Monday, February 4, 2013

ಪೆರಿಯ ಬ್ಯಾಂಕ್ ದರೋಡೆ ಪ್ರಕರಣ: ಇನ್ನೂ ಪತ್ತೆಯಾಗದ ಚಿನ್ನಾಭರಣ ಫೆಬ್ರವರಿ -04-2013

ಕಾಸರಗೋಡು: ನಾಲ್ಕು ವರ್ಷ ಗಳ ಹಿಂದೆ ಪೆರಿಯ ಬ್ಯಾಂಕ್‌ನಿಂದ ದರೋಡೆಗೈದ 33 ಕಿಲೋ ಚಿನ್ನಾ ಭರಣದ ಪೈಕಿ 22ಕಿಲೋ ಚಿನ್ನಾಭರಣ ಎಲ್ಲಿದೆ ಎಂಬುವುದು ಇನ್ನೂ  ಪ್ರಶ್ನೆಯಾಗಿ ಉಳಿದಿದೆ. ಪ್ರಕರಣದಲ್ಲಿ ಒಟ್ಟು 14 ಆರೋಪಿಗಳಿದ್ದು, 11 ಮಂದಿ ಯನ್ನು ಈಗಾಗಲೇ ಬಂಧಿಸಲಾಗಿದೆ. ಮೂವರು ತಲೆ ಮರೆಸಿಕೊಂಡಿದ್ದಾರೆ. 8 ಮಂದಿಯನ್ನು ಘಟನೆ ನಡೆದ ಕೆಲ ತಿಂಗಳಲ್ಲೇ ಬಂಧಿಸಲಾಯಿತು. ಇವರಿಂದ 11 ಕಿಲೋ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಉಳಿದ ಚಿನ್ನಾಭರಣ ತಲೆಮರೆಸಿಕೊಂಡಿದ್ದ 6 ಮಂದಿಯಲ್ಲಿರ ಬಹುದೆಂದು ತನಿಖಾ ತಂಡ ತಿಳಿಸಿತ್ತು.ಕಳೆದ 15 ದಿನಗಳ ಅವಧಿಯಲ್ಲಿ ಪ್ರಕ ರಣದ ಒಂದನೇ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇವ ರಿಂದ ಚಿನ್ನಾಭರಣವನ್ನು ವಶಪಡಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನೂ ತಲೆಮರೆಸಿಕೊಂಡಿರುವ ಈ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದಲ್ಲಿ ಮಾತ್ರ  ಚಿನ್ನಾಭರಣ ಲಭಿಸಬಹುದು ಎಂಬ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ನಾಲ್ಕುವರ್ಷಗಳ ಹಿಂದೆ ಪೆರಿಯ ಬಜಾರ್‌ನ ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್‌ನಲ್ಲಿ ದರೋಡೆ ನಡೆದಿತ್ತು. 33 ಕಿಲೋ ಚಿನ್ನಾಭರಣ ಮತ್ತು ಆರೂವರೆ ಲಕ್ಷರೂ.ವನ್ನು ದರೋಡೆ ಗೈಯಲಾಗಿತ್ತು. ಕಟ್ಟಡದ 2ನೆ ಅಂತಸ್ತಿನಲ್ಲಿರುವ ಬ್ಯಾಂಕಿನ ಕಿಟಕಿ ಕೊರೆದು ಕಳ್ಳರು ಒಳನುಗ್ಗಿ ಲಾಕರ್ನಲ್ಲಿದ್ದ ಭಾರೀ ಮೌಲ್ಯದ ಚಿನ್ನಾಭರಣ ವನ್ನು ದೋಚಿದ್ದರು. ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಾಂಡಿಚೇರಿ, ಆಂಧ್ರ ಪ್ರದೇಶ ವೊದಲಾದೆಡೆ ತೆರಳಿ ತನಿಖೆ ನಡೆಸಿ, 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಬಂಧಿತ ಆರೋಪಿಯಾಗಿದ್ದ ಅಣ್ಣಾದೊರೈಯ ಮೈಸೂರಿನಲ್ಲಿರುವ ವಾಸಸ್ಥಳಕ್ಕೆ ದಾಳಿ ನಡೆಸಿದ ತನಿಖಾ ತಂಡ ಈತ ಖರೀದಿ ಸಿದ್ದ ಭೂಮಿ ಮತ್ತು ಇನ್ನೋರ್ವ ಆರೋಪಿ ಕೃಷ್ಣ ಮೂರ್ತಿ ಪಾಂಡಿಚೇರಿ ಯಲ್ಲಿ ಖರೀದಿಸಿದ 17 ಸೆಂಟ್ಸ್ ಸ್ಥಳವನ್ನು ಮುಟ್ಟುಗೋಲು ಹಾಕಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 8 ಮಂದಿಯ ಪೈಕಿ ಇಬ್ಬರನ್ನು ಖುಲಾಸೆ ಮಾಡಲಾ ಗಿತ್ತು. 6 ಮಂದಿಗೆ ಶಿಕ್ಷೆ ವಿಧಿಲಾಗಿತ್ತು.
ತಿಂಗಳ ಹಿಂದೆ ತಲೆ ಮರೆಸಿಕೊಂಡ 6ಮಂದಿಯ ಪೈಕಿ ಇಬ್ಬರನ್ನು ತಮಿಳುನಾಡಿನ ಪೊಲೀಸರು ಅಲ್ಲಿನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿದ್ದರು. ವಿಚಾರಣೆ ವೇಳೆ ಪೆರಿಯ ಬ್ಯಾಂಕ್ ದರೋಡೆ ಕುರಿತು ಮಾಹಿತಿ ನೀಡಿದರು.  ತಮಿಳುನಾಡಿನ ಪೊಲೀಸರು ಕಾಸರಗೋಡಿನ ಪೊಲೀಸರಿಗೆ ಮಾಹಿತಿ ರವಾನಿಸಿದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳಿದ್ದ ಕಾಸರ ಗೋಡು ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಕಾಸರಗೋಡಿಗೆ ಕರೆತಂದು ಹೊಸದುರ್ಗ ನ್ಯಾಯಾಲಯಕ್ಕೆ  ಹಾಜರು ಪಡಿಸಿದ್ದರು.
ಇವರು ನೀಡಿದ್ದ ಮಾಹಿತಿಯಂತೆ ಪ್ರಕರಣದ ಇನ್ನೋರ್ವ ಆರೋಪಿಯನ್ನು 2 ದಿನಗಳ ಹಿಂದೆ ತಮಿಳುನಾಡಿನಿಂದ ಬಂಧಿಸಿದ್ದರು. ಆದರೆ ಇವರನ್ನು ವಿಚಾರಣೆ ಗೊಳಪಡಿಸಿದಾಗ ಕಳವುಗೈದ ಸೊತ್ತುಗಳಬಗ್ಗೆ ಮಾಹಿತಿ ಲಭಿಸಿಲ್ಲ ವೆನ್ನಲಾಗಿದೆ. ಪ್ರಥಮ ಹಂತದಲ್ಲಿ ಬಂಧಿತ 8 ಮಂದಿಯಿಂದ 11 ಕಿಲೋ ಚಿನ್ನಾಭರಣ ಮತ್ತು 10ಲಕ್ಷ ರೂ. ಹಾಗೂ ಒಂದು ಕಾರನ್ನು  ತನಿಖಾ ತಂಡ ವಶಪಡಿಸಿ ಕೊಂಡಿತ್ತು.
ಆದರೆ ಉಳಿದ 22 ಕಿಲೋ ಚಿನ್ನಾಭರಣ ಎಲ್ಲಿದೆ ಎಂಬುವುದು ಪ್ರಶ್ನೆಯಾಗಿ  ಕಾಡುತ್ತಿದೆ. ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಗಳನ್ನು ಬಂಧಿಸಿದಲ್ಲಿ ಮಾತ್ರ ಚಿನ್ನಾಭರ ಣದ ಕುರಿತಾಗಿ ಮಾಹಿತಿ ಲಭಿಸಲು ಸಾಧ್ಯ ಎಂದು ಪೊಲೀಸರು  ಹೇಳಿದ್ದಾರೆ.
ಪ್ರಕರಣದ 2ನೆ ಆರೋಪಿ ರಮೇಶ್, 7ನೆ ಆರೋಪಿ ಪಳನಿ ಮತ್ತು 13ನೆ ಆರೋಪಿ ಮುನಿಯನ್ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಈ ಪೈಕಿ ಮಹೇಶ್ ದರೋಡೆಯಲ್ಲಿ ನೇರವಾಗಿ ಶಾಮೀಲಾಗಿದ್ದು,  ಇಬ್ಬರು ದರೋಡೆಗೆ ನೆರವಾಗಿದ್ದರು ಎನ್ನಲಾಗಿ

No comments:

Post a Comment