Saturday, February 2, 2013

ತೂಮಿನಾಡಿನಲ್ಲಿ ಬಡ್ಡಿ ದಂಧೆಯ ಅಟ್ಟಹಾಸಮಂಜೇಶ್ವರ:ಇಲ್ಲಿಗೆ ಸಮೀಪದ ತೂಮಿನಾಡು ಪ್ರದೇಶದಲ್ಲಿ ಬಡ್ಡಿ ವ್ಯಾಪಾರದ ದಂಧೆಯು ರಾಜಾರೋಷವಾಗಿ ನಡೆಯುತ್ತಿರುವುದಾಗಿ ನಾಗರಿಕರು ಆರೋಪಿಸುತಿದ್ದಾರೆ.ಹಣ ಸಾಲ ನೀಡಿ ಅಮಿತ ಬಡ್ಡಿಯನ್ನು ವಸೂಲು ಮಾಡಿ ಜನರಿಗೆ ವಿಪರೀತ ತೊಂದರೆಯನ್ನು ನೀಡುತ್ತಿರುವುದಾಗಿ ದೂರಲಾಗುತ್ತಿದೆ.ಬಡ್ಡಿಗೆ ಹಣವನ್ನು ತೆಗೆದ ವ್ಯಕ್ತಿ ನಿರ್ಧಿಷ್ಟ ಸಮಯದಲ್ಲಿ ಮರುಪಾವತಿಸದಿದ್ದರೆ ಬಡ್ಡಿ ವಸೂಲಿಗರು ಮನೆಗೆ ನುಗ್ಗಿ ಬೆದರಿಕೆ ನೀಡಲಾಗುತ್ತಿದೆ.ಇದರಿಂದಾಗಿ ಕೆಲವೊಂದು ವ್ಯಕ್ತಿಗಳು ಬಡ್ಡಿ ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಗೂ ಯತ್ನಿಸುತ್ತಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಬಡ್ಡಿ ದಂಧೆಯ ವಿರುದ್ದ ಕಠಿಣಕ್ರಮ ಜ್ಯಾರಿಯಲ್ಲಿದ್ದರೂ ಸಂಭಂಧ ಪಟ್ಟವರು ಇತ್ತ ಕಡೆ ಗಮನಹರಿಸುತ್ತಿಲ್ಲವೆಂದೂ ಇದಕ್ಕೊಂದು ನಿಯಂತ್ರಣ ರೇಖೆಯನ್ನು ಏರ್ಪಡಿಸಬೆಕೆಂದು ನಾಗರಿಕರು ಆಗ್ರಹಿಸಿದ್ದಾರೆ

No comments:

Post a Comment