Friday, February 22, 2013

ಯುವಕನಿಗೆ ತಂಡದಿಂದ ಹಲ್ಲೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ನಡೆದು ಹೋಗುತಿದ್ದ ಯುವಕನೊಬ್ಬನಿಗೆ ರಿಕ್ಷಾದಲ್ಲಿ ತಲುಪಿದ ತಂಡವೊಂದು ಹಲ್ಲೆ ನಡೆಸಿದ ಘಟನೆ  ಉಪ್ಪಳ ಪ್ರತಾಪ ನಗರದಿಂದ ವರದಿಯಾಗಿದೆ
ಹಲೆಗೊಳಗಾದ ವ್ಯಕ್ತಿ ಉಪ್ಪಳ ಪ್ರತಾಪ ನಗರ ನಿವಾಸಿ ಫಯಾಸ್(೧೯) ಎಂಬವರಾಗಿದ್ದಾರೆ.
 ಮಲಪ್ಪುರಂ ನಲ್ಲಿ ಕೆಲಸ ನಿರ್ವಹಿಸುತಿದ್ದ ಫಯಾಸ್ ನಿನ್ನೆ ಸಂಜೆ ಮನೆಯ ಕಡೆಗೆ ನಡೆದು ಕೊಂಡು ಹೋಗುತಿದ್ದ ವೇಳೆ ರಿಕ್ಷಾದಲ್ಲಿ ತಲುಪಿದ ತಂಡವೊಂದು ಹಲ್ಲೆಗೈಯಲಾಗಿದೆ ಎಂದು ದೂರಲಾಗಿದೆ.ಗಾಯಗೊಂಡ ಫಯಾಸ್ ನನ್ನು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

No comments:

Post a Comment