Wednesday, February 20, 2013

ಅಡುಗೆ ಕೋಣೆಯಲ್ಲಿ ಮಹಿಳೆಯ ಶವ ಹೂತ ಪ್ರಕರಣ ಬಯಲಿಗೆ



ವಿಶಾಖಪಟ್ಟಣ: ಗೃಹಿಣಿಯೊಬ್ಬರನ್ನು ಹತ್ಯೆ ಮಾಡಿ ಅಡುಗೆ ಕೋಣೆಯಲ್ಲಿ ಹೂತು ಹಾಕಿ ನಂತರ ಸಿಮೆಂಟ್‌ನಿಂದ ಮುಚ್ಚಿ ಹಾಕಿದ ಪ್ರಕರಣವೊಂದು ಇದೀಗ ಬಯಲಿಗೆ ಬಂದಿದೆ.

ಇಲ್ಲಿನ ರೆಡ್ಡಿ ಕೆಂಚಾರಪೆಲಂ ಪ್ರದೇಶದಲ್ಲಿನ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದುದರಿಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಮನೆಯನ್ನು ಶೋಧಿಸತೊಡಗಿದಾಗ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸ್ಲಾಬ್‌ನ ಕೆಳಗೆ ಹೊಸದಾಗಿ ಸಿಮೆಂಟ್ ಹಾಕಿದ್ದನ್ನು ಗಮನಿಸಿ ಅಗೆದಾಗ ಕುಳಿತ ಭಂಗಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಶವದ ಮೇಲೆ ಇರಿದ ಗಾಯಗಳಿದ್ದು, ಒಂದು ಕೈ ನಾಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಇದೇ ಪ್ರದೇಶದ ಬೆಸ್ತ ಸಮುದಾಯಕ್ಕೆ ಸೇರಿರುವ ವಸುಪಲ್ಲಿ ಅರ್ರಮ್ಮ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಅಡುಗೆ ಕೋಣೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಇಡುವ ಸ್ಥಳದ ಕೆಳಗೆ ಗುಂಡಿ ತೋಡಿ ಹೂತು ಹಾಕಲಾಗಿತ್ತು. ಮತ್ತು ಈ ಜಾಗವನ್ನು ಹೊಸದಾಗಿ ಸಿಮೆಂಟ್‌ನಿಂದ ಮುಚ್ಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶವ ಪತ್ತೆಯಾದ ಸ್ಥಳದಿಂದ 2 ಕಿ.ಮೀ. ದೂರದ ರತ್ನಗಿರಿ ಕಾಲನಿಯಲ್ಲಿ ವಾಸವಿದ್ದ ಅರ್ರಮ್ಮ ಮೀನು ಮಾರಾಟದ ಜತೆಗೆ ಸಣ್ಣ ಪುಟ್ಟ ಬಡ್ಡಿ ವ್ಯಾಪಾರ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಆಕೆ ವಾಸು ಎಂಬ ವ್ಯಕ್ತಿಗೆ 50,000 ರೂ. ಸಾಲ ನೀಡಿದ್ದರು. ಆದರೆ ಆತ ಬಡ್ಡಿಯನ್ನೂ ನೀಡದೆ ಅಸಲನ್ನೂ ಹಿಂದಿರುಗಿಸದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಆಕೆಯ ಸಂಬಂಧಿಗಳು ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಮಾತಿನ ಮಧ್ಯೆ ವಾಸು ಫೆ. 12ರಂದು ಹಣ ನೀಡುವುದಾಗಿ ಭರವಸೆ ನೀಡಿದ್ದ, ಈ ವಿಚಾರವನ್ನು ಆಕೆ ತನ್ನ ಪತಿ ಅಪ್ಪಾ ರಾವ್‌ಗೆ ತಿಳಿಸಿದ್ದಳು. ಫೆ. 12ರಂದು ಎಂದಿನಂತೆ ಮೀನು ಮಾರಲು ಹೋದ ಅರ್ರಮ್ಮ ಹಿಂದಿರುಗದ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಅರ್ರಮ್ಮನಿಂದ ಸಾಲ ಪಡೆದಿದ್ದ ವಾಸು ಬಾಡಿಗೆಗಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದುದರಿಂದ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರು.
 
ಶವ ಹೊರ ತೆಗೆದ ನಂತರ ಅದು ಅರ್ರಮ್ಮನದೆಂದು ಗೊತ್ತಾದ ಹಿನ್ನೆಲೆಯಲ್ಲಿ ವಾಸು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಆತನ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾ

No comments:

Post a Comment