Tuesday, February 26, 2013

ಬಾಲಕನನ್ನು ಕಿಡ್ನಾಪ್ ಮಾಡಿ ಸಲಿಂಗಕಾಮ ಕಿರುಕುಳನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಸಲಿಂಗಕಾಮಿಗಳು ಬಾಲಕನೋರ್ವನನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶದ ಕಟ್ಟಡವೊಂದಕ್ಕೆ ಕೊಂಡೊಯ್ದು ಸಲಿಂಗ ರತಿ ಕಿರುಕುಳ ನೀಡಿದ ಘಟನೆ ಇಲ್ಲಿಗೆ ಸಮೀಪದ ಪಾವೂರು ಮಚ್ಚಂಪ್ಪಾಡಿಯಲ್ಲಿ ನಡೆದಿದೆ.
ಸಲಿಂಗರತಿ ಕಿರುಕುಳಕ್ಕೊಳಗಾದ ವ್ಯಕ್ತಿ ಮಚ್ಚಂಪ್ಪಾಡಿ ನಿವಾಸಿಯಾದ ಆನೆಕಲ್ಲು ಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.ಈತ ತರಗತಿಗೆ ನಾಲ್ಕು ತಿಂಗಳು ಮಾತ್ರ ತೆರಳಿದ್ದನು. ಅನಂತರ ಮನೆಯಲ್ಲಿ ಅನಾರೋಗ್ಯ ಪೀಡಿತನಾಗಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಬಾಲಕನನ್ನು ಕಾಣಲು ಬಾಲಕ ಕಲಿಯುತಿದ್ದ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಕಲೆದ ವಾರ ಮನೆಗೆ ಬಂದಿದ್ದನೆಂದು ಹೇಳಲಾಗಿದ್ದು ಸಂದರ್ಭ ಬಾಲಕನ ತಾಯಿ ಮನೆಯೊಳಗೆ ಕೆಲಸದಲ್ಲಿದರೆಂದು ಹೇಳಲಾಗಿದೆ.ಹಿರಿಯ ಕ್ಲಾಸಿನ ವಿದ್ಯಾರ್ಥಿ ಜತೆ ಮಾತನಾಡುತಿದ್ದ ಬಾಲಕ ಸ್ವಲ್ಪ ಹೊತ್ತಿನ ಬಳಿಕ ಪರಾರಿಯಾಗಿದ್ದನು ಬಾಲಕನನ್ನು ಮನೆಯವರು ಹುಡುಕಾಡುತಿದ್ದಂತೆ ಮರುದಿನ ಬಾಲಕನನ್ನು ಮಂಜೇಶ್ವರದ ಆತನ ಸಂಭಂಧಿಕರ ಮನೆ ಬಳಿಯಲ್ಲಿ ಪತ್ತೆ ಹಚ್ಚಲಾಗಿತ್ತು.ಬಾಲಕನ ಹೇಳಿಕೆಯಂತೆ ಬಾಲಕನನ್ನು ಕಿಡ್ನಾಪ್ ಮಾಡಿದ ವ್ಯಕ್ತಿ ಉಪ್ಪಲದ ನಿರ್ಜನ ಪ್ರದೇಶದಲ್ಲಿರುವ ಹವಾನಿಯಂತ್ರಿತ ಕಟ್ಟಡವೊಂದಕ್ಕೆ ಕೊಂಡೊಯ್ದು ಇತರ ನಾಲ್ಕು ಮಂದಿಯ ಜತೆ ಸೇರಿ ಬಲಕನಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ ನಂತ್ರ ಅವರು ಕಾರಿನಲ್ಲಿ ತಂದು ಮಂಜೇಶ್ವರದಲ್ಲಿರುವ ಬಾಲಕನ ಸಂಭಂಧಿಕರ ಮನೆಯಲ್ಲಿ ಉಪೇಕ್ಷಿಸಿರುವುದಾಗಿ ದೂರಲಾಗಿದೆ.ಇದೇ ವ್ಯಕ್ತಿಗಳು ಇದಕ್ಕೆ ಮೊದಲು ಕೂಡಾ ಇದೇ ಬಾಲಕನನ್ನು ಬಲತ್ಕಾರವಾಗಿ ರೈಲು ನಿಲ್ದಾನದ ಫ್ಲಾಟ್ ಫಾರ್ಮ್ ನಲಿ ನಿಲ್ಲಿಸಲಾಗಿದ್ದ ಗೂಡ್ಸ್ ರೈಲು ಗಾಡಿಯೊಳಗೆ ಕೊಂಡೊಯ್ದು ಕಿರುಕುಳ ನೀಡಲು ಯತ್ನಿಸಿದಾಗ ಅಲ್ಲಿಂದ ಇದೇ ಬಾಲಕ ಓಡಿ ತಪ್ಪಿಸಿ ಕೊಂಡಿರುವುದಾಗಿ ಹೇಳಿಕೆ ನೀಡಿದ್ದಾನೆ.

No comments:

Post a Comment