Sunday, February 17, 2013

ಮೊಬೈಲ್‌ನಲ್ಲಿ ಮಾತನಾಡಿ ಹಳಿ ದಾಟಿದ ವಿದ್ಯಾರ್ಥಿನಿ ರೈಲಿನಡಿಗೆಬೊಕಾರೊ: ಮೊಬೈಲ್‌ನಲ್ಲಿ ಮಾತಾಡಿಕೊಂಡು ರೈಲು ಹಳಿ ದಾಟುತ್ತಿದ್ದ 12ನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿನಡಿ ಬಿದ್ದು ಮೃತಪಟ್ಟ ಘಟನೆ ಇಲಿನ ಬರ್ಮೊ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ಆಕೆಯ ಜೊತೆಗೆ ನಡೆಯುತ್ತಿದ್ದ ಇಬ್ಬರು ಗೆಳತಿಯರು ಸಾವಿನಿಂದ ಕೊಂಚದರಲ್ಲೇ ಪಾರಾಗಿದ್ದಾರೆ.
ಕಾಜಲ್ ಕುಮಾರಿ (18) ಬರ್ಮೊದ ರಾಮದಾಸ್ ಹೈಸ್ಕೂಲ್‌ನ ವಿದ್ಯಾರ್ಥಿನಿ. ಆಕೆಯ ದೇಹ ರೈಲ್ವೆ ಹಳಿಯಲ್ಲಿ ಹಲವು ತುಂಡುಗಳಾಗಿ ಬಿದ್ದಿದ್ದವು.
ಮೂವರು ಬಾಲಕಿಯರು ಬೆಳಗ್ಗೆ 11.30ಕ್ಕೆ ಕಾಲೇಜಿನಿಂದ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಅವರು ರೈಲ್ವೆ ಹಳಿಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಅವರು ಸರಸ್ವತಿ ಪೂಜೆ ಆಚರಿಸಲು ಶಾಲೆಗೆ ಹೋಗಿದ್ದರು.

No comments:

Post a Comment