Friday, February 22, 2013

ಪೊಲೀಸರಿಗೆ ಜಾಗ್ರತೆ ಪಾಲಿಸಲು ಹೈಕೋರ್ಟ್ ಆದೇಶನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಪಡೆಯುವವರನ್ನು ಪ್ರಸ್ತುತ ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವ ಮೊದಲು ಬಗ್ಗೆ ಪೊಲೀಸರು ಜಾಗ್ರತೆ ಪಾಲಿಸಲು ಹೈ ಕೋರ್ಟ್ ಆದೇಶವಿತ್ತಿದೆ.
ಅಪರಾಧ ಪ್ರಕರಣಗಳಲ್ಲಿ ಓರ್ವ ವ್ಯಕ್ತಿಯನ್ನು ಬಳಿಕ ಆರೋಪಿಯನ್ನಾಗಿ ಸೇರಿಸಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದ ಬಳಿಕವೇ ಆತನನ್ನು ಸೆರೆ ಹಿಡಿಯಬಹುದಾಗಿದೆ.ಅದಲ್ಲವಾದರೆ ಹೊಸತಾಗಿ ಆರೋಪಿ ಯಾದಿಯಲ್ಲಿ ಹೆಸರಿಸಲ್ಪಡುವ ವ್ಯಕ್ತಿಗಳನ್ನು ಪ್ರಕರಣಗಳ ಬಗ್ಗೆ ವಿಚಾರಣೆಗಾಗಿ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಮಾಡಲು ಅಪರಾಧ ನೀತಿ ಸಂಹಿತೆ ಸೆಕ್ಷನ್ ೪೧ ಪ್ರಕಾರ ವ್ಯಕ್ತಿಗೆ ನೋಟೀಸ್ ನೀಡಬೇಕೆಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಂದರ್ಭ ತಾನು ಪ್ರಕರಣದ ಆರೋಪಿಯಾಗಿಲ್ಲವೆಂದೂ ಬಳಿಕ ಪೊಲೀಸರು ತನ್ನ ಮೇಲೆ ಮೊಕದ್ದಮೆ ದಾಖಲಿಸಿ ದಸ್ತಗಿರಿ ಗೈದಿರುವುದಾಗಿ ತಲಶ್ಯೇರಿ ನಿವಾಸಿ ಹನೀಫಾ ವಿ.ಡಿ ಯವರು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸುವ ವೇಳೆ ನ್ಯಾಯಾಲಯವು ಮೇಲಿನಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದೆ.  

No comments:

Post a Comment