Friday, February 1, 2013

ಗಲ್ಫ್ ಕೇರಳಿಯರಿಗೆ ಇಂಟರ್ ನೆಟ್ ಮತದಾನ?


ವಿಶೇಷ ವರದಿ:ರಹಿಮಾನ್ ಉದ್ಯಾವರ 
ಮಂಜೇಶ್ವರ:ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಗಲ್ಫ್ ರಾಜ್ಯಗಳಲ್ಲಿರುವ ಕೇರಳೀಯರಿಗೆ ಇಂಟರ್ ನೆಟ್ ಮೂಲಕ ಮತ ಚಲಾಯಿಸುವ ಸೌಕರ್ಯವನ್ನು ಪರಿಗಣಿಸಲಾಗುವುದೆಂದು ರಾಜ್ಯ ಚುನಾವಣಾ ಆಯುಕ್ತ ಕೆ.ಶಶಿಧರನ್ ನಾಯರ್ ತಿಳಿಸಿರುತ್ತಾರೆ.ಸರಕಾರ ರಾಜಕೀಯ ಪಕ್ಷಗಳ ನೇತಾರರ ಹಾಗು ತಾಂತ್ರಿಕ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ವಿಷಯದಲ್ಲಿ ರಾಜಕೀಯ ಪಕ್ಷ ಹಾಗು ಮತದಾರರು ಹೊಂದಿರುವ ಸಂಶಯಗಳನ್ನು ಪೂರ್ಣವಾಗಿಯೂ ಪರಿಹರಿಸಿದ ಬಳಿಕವಷ್ಟೇ ಇದರ ಕುರಿತಾದ ಮುಂದಿನ ತೀರ್ಮಾನ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಈಗಾಗಲೇ  ಕೇರಳದ ಗಲ್ಫ್ ಉದ್ಯೋಗಿಗಳಿಗೆ ಅವಕಾಶವನ್ನು ನೀಡಲಾಗಿದ್ದು ಆದರೆ ಅವಕಾಶದಿಂದಾಗಿ ಗಲ್ಫ್ ಕೇರಳೀಯರಿಗೆ ಮತದಾನ ನಡೆಯುವ ದಿನದಂದು ತಮ್ಮ ಸ್ವಂತ ಬೂತ್ ಗೆ ಬಂದು ಮತವನ್ನು ಚಲಾಯಿಸಬೇಕಾಗಿದೆ.ಇದು ಎಲ್ಲಾ ಆನಿವಾಸಿಗಳಿಗೂ ಕಷ್ಟ ಸಾಧ್ಯ ಆದರೆ -ಓಟಿಂಗ್ ಸೌಕರ್ಯಪ್ರದವಾದಲ್ಲಿ ಗಲ್ಫ್ ಕೇರಳೀಯರಿಗೆ ಅವರು ದುಡಿಯುತ್ತಿರುವ ಸ್ಥಳದಿಂದಲೇ ಮತಚಲಾಯಿಸಬಹುದಾಗಿಯೂ ತಿಳಿಸಿದ್ದಾರೆ.ಈಗಾಗಲೇ ಗುಜರಾತಿನಲ್ಲಿ -ಓಟಿಂಗ್ ಸೌಕರ್ಯ ಫಲಪ್ರದ ಗೊಳಿಸಿದ ಸೈಟಲ್ ಎಂಬ ಸಮ್ಸ್ಥೆಯ ಪ್ರತಿನಿಧಿಗಳೊಂದಿಗೆ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಚರ್ಚೆ  ಆರಂಭಿಸಿರುವುದಾಗಿ ತಿಳಿದು ಬಂದಿದೆ.
ಸುರಕ್ಷತೆ ಹಾಗು ಗುಪ್ತತೆಯನ್ನು ಖಾತರಿ ಪಡಿಸಲು ಆಧುನಿಕ ಕ್ರಿಪ್ ಟೋಗ್ರಾಪಿಕ್ ತಂತ್ರಜ್ಞಾನವನ್ನು ಕೂಡಾ ಬಳಸಲಾಗುವುದಾಗಿ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.ಪ್ರಯತ್ನವು ಸಫಲವಾದರೆ ಇನ್ನು ಮುಂದೆ ಗಲ್ಫ್ ಕೇರಳೀಯರು ತಮ್ಮ ಖಾಸಗಿ ಲ್ಯಾಪ್ ಟಾಪ್(ಕಂಪ್ಯೂಟರ್) ಅಥವಾ ಇಂಟರ್ ನೆಟ್ ಕೆಫೆ ಮೂಲಕ ಮತಚಲಾಯಿಸಬಹುದಾಗಿದೆ.
ಇತ್ತೀಚೆಗೆ ಗುಜರಾತ್ ರಾಜ್ಯದಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಇಂತಹ ಪ್ರಯತ್ನಗಳು ಸಫಲವಾಗಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

No comments:

Post a Comment