Monday, February 25, 2013

ಮಂಗಳೂರು-ರಿಯಾದ್‌ಗೆ ನೇರ ವಿಮಾನ: ಜಮೀಯ್ಯತುಲ್ ಫಲಾಹ್ ಆಗ್ರಹ


ಮಂಗಳೂರು-ರಿಯಾದ್‌ಗೆ ನೇರ ವಿಮಾನ: ಜಮೀಯ್ಯತುಲ್ ಫಲಾಹ್ ಆಗ್ರಹ


*ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಂ. ಪ್ರಯತ್ನಕ್ಕೆ ಶ್ಲಾಘನೆ
ರಿಯಾದ್: ‘ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಂ.’ ಸುದ್ದಿ ಸಂಸ್ಥೆಯ ಸತತ ಪರಿಶ್ರಮದ ಫಲವಾಗಿ ಮಂಗಳೂರಿ ನಿಂದ ಸೌದಿ ಅರೇಬಿಯಾದ ದಮಾಮ್‌ಗೆ ನೇರ ವಿಮಾನ ಸಾರಿಗೆ ಸೌಲಭ್ಯವನ್ನು ಸರಕಾರವು ಕಲ್ಪಿಸಿದ್ದು, ಮಂಗಳೂರು- ರಿಯಾದ್ ಮಾರ್ಗಗಳ ಮಧ್ಯೆಯೂ ಅಗತ್ಯವಾಗಿ ನೇರ ವಿಮಾನ ಸಾರಿಗೆ ಸೌಲಭ್ಯವನ್ನು ಒದಗಿಸಲು ‘ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಂ.’ ಸಂಸ್ಥೆಯು ಮುತುವರ್ಜಿ ವಹಿಸಿ, ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರಲ್ಲಿ ಒತ್ತಡ ಹೇರಬೇಕು ಎಂದು ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಜಮೀಯ್ಯತುಲ್ ಫಲಾಹ್ ರಿಯಾದ್ ಘಟಕದ ವತಿಯಿಂದ ವಿನಂತಿಸಲಾಗಿದೆ.
ಈ ಕುರಿತ ಅಧ್ಯಯನ ವರದಿಯೊಂದನ್ನು  ಕೋಸ್ಟಲ್ ಡೆಜೆಸ್ಟ್‌ನ ಅಧ್ಯಕ್ಷ ಮುಹಮ್ಮದ್ ಆಸಿಫ್‌ಗೆ  ಮಾಜಿ ಅಧ್ಯಕ್ಷ ಫರ್ವೇಝ್ ಅಲಿ ಹಸ್ತಾಂತರಿಸಿ, ಈ ಪ್ರಯತ್ನದಲ್ಲಿ ನಾಯಕತ್ವ ವಹಿಸಬೇಕು ಎಂದು ಅವರನ್ನು ಕೋರಿದರು.ಈ ಸಂದರ್ಭದಲ್ಲಿ ಮಂಗಳೂರು- ದಮಾಮ್ ನೇರ ವಿಮಾನಯಾನಕ್ಕಾಗಿ ಆಸಿಫ್ ನೇತೃತ್ವದಲ್ಲಿ ಕೋಸ್ಟಲ್ ಡೆಜೆಸ್ಟ್ ಡಾಟ್ ಕಾಂ ನಡೆಸಿದ ನಿರಂತರ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಸಿಫ್, ದಮಾಮ್‌ನಂತೆ ರಿಯಾದ್ ಹಾಗೂ ಜಿದ್ದಾಕ್ಕೂ ಮಂಗಳೂರಿನಿಂದ ನೇರ ವಿಮಾನಯಾನ ಪ್ರಾರಂಭಿಸುವಂತೆ ಮಾಡಲು ನಮ್ಮ ಸಂಸ್ಥೆ ಸತತ ಪ್ರಯತ್ನ ನಡೆಸಲಿದೆ.
ದಮಾಮ್‌ಗೆ ನೇರ ವಿಮಾನಯಾನ ಪ್ರಾರಂಭವಾಗಲು ನೆರವಾದ ಸಂಸದ ಜಯಪ್ರಕಾಶ್ ಹೆಗ್ಡೆರನ್ನು ಎಪ್ರಿಲ್ ೩ರಂದು ಮಂಗಳೂರಿನಿಂದ ದಮಾಮ್‌ಗೆ ಬರುವ ಪ್ರಥಮ ವಿಮಾನದಲ್ಲಿ ಬರುವಂತೆ ಆಹ್ವಾನಿಸುತ್ತೇನೆ. ರಿಯಾದ್ ನಲ್ಲಿ ಜಮೀಯ್ಯತುಲ್ ಫಲಾಹ್‌ನ ಆಶ್ರಯದಲ್ಲಿ  ಅವರ ಜೊತೆ ಅನಿವಾಸಿ ಭಾರತೀಯರು ಸಂವಾದ ನಡೆಸಲು ಯತ್ನಿಸುವುದಾಗಿ ತಿಳಿಸಿದರು

No comments:

Post a Comment