Thursday, February 7, 2013

ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸರಕು ಕೇಂದ್ರ



ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸರಕು ಕೇಂದ್ರ (ಏರ್ ಕಾರ್ಗೊ ಕಾಂಪ್ಲೆಕ್ಸ್)ವನ್ನು ನಿರ್ಮಿಸುವ ಬಗ್ಗೆ ಕೇಂದ್ರ ಸರಕಾರವು ಅಧಿಸೂಚನೆ ಯೊಂದನ್ನು ಕಳೆದ ತಿಂಗಳಾಂತ್ಯಕ್ಕೆ ಹೊರಡಿಸಿದೆ. ಸರಕಾರದ ಈ ಪ್ರಸ್ತಾಪವನ್ನು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಸ್ವಾಗತಿಸಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸರಕು ಕೇಂದ್ರವನ್ನು ಸ್ಥಾಪಿಸುವ ಕುರಿತಂತೆ ಕೇಂದ್ರ ಹಣಕಾಸು ಸಚಿವಾಲಯ (ಸುಂಕ ವಿಭಾಗ) ಕಳೆದ ಜನವರಿ 31ರಂದು ಅಧಿಸೂಚನೆ ಹೊರಡಿಸಿದೆ. ಸರಕು ಕೇಂದ್ರವು ಬ್ಯಾಗೇಜ್ ಗಳು, ಕೃಷಿ, ತೋಟಗಾರಿಕೆ, ಪುಷ್ಪ ಮತ್ತು ಮತ್ಸೋ ತ್ಪನ್ನಗಳನ್ನು ಈ ವಲಯದಿಂದ ವಿದೇಶಗಳಿಗೆ ರಫ್ತು ಮಾಡುವ ಅವಕಾಶದ ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೇ ಇದು ಈ ವಲಯದ ಆರ್ಥಿಕತೆಯನ್ನು ಬಲಪಡಿಸಲು ಕಾರಣವಾಗಲಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸರಕು ಸೇವೆಯನ್ನು ಆರಂಭಿಸುವಂತೆ ಕೆಸಿಸಿಐ ಹಲವು ವರ್ಷ ಗಳಿಂದ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದೆ. ಇದೀಗ ವಿಮಾನ ಸರಕು ನಿರ್ವಹಣೆ ಆರಂಭಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಿವಿಧ ಸರಕುಗಳನ್ನು ವಿವಿಧ ದೇಶಗಳಿಗೆ ಕಳುಹಿಸಬಹುದಾಗಿದೆ ಎಂದು ಕೆಸಿಸಿಐ ಅಧ್ಯಕ್ಷ ಮುಹಮ್ಮದ್ ಅಮೀನ್ ಹೇಳಿದ್ದಾರೆ.
ಈ ಯೋಜನೆ ನನಸಾಗುವಲ್ಲಿ ಸಹಕರಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಗಳು, ಸುಂಕ ಇಲಾಖೆಗೆ ಅಮೀನ್ ಕೃತಜ್ಞತೆ ಸಲ್ಲಿಸಿದ್ದಾರೆ.

No comments:

Post a Comment