Saturday, February 2, 2013

ಕಾಸರಗೋಡು: ಜ್ಯುವೆಲ್ಲರಿ ದರೋಡೆಗೆ ವಿಫಲ ಯತ್ನ: ಮೆನೇಜರ್‌ಗೆ ಹಲ್ಲೆ


ಕಾಸರಗೋಡು: ಜ್ಯುವೆಲ್ಲರಿ ದರೋಡೆಗೆ ವಿಫಲ ಯತ್ನ: ಮೆನೇಜರ್‌ಗೆ ಹಲ್ಲೆ
ಫೆಬ್ರವರಿ -02-2013

ಕಾಸರಗೋಡು:  ನಗರದ ಜ್ಯುವೆ ಲ್ಲರಿಯೊಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದ್ದು, ದರೋಡೆಕೋರರು ಮೆನೇಜರ್‌ರ ತಲೆಗೆ ಬಡಿದು ಪರಾರಿ ಯಾದ ಘಟನೆ ಇಂದು ಬೆಳಗ್ಗೆ 8:30 ಸುಮಾರಿಗೆ ನಡೆದಿದೆ.ನಗರದ ತಾಲೂಕು ಕಚೇರಿ ಮುಂಭಾಗ ದಲ್ಲಿರುವ ಜ್ಯುವೆಲ್ಲರಿಯೊಂದರಲ್ಲಿ ಈ ಕೃತ್ಯ ನಡೆದಿದೆ. ಗಾಯಗೊಂಡ ಮೆನೇ ಜರ್ ಕೊರಕ್ಕೋಡ್‌ನ ಸತೀಶ್ (55) ಎಂಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಸತೀಶ್ ಬೆಳಗ್ಗೆ ಜ್ಯುವೆಲ್ಲರಿ ಬಾಗಿಲು ತರೆಯುತ್ತಿದ್ದಂತೆ ಒಳಗಿದ್ದ ಇಬ್ಬರು ದರೋಡೆಕೋರರು ಸತೀಶ್‌ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗೋಡೆ ಕೊರೆದು ಒಳಗೆ ನುಗ್ಗಿದ ಕಳ್ಳರು ಜ್ಯುವೆಲ್ಲರಿಯ ಭದ್ರತಾ ಕೊಠಡಿಯನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಯಾವುದೇ ಚಿನ್ನಾಭರಣ ಕಳವಾಗಿಲ್ಲ. ಮುಂಜಾನೆ ಗೋಡೆ ಕೊರೆದು ದರೋಡೆಕೋರರು ಒಳನುಗ್ಗಿರಬಹು ದೆಂದು ಶಂಕಿಸಲಾಗಿದೆ.
ಜ್ಯುವೆಲ್ಲರಿಯ ರಹಸ್ಯ ಕ್ಯಾಮರಾವನ್ನು ದರೋಡೆಕೋರರು ಬೇರೊಂದು ಕಡೆಗೆ ತೆಗೆದಿರಿಸಿದ್ದಾರೆ. ಸಮೀಪದ ಇನ್ನೊಂದು ಅಂಗಡಿಯ ಹೆಂಚು ತೆಗೆದು ಒಳನುಗ್ಗಿ ಜ್ಯುವೆಲ್ಲರಿಗೆ ನುಗ್ಗಲು ಗೋಡೆ ಕೊರೆಯಲಾಗಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್. ಸುರೇಂದ್ರನ್, ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಶ್ವಾನದಳ ಬೆರಳಚ್ಚು ತಜ್ಞರು  ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ

No comments:

Post a Comment