Saturday, February 9, 2013

ವಿಜ್ಞಾನಿಗಳಿಂದ ಡೈನೊಸಾರ್‌ಗಳ ಅಳಿವಿನ ವಿವರ ಪತ್ತೆ



ಹೊಸದಿಲ್ಲಿ: ವಿಶ್ವದ ಅತಿ ದೊಡ್ಡ ಸರೀಸೃಪವೆುದು ಕರೆಯಲ್ಪಡುತ್ತಿದ್ದ ಡೈನೊಸಾರ್‌ಗಳ ಅಳಿವಿನಂಚಿನ ದಿನವನ್ನು ನಿಗದಿ ಪಡಿಸುವ ಮೂಲಕ ವಿಜ್ಞಾನಿಗಳು ಮತ್ತೊಂದು ಹೆಜ್ಜೆಯನ್ನಿಟ್ಟಿದ್ದಾರೆ.
ವಿಜ್ಞಾನಿಗಳ ಅಧ್ಯಯನದ ಪ್ರಕಾರ ಡೈನೊಸಾರ್‌ಗಳ ಅಳಿವಿನಂಚಿನ ಸಮಯದಲ್ಲಿ ಕ್ಷುದ್ರಗ್ರಹ ಅಥವಾ ಧೂಮಕೇತು ಭೂಮಿಗೆ ಅಪ್ಪಳಿಸಿದೆ ಎಂದು ಹೇಳಲಾಗಿದೆ.
ಕ್ಷುದ್ರಗಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದ ಪ್ರಪಂಚ ಪ್ರಯಳವಾಗದೆ ಡೈನೊಸಾರ್‌ಗಳು ಮಾತ್ರ ಅದಕ್ಕೆ ಸಿಲುಕಿ ಬಲಿಯಾಗಿವೆ ಎಂದು ವಿಜ್ಞಾನಿಗಳು ಬಲವಾಗಿ ನಂಬಿದ್ದಾರೆ.

ವಿಜ್ಞಾನಿಗಳ ಅಧ್ಯಯನ ಪ್ರಕಾರ ಕ್ಷುದ್ರಗ್ರಹವೊಂದು 66,03,8,000 ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿತ್ತು. ಇದೇ ಸಮಯದಲ್ಲಿ ಡೈನೊಸಾರ್‌ಗಳು ನಾಶಗೊಂಡವು ಎಂದು ಯುಸಿ ಬೆರ್ಕೆಲೆಯ ಪ್ರೊ. ಪಾಲ್ ರೆನೆ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಭಾರತದ ದಕನ್ ಪ್ರಸ್ಥಭೂಮಿಯಲ್ಲಿನ ಅಗ್ನಿ ಪರ್ವತಗಳಿದ್ದ ಪ್ರದೇಶದಲ್ಲಿ ವಾಸಿಸುತ್ತಿದ್ದ ಡೈನೋಸಾರ್‌ಗಳು 60ರಿಂದ 68 ದಶಲಕ್ಷ ವರ್ಷಗಳ ಹಿಂದೆ ಈ ಪ್ರದೇದಲ್ಲುಂಟಾದ ಜ್ವಾಲಾಮುಖಿಯಿಂದಾಗಿ ಅವಸಾನಗೊಂಡವು ಎಂಬ ಸಿದ್ಧಾಂತದ ಹಿನ್ನೆಲೆಯಲ್ಲಿ ಪಾಲ್ ರೆನೆ ದಕನ್ ಪ್ರಸ್ಥಭೂಮಿಯಲ್ಲಿನ ಅಗ್ನಿಪರ್ವತಗಳನ್ನು ಅಧ್ಯಯನ ಮಾಡಲು ಯೋಜಿಸಿದ್ದಾರೆ.
ಬರ್ಕೆಲೆಯಲ್ಲಿನ ಕ್ಯಾಲಿಫೋರ್ನಿಯಾ ವಿವಿಯ ಬಿಜಿಸಿಯಲ್ಲಿ ವಿಜ್ಞಾನಿಗಳು ಡೈನೊಸಾರ್‌ಗಳ ಅಳಿವಿನ ನಿರ್ದಿಷ್ಟವಾದ ವರ್ಷವನ್ನು ತಿಳಿಯಲು ಸಂಶೋಧನೆ ನಡೆಸಿದ್ದರು.
2010ರಲ್ಲಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದು 10 ಕಿ.ಮೀ. ಅಗಲದ ಕ್ಷುದ್ರಗ್ರಹವೊಂದು ಸಮುದ್ದಕ್ಕೆ ಅಪ್ಪಳಿಸಿದ್ದರಿಂದ ದೈತ್ಯ ಡೈನೊಸಾರ್‌ಗಳು ವಿನಾಶವಾದವು ಎಂದು ಹೇಳಿದ್ದರು.
ಡೈನೊಸಾರ್‌ಗಳ ವಿನಾಶಕ್ಕೆ ಕ್ಷುದ್ರಗ್ರಹದ ಅಪ್ಪಳಿಕೆಯೊಂದೇ ಸ್ಪಷ್ಟ ಕಾರಣವಲ್ಲ. ದಶಲಕ್ಷ ವರ್ಷಗಳ ಹಿಂದೆ ನಾಟಕೀಯವಾದ ರೀತಿಯಲ್ಲಿ ಆದ ಹವಾಮಾನ ವೈಪರೀತ್ಯವೂ ಅವುಗಳ ಅವಸಾನಕ್ಕೆ ಕಾರಣವಾಗಿರಬಹುದು. ಮಿಲಿಯನ್ ವರ್ಷಗಳ ಹಿಂದೆ ದೀರ್ಘಾವಧಿಯ ಶೀತ ಮಾರುತ, ಹಾಗೆಯೇ ಕಡು ಬಿಸಿಲಿನ ವಾತಾವರಣವಿದ್ದುದರಿಂದ ಅಪರೂಪದ ಸಸ್ತನಿಗಳು ಇವುಗಳಿಗೂ ಸಿಲುಕಿ ಅವಸಾಸ ಹೊಂದಿರಬಹುದು ಎಂದು ಪಾಲ್ ರೆನೆ ತಿಳಿಸಿದ್ದಾ

No comments:

Post a Comment