Saturday, February 16, 2013

ಮಂಗಳೂರು: ‘ಆಮ್ ಆದ್ಮಿ ಪಕ್ಷ’ಕ್ಕೆ ಚಾಲನೆ


ಮಂಗಳೂರು: ‘ಆಮ್ ಆದ್ಮಿ ಪಕ್ಷ’ಕ್ಕೆ ಚಾಲನೆ


 ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಸ್ಥಾಪಿಸಿದ ‘ಆಮ್ ಆದ್ಮಿ ಪಕ್ಷ’ದ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ರಾಜಕೀಯ ವಿಶ್ಲೇಷಕ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಯೋಗೀಂದರ್ ಯಾದವ್ ಶುಕ್ರವಾರ ಚಾಲನೆ ನೀಡಿದರು.
ನಂತೂರಿನಲ್ಲಿರುವ ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕಕ್ಕೆ ಮಾಲಾ ರ್ಪಣೆ ಮಾಡಿದ ಬಳಿಕ ಕದ್ರಿ ಪಾರ್ಕ್ ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ದೊಡ್ಡ ಚಳವಳಿಯ ಆರಂಭ ಸಣ್ಣ ಹೆಜ್ಜೆಯಿಂದಲೇ ಆಗುತ್ತಿದೆ. ಆಮ್ ಆದ್ಮಿ ಪಕ್ಷ ಕೂಡ ಚಳವಳಿ ಯಿಂದಲೇ ಆರಂಭಗೊಂಡಿದ್ದು, ಇದೀಗ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಸದ್ಯ ಪಕ್ಷ ಬಲಗೊಳ್ಳದ ಕಾರಣ ಮತ್ತು ಸಮಯದ ಅಭಾವದಿಂದ ಕರ್ನಾಟಕ ವಿಧಾನ ಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.
ಪಕ್ಷಕ್ಕೆ ತನ್ನದೇ ಆದ ಹಿತೈಷಿಗಳಿದ್ದಾರೆ. ಅವರ ಶಕ್ತಿಯನ್ನು ಕಾರ್ಯಕರ್ತರು ಬಳಸಿಕೊಳ್ಳಬೇಕು. ಭ್ರಷ್ಟಾಚಾರರ ವಿರುದ್ಧ ಅರವಿಂದ ಕೇಜ್ರಿವಾಲ್ ಈಗಲೂ ಸಮರ ಸಾರುತ್ತಿದ್ದಾರೆ. ಮಾಧ್ಯಮಗಳಲ್ಲಿ ಅದು ಪ್ರಚಾರವಾಗುತ್ತಿಲ್ಲವಷ್ಟೆ. ಆ ಬಗ್ಗೆ ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದು ಯೋಗೀಂದ್ ಯಾದವ್ ನುಡಿದರು.
ಸಮಾರಂಭದಲ್ಲಿ ಪಕ್ಷದ ಮುಖಂಡ ರಾದ ಪೃಥ್ವಿ ರೆಡ್ಡಿ, ಚಂದ್ರಕಾಂತ, ಪ್ರಮೋದ್ ಕರ್ಕೇರಾ, ರಾಬರ್ಟ್ ರೊಸಾರಿಯೊ, ನಂದಗೋಪಾಲ್ ಪಾಲ್ಗೊಂಡಿದ್ದ

No comments:

Post a Comment