Monday, February 18, 2013

ಮಂಜೇಶ್ವರ ಗ್ರಾಹಕರ ವೇದಿಕೆಯ ಸಭೆ




Staff Reporter
ಮಂಜೇಶ್ವರ:ಮಂಜೇಶ್ವರ ಗ್ರಾಹಕರ ವೇದಿಕೆಯ ಕಾರ್ಯಕಾರಿ ಸಮಿತಿಯ ಮಾಸಿಕ ಸಭೆಯು ಇತ್ತೀಚೆಗೆ ಮುರಳೀಧರ್ ಭಟ್ ರವರ ಅಧ್ಯಕ್ಷತೆಯಲ್ಲಿ ತೂಮಿನಾಡಿನ ಎಂ.ಎಫ್ ಪ್ಲಾಜಾ ದಲ್ಲಿ ಜರಗಿತು  .ಸಭೆಯಲ್ಲಿ ನಡೆದ ಚರ್ಚಾ ವಿಷಯದಲ್ಲಿ ಸಿ.ಆಹ್ಮದ್ ಕುಂಞಿ,ಸಂಜೀವ ಶೆಟ್ಟಿ,ಉಷಾ ಉಪ್ಪಳ,ಲಿಲ್ಲಿಬಾಯಿ ಟೀಚರ್,ಕೆ.ಎ.ಇಬ್ರಾಹಿಂ.ಬಿ.ಮೊಹಮ್ಮದ್ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು:ಕುಡಿಯುವ ನೀರಿನ ಕ್ಷಾಮವನ್ನು ಎದುರಿಸುತ್ತಿರುವ ಮಂಜೇಶ್ವರ ಪ್ರದೇಶದ ಕಾಲನಿಗಳಿಗೆ ವೇದಿಕೆಯ ಅಧಿಕೃತರು ಬೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಂಭಂಧ ಪಟ್ಟ ಅಧಿಕಾರಿಗಳಿಗೆ ಹಾಗು ಸಚಿವರುಗಳಿಗೆ ರವಾನಿಸಲು ತೀರ್ಮಾನ.
ಮಂಜೇಶ್ವರ ವಿದ್ಯುತ್ ಇಲಾಖೆಯಲ್ಲಿ ಸರ್ವೀಸ್ ಕೇಬಲ್ ನ ಕೊರತೆಯ ಬಗ್ಗೆ ಅಧಿಕಾರಿಯೊಬ್ಬರು ವೇದಿಕೆಗೆ ನೀಡಿದ ದೂರಿಗೆ ಸಂಭಂಧಿಸಿ   ಸಂಭಂಧ ಪಟ್ಟ ಅಧಿಕಾರಿಗಳಿಗೆ ದೂರು ರವಾನಿಸಿ ಸರ್ವೀಸ್ ಕೇಬಲ್ ನ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಳ್ಳಲು ತೀರ್ಮಾನ.
ಮಂಜೇಶ್ವರ ಕುಂಡುಕೊಳಕೆ ಬೀಚ್ ನ ಬಗ್ಗೆ ಗ್ರಾಹಕರಿಂದ ಬಂದ ದೂರನ್ನು ಪರಿಶೀಲಿಸಿದ ವೇದಿಕೆಯು ಇದರ ಬಗ್ಗೆ ಮಾಹಿತಿ ಹಕ್ಕು ಖಾಯಿದೆ ನಿಯಮದಂತೆ ಸಂಪೂರ್ಣ ವಿವರವನ್ನು ಪಡೆಯಲು ಮಂಜೇಶ್ವರ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಲು ತೀರ್ಮಾನ
ಮಂಜೇಶ್ವರದ ಜನತೆಯನ್ನು ವಂಚಿಸಿ ಮರಳು ಹಾಗು ಕೆಂಪು ಕಲ್ಲುಗಳನ್ನು ಅನ್ಯರಾಜ್ಯಗಳಿಗೆ ಹಾಗು ಇತರ ಜಿಲ್ಲೆಗಳಿಗೆ ಸಾಗಿಸುತ್ತಿರುವ ಮಾಫಿಯಾಗಳ ಅಟ್ಟ ಹಾಸದ ಬಗ್ಗೆ ಸಂಭಂಧ ಪಟ್ಟ ಅಧಿಕಾರಿಗಳ ಹಾಗು ಸಚಿವರ ಗಮನಕ್ಕೆ ತಂದು ಇದಕ್ಕೊಂದು ಕಡಿವಾಣವನ್ನು ಹಾಕಿಸಲು ತೀರ್ಮಾನ
ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಗ್ರಾಹಕರು ಎದುರಿಸುತ್ತಿರುವ ನೀರು,ಶುಚಿತ್ವ,ಹಾಗು ವಿದ್ಯುತ್ ಅಭಾವದ ಕೊರತೆಯನ್ನು ನೀಗಿಸಲು ಸಂಭಂಧ ಪಟ್ಟ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಲು ತೀರ್ಮಾನ
ಹೊಸತಾಗಿ ಆರಂಭಿಸುವ ರಸ್ತೆ ಕಾಮಗಾರಿ ಯ ಬಗ್ಗೆ ಆಯಾಯ ರಸ್ತೆಗಳಲ್ಲಿ ಕಾಮಗಾರಿ ಸೂಚನಾ ಫಲಕ ಹಾಕದಿರುವ ಬಗ್ಗೆ ತ್ರಿತರ ಪಂಚಾಯತಿನ ವೈಪಲ್ಯದ ಬಗ್ಗೆ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತರಲು ತೀರ್ಮಾನ
ಉಪ್ಪಳ ಹಾಗು ಮಂಗಲ್ಪಾಡಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಕೇಂದ್ರಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ರೇಶನ್ ವಿತರಕರ ಬಗ್ಗೆ ಬಂದ ದೂರಿಗೆ ಪರಿಹಾರವನ್ನು ಕಂಡುಕೊಳ್ಳಲು ಸಂಭಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲು ತೀರ್ಮಾನ
ಜನನಿಬಿಡ ಪ್ರದೇಶವಾದ ಉಪ್ಪಳ ಹಾಗು ಕೈ ಕಂಬಗಳಲ್ಲಿ ರಸ್ತೆ ಸಂಚಾರದಲ್ಲುಂಟಾಗುವ ಸಮಸ್ಯೆಯನ್ನು ನಿವಾರಿಸಲು ಟ್ರಾಫಿಕ್ ಸಿಗ್ನಲ್ ನಿರ್ಮಿಸಲು ಸಂಭಂಧ ಪಟ್ಟ ಅಧಿಕಾರಿಗಳಿಗೆ ಹಾಗು ಸಚಿವರಿಗೆ ಮನವಿಯನ್ನು ನೀಡಲು ತೀರ್ಮಾನ
ಉಪ್ಪಳ ರೈಲ್ವೇ ನಿಲ್ದಾನ ರಸ್ತೆಯಲ್ಲಿ ಕೊಳಕು ನೀರು ಹರಿದು ಹೋಗುತ್ತಿರುವ ಚರಂಡಿಯು ಗುಬ್ಬೆದ್ದು ನಾರುತಿದ್ದರೂ ಅಧಿಕೃತರು ಗಮನಹರಿಸದೇ ಇರುವ ಬಗ್ಗೆ  ಬಂದ ದೂರಿಗೆ ಪರಿಹಾರವನ್ನು ಕಂಡು ಕೊಳ್ಳಲು ತೀರ್ಮಾನವನ್ನು ಕೈಗೊಳ್ಳಲಾಯ್ತು.
ಕುಡಿಯುವ ನೀರಿನ ಬಗ್ಗೆ ದೂರುಗಳೇನಾದರೂ ಇದ್ದರೆ 15 ದಿನದೊಳಗಾಗಿ ಗ್ರಾಹಕರ ವೇದಿಕೆಯಲ್ಲಿ ದೂರನ್ನು ದಾಖಲಿಸಲು ಮಂಜೇಶ್ವರ ಗ್ರಾಹಕರ ವೇದಿಕೆಯು ಗ್ರಾಹಕರಲ್ಲಿ ವಿನಂತಿಸಿ ಕೊಂಡಿದೆ ಸಂಪರ್ಕಿಸಬೇಕಾದ ನಂಬ್ರ 9447435412
ನಾಸರ್ ರವರು ಸ್ವಾಗತಿಸಿ ಕಾರ್ಯದರ್ಶಿ ರಹಿಮಾನ್ ಉದ್ಯಾವರ ವಂದಿಸಿದರು

No comments:

Post a Comment