ತಿ ವಹಿಸಬೇಕು ಎಂದರು.
ಹೋರಾಟ ಸಮಿತಿಯ ಸಂಚಾಲಕ ಕೃಷ್ಣ ಶೆಟ್ಟಿ ಮಾತನಾಡಿ, ಈ ಭಾಗದ ಜನರು ಹೋರಾಟ ಸಮಿತಿಯ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರ ಅವಧಿಯಿಂದ ಮನವಿ ಸಲ್ಲಿಸುತ್ತಾ ಹೋರಾಟಗಳನ್ನು ಮುಂದುವರಿಸುತ್ತಾ ಬಂದಿದ್ದೇವೆ. ಇದೀಗ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಾಲೂಕು ರಚನಾ ಪ್ರಕ್ರಿಯೆಗೆ ಚಾಲನೆ ದೊರೆತಿರುವುದು ಸಂತಸ ತಂದಿದೆ ಎಂದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ. ವರ್ಗೀಸ್ ಮಾತನಾಡಿ, ನಮ್ಮ ಸರಕಾರ ರಾಜ್ಯ ದಲ್ಲಿ ಅಧಿಕಾರದಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಶ್ರಮದಿಂದ ಇಲ್ಲಿಗೆ ವಿಶೇಷ ತಹಶೀಲ್ದಾರ್ ನೇಮಕ ಮಾಡಿ ತಾಲೂಕು ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇದೀಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಡಬ ತಾಲೂಕು ಘೋಷಣೆ ಮಾಡಿ ಈ ಭಾಗದ ಜನರಿಗೆ ನ್ಯಾಯ ಒದಗಿಸಿದ್ದಾರೆ ಎಂದರು.
ವಿಜಯೋತ್ಸವದ ವೇಳೆ ಹರೀಶ್ ಪೈ, ಪುಲಸ್ಯಾ ರೈ, ಪಿ.ಪಿ.ವರ್ಗೀಸ್, ಸೀತಾರಾಮ ಗೌಡ ಪೊಸವಳಿಕೆ, ಆಶಾ ತಿಮ್ಮಪ್ಪಗೌಡ, ಕೆ.ಎಂ. ಹನೀಫ್, ಅಶ್ರಫ್, ನೀಲಾವತಿ ಶಿವರಾವ್, ಎಚ್.ಕೆ.ಇಲ್ಯಾಸ್, ಸಿ.ಪಿ.ಸೈಮನ್, ಸತೀಶ್ ಕೊಡೆಂಕೀರಿ, ಸುಜಿತ್ ಪಿ.ಕೆ., ಸುಧೀರ್ ಬಿಳಿನೆಲೆ, ಜೋಸೆಫ್ ಸಿ.ಜೆ. ಹಾಗೂ ತಾಲೂಕು ಹೋರಾಟ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಕಡಬ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್‌ನಲ್ಲಿ ಕಡಬ ತಾಲೂಕು ರಚನೆಯ ಘೋಷಣೆ ಮಾಡುತ್ತಿದ್ದಂತೆಯೇ ಕಡಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಆರು ದಶಕಗಳ ಬೇಡಿಕೆ ಕೊನೆಗೂ ಸಾಕಾರಗೊಂಡಿದೆ.
ಅತ್ತ ವಿಧಾನಸಭೆಯಲ್ಲಿ ಕಡಬವನ್ನು ತಾಲೂಕಾಗಿ ಘೋಷಿಸುತ್ತಿದ್ದಂತೆಯೇ ಇತ್ತ ಕಡಬದಲ್ಲಂತೂ ತಾಲೂಕು ರಚನೆಯಾದಷ್ಟು ಸಂಭ್ರಮದ ವಾತಾ ವರಣ ಸೃಷ್ಟಿಯಾಗಿತ್ತು. ಸಂಜೆ ಸಾರ್ವಜನಿಕರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಖುಷಿಪಟ್ಟರು.
ತಾಲೂಕು ರಚನೆ ಕುರಿತಂತೆ ಪ್ರತಿಕ್ರಿಯಿಸಿದ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಪಿಲಿಫ್, ನಮ್ಮ ಬಹುದೊಡ್ಡ ಬೇಡಿಕೆ ಈಡೇರಿದೆ. ಇದಕ್ಕಾಗಿ ಸಮಿತಿಯು ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಶೀಘ್ರದಲ್ಲೇ ಕಡಬಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ವ್ಯವಸ್ಥೆ ಒದಗುವಂತಾ ಗಲು ಸರಕಾರವು ಆಸಕ್ತಿ ವಹಿಸಬೇಕು ಎಂದರು.
ಹೋರಾಟ ಸಮಿತಿಯ ಸಂಚಾಲಕ ಕೃಷ್ಣ ಶೆಟ್ಟಿ ಮಾತನಾಡಿ, ಈ ಭಾಗದ ಜನರು ಹೋರಾಟ ಸಮಿತಿಯ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರ ಅವಧಿಯಿಂದ ಮನವಿ ಸಲ್ಲಿಸುತ್ತಾ ಹೋರಾಟಗಳನ್ನು ಮುಂದುವರಿಸುತ್ತಾ ಬಂದಿದ್ದೇವೆ. ಇದೀಗ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಾಲೂಕು ರಚನಾ ಪ್ರಕ್ರಿಯೆಗೆ ಚಾಲನೆ ದೊರೆತಿರುವುದು ಸಂತಸ ತಂದಿದೆ ಎಂದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ. ವರ್ಗೀಸ್ ಮಾತನಾಡಿ, ನಮ್ಮ ಸರಕಾರ ರಾಜ್ಯ ದಲ್ಲಿ ಅಧಿಕಾರದಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಶ್ರಮದಿಂದ ಇಲ್ಲಿಗೆ ವಿಶೇಷ ತಹಶೀಲ್ದಾರ್ ನೇಮಕ ಮಾಡಿ ತಾಲೂಕು ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇದೀಗ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಡಬ ತಾಲೂಕು ಘೋಷಣೆ ಮಾಡಿ ಈ ಭಾಗದ ಜನರಿಗೆ ನ್ಯಾಯ ಒದಗಿಸಿದ್ದಾರೆ ಎಂದರು.ವಿಜಯೋತ್ಸವದ ವೇಳೆ ಹರೀಶ್ ಪೈ, ಪುಲಸ್ಯಾ ರೈ, ಪಿ.ಪಿ.ವರ್ಗೀಸ್, ಸೀತಾರಾಮ ಗೌಡ ಪೊಸವಳಿಕೆ, ಆಶಾ ತಿಮ್ಮಪ್ಪಗೌಡ, ಕೆ.ಎಂ. ಹನೀಫ್, ಅಶ್ರಫ್, ನೀಲಾವತಿ ಶಿವರಾವ್, ಎಚ್.ಕೆ.ಇಲ್ಯಾಸ್, ಸಿ.ಪಿ.ಸೈಮನ್, ಸತೀಶ್ ಕೊಡೆಂಕೀರಿ, ಸುಜಿತ್ ಪಿ.ಕೆ., ಸುಧೀರ್ ಬಿಳಿನೆಲೆ, ಜೋಸೆಫ್ ಸಿ.ಜೆ. ಹಾಗೂ ತಾಲೂಕು ಹೋರಾಟ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು

No comments:

Post a Comment