Wednesday, February 6, 2013

ತೂಮಿನಾಡು ಕುಡಿಯುವ ನೀರಿಗಾಗಿ ಜನತೆಯ ಪರದಾಟ:ಅಧಿಕಾರಿಗಳ ನಿರ್ಲಕ್ಷಮಂಜೇಶ್ವರ:ಮಂಜೇಶ್ವರ ಗ್ರಾ.ಪಂ.2ನೇ 3ನೇ ಹಾಗು 4ನೇ ವಾರ್ಡ್ ಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತಿದ್ದು ಇದೀಗ ಸಾಧಾರಣ ಕಲೆದ 16 ದಿವಸಗಳಿಂದ ಪ್ರದೇಶಗಳಲ್ಲಿ ನೀರು ಸರಬರಾಜು ಇಲ್ಲದಾಗಿದೆ. ಬಗ್ಗೆ ಕೇರಳ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದರೆ ನಿರ್ಲಕ್ಷ ತೋರುತ್ತಿರುವುದಾಗಿ ಊರವರಿಂದ ಆರೋಪ ಕೇಳಿ ಬಂದಿದೆ.
ತೂಮಿನಾಡು,ಕುಂಜತ್ತೂರು,ಕುಂಜತ್ತೂರು ಪದವು ಪ್ರದೇಶಗಳಲ್ಲಿ ನೀರಿಲ್ಲದೆ ಸುಮಾರು 400 ಕುಟುಂಬದ ಜನರು ಪೇಚಾಡುತಿದ್ದಾರೆ.ತೂಮಿನಾಡು ಬೋರ್ವೆಲ್ ನಿಂದ ನೀರು ಟ್ಯಾಂಕ್ ಗೆ ಸಪ್ಲೈ ಆಗುತಿದ್ದು ಟ್ಯಾಂಕ್ ನಿಂದ ಎಲ್ಲಾ ಜನತೆಗೂ ನೀರು ಸರಬರಾಜಾಗುತ್ತಿದೆ. ಪ್ರದೇಶದ ಸಾಧಾರಣ ಎಲ್ಲಾ ಮನೆಗಳಿಗೂ ಕೇರಳ ಜಲ ಮಂಡಳಿ ಪೈಪ್ ಕನಕ್ಷನ್ ಗಳನ್ನು ನೀಡಿ ಗ್ರಾಹಕರು ಪ್ರತೀ ತಿಂಗಳು ಬಿಲ್ ನ್ನು ಪಾವತಿಸುತಿದ್ದಾರೆ.ಇದೀಗ ಕೆಲವು ದಿನಗಳಿಂದ ಬೋರ್ವೆಲ್ ಮೋಟಾರ್ ಹಾಳಾಗಿದ್ದು ಇದರ ದುರಸ್ಥಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತಿದ್ದು ಇದರಿಂದಾಗಿ ಪ್ರದೇಶದ ಜನರು ಕುಡಿಯುವ ನೀರಿಗಾಗಿ ಪರದಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆಯೆಂದು ದೂರಲಾಗಿದೆ.ಕುಂಬಳೆ ಜಲಮಂಡಳಿಯಲ್ಲಿರುವ ಅಸಿಸ್ಟಂಟ್ ಇಂಜಿನಿಯರ್ ರೊಬ್ಬರು ಗ್ರಾಹಕರ ದೂರುಗಳಿಗೆ ಸ್ಪಂಧಿಸದೆ ಉಡಾಫೆಯಿಂದ ಉತ್ತರ ನೀಡುವುದಾಗಿ ಕೂಡಾ ಇಲ್ಲಿಯ ಗ್ರಾಹಕರಿಂದ ಕೇಳಿ ಬಂದಿದೆ.
ಬಗ್ಗೆ ಇಲ್ಲಿಯ ಜನತೆ ಮಂಜೇಶ್ವರ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದು ಇಂದು ಸ್ಥಳಕ್ಕೆ ತಲುಪಿದ ಗ್ರಾಹಕರ ವೇದಿಕೆಯ ಅಧಿಕೃತರು ಕುಂಬಳೆಯನ್ನು ಅಸಿಸ್ಟಂಟ್ ಇಂಜಿನಿಯರ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರಿಗೂ ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ಉಡಾಫೆಯಿಂದ ವರ್ತಿಸಿರುವುದಾಗಿ ದೂರಲಾಗಿದೆ ಸಂಭಂಧ ಕೇರಳ ಜಲಮಂಡಳಿಯ ಮ್ಯಾನೆಜಿಂಗ್ ಡೈರೆಕ್ಟರ್ ತಿರುವನಂತಪುರಂ,ಚೀಫ್ ಇಂಜಿನಿಯರ್,ಹಾಗು ಎಕ್ಸ್ ಕ್ಯೂಟಿವ್ ಇಂಜಿನಿಯರ್ ಕಾಸರಗೋಡು ಇವರಿಗೆ ದೂರನ್ನು ರವಾನಿಸಿರುವುದಾಗಿ ಗ್ರಾಹಕರ ವೇದಿಕೆಯ ಅಧಿಕೃತರು ಪತ್ರಿಕೆಗೆ ತಿಳಿಸಿದ್ದಾರೆ.
ಇಲ್ಲಿಯ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಪರಿಹಾರ ಕಾಣಲು ನಾಗರಿಕರು ಆಗ್ರಹಿಸಿದ್ದಾರೆ

No comments:

Post a Comment