Saturday, February 23, 2013

ತೂಮಿನಾಡಿನಲ್ಲಿ ವಿದೇಶಿ ಮದ್ಯ ವಶ :ಓರ್ವನ ಸೆರೆನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಓಮ್ನಿ ಕಾರಿನಲ್ಲಿ ಸಾಗಿಸುತಿದ್ದ ವೇಳೆ ಇಲ್ಲಿಗೆ ಸಮೀಪದ ತೂಮಿನಾಡಿನಿಂದ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಮಂಜೇಶ್ವರ ಠಾಣಾಧಿಕಾರಿ ಬಿಜುಲಾಲ್ ರವರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತಿದ್ದ ವೇಳೆ ತಲಪಾಡಿ ದಾರಿಯಾಗಿ ಬಂದ ಓಮ್ನಿ ಕಾರನ್ನು ಪೊಲೀಸರು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಬೆನ್ನಟ್ಟಿ ತೂಮಿನಾಡಿನಲ್ಲಿ ಸೆರೆಹಿಡಿದಿದ್ದಾರೆ.
ವಾಹನ ಚಲಾಯಿಸುತಿದ್ದ ಪಾವೂರು ಕೆದಂಬಾಡಿ ನಿವಾಸಿ ಶಫೀಕ್(೨೫) ಎಂಬಾತನನ್ನು ಸೆರೆ ಹಿಡಿಯಲಾಗಿದೆ.ಕಾರಿನಲ್ಲಿ ೧೮೦ ಎಮ್.ಎಲ್ ೪೮ ಬಾಟ್ಲಿಯಂತೆ ಆರು ಬಾಕ್ಸ್ ಗಳಲ್ಲಾಗಿ ಕಾರಿನಲ್ಲಿ ತುಂಬಿಸಿಡಲಾಗಿದ್ದ ಮೊತ್ತ ೨೮೮ ಬಾಟ್ಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸಾಗಿಸಲಾಗುತಿದ್ದ ಮದ್ಯವನ್ನು ಮೀಯಾಪದವು,ಮಚ್ಚಂಪ್ಪಾಡಿ,ಬಾಯಾರು ಮುಂತಾದ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಶಫೀಕ್ ಪೊಲೀಸ್ ರವರಲ್ಲಿ ತಿಳಿಸಿರುತ್ತಾನೆ.ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಾಚರಣೆ ವೇಳೆ ಠಾಣಾಧಿಕಾರಿ ಜತೆಯಾಗಿ ಪೊಲೀಸರಾದ ಕುಂಞಿ ಕೃಷ್ಣನ್,ದಿಲೀಶ್ ಹಾಗು ಶತೀಶನ್ ಜತೆಯಾಗಿದ್ದರು.

No comments:

Post a Comment