Thursday, February 21, 2013

ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರುನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಹಾಡು ಹಗಲೇ ಎರಡು ಮನೆಗಳಿಗೆ ಕಳ್ಳರು ನುಗ್ಗಿ ನಗದನ್ನು ದೋಚಿ ಪರಾರಿಯಾದ ಬಗ್ಗೆ ವರ್ಕಾಡಿ ಸಮೀಪದ ನಾವಡ್ರಬೈಲು ನಿಂದ ವರದಿಯಾಗಿದೆ.
 ಬುಧವಾರ ಮಧ್ಯಾಹ್ನ 12 ಗಂಟೆ ಹಾಗು 2 ಗಂಟೆಯ ಮಧ್ಯೆ ನಾಡ್ರಬೈಲು ಧನೇಶ್ ಕುಲಾಲ್ ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ಒಡೆದು 15 ಸಾವಿರ ರೂಗಳನ್ನು ದೋಚಿರುತ್ತಾರೆ. ಧನೇಶ್ ಕುಲಾಲ್ ನಿರ್ಮಾಣ ಕಾರ್ಮಿಕನಾಗಿದ್ದು ಸಂಜೆ ಮನೆಗೆ ಆಗಮಿಸಿದಾಗಲೇ ಕಲವಿನ ಅರಿವಿಗೆ ಬಂದದ್ದು.
ಇದೇ ಪರಿಸರದ ಕಂಡಕ್ಟರ್ ವೃತ್ತಿಯಲ್ಲಿರುವ ವಿನಯಕುಮಾರ್ ಎಂಬವರ ಮನೆಗೂ ಮುಂಬಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟು ಮುರಿದು ವಸ್ಥುಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದು ಅದರೆ ಯಾವುದೇ ವಸ್ಥು ಕಳವಾಗಿಲ್ಲವೆಂದು ತಿಳಿದು ಬಂದಿದೆ.ಪುನಃ ತಲೆ ಎತ್ತಿದ ಹಗಲು ಕಳ್ಳರ ಹಾವಳಿಯಿಂದ ಜನರು ಭಯಭೀತರಾಗಿದ್ದಾರೆ.


No comments:

Post a Comment