Monday, February 4, 2013

ಎಂಡೋ ಸಂತ್ರಸ್ತರ ಸಮಸ್ಯೆ ಬಗೆ ಹರಿಸಲು ಪಂಚಾಯತ್‌ಮಟ್ಟದ ಅದಾಲತ್



- ಫೆಬ್ರವರಿ -04-2013

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಪಂಚಾಯತ್ ಮಟ್ಟದಲ್ಲಿ ಅದಾಲತ್ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋ ಸಲ್ಫಾನ್ ಸೆಲ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಸಂತ್ರಸ್ತರಿಗೆ ಸೌಲಭ್ಯ ಲಭಿಸುವಂತಾಗಲು ಈ ಅದಾಲತ್ ನಡೆಸಲಾಗುವುದು. ಉಚಿತ ರೇಶನ್, ಚಿಕಿತ್ಸೆ ವೊದಲಾದ ವಿಷಯಗಳ ಕುರಿತು ಅದಾಲತ್‌ನಲ್ಲಿ ದೂರು ನೀಡಬಹುದು. ಎಂಡೋಸಲ್ಫಾನ್‌ನಿಂದ ಮೃತಪಟ್ಟವರ ಆಶ್ರಿತರನ್ನು ಗುರುತಿಸಲು ಉಪ ಸಮಿತಿಯನ್ನು ರಚಿಸಲಾಗುವುದು. ಪಂಚಾಯತ್ ಅಧ್ಯಕ್ಷರು, ವಾರ್ಡು ಸದಸ್ಯ, ಗ್ರಾಮಾಧಿಕಾರಿ, ಉಪಸಮಿತಿಯನ್ನು ರಚಿಸಲಾಗುವುದು  ಪಂಚಾಯತ್ ಅಧ್ಯಕ್ಷರು, ವಾರ್ಡು ಸದಸ್ಯ, ಗ್ರಾಮಾಧಿಕಾರಿ, ಉಪಸಮಿತಿಯಲ್ಲಿರುವವರು ಸಂತ್ರಸ್ತರಿಗೆ ರೇಶನ್ ವಿತರಣೆಯಲ್ಲಿ ಅಡ್ಡಿಯಾಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ರೇಶನ್ ವಿತರಿಸು ವಂತೆ  ಆದೇಶ ನೀಡಲಾಗಿದೆ. ಎಂಡೋ ಸಲ್ಫಾನ್ ಟ್ರಿಬ್ಯೂನಲ್ ಸ್ಥಾಪಿಸಲು ಒತ್ತಡ ತೀವ್ರಗೊಳಿಸಲು ಸೆಲ್ ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು. ಅಗತ್ಯ ಬಿದ್ದಲ್ಲಿ ಎಟಿಎಂ ಮೂಲಕ ನೀಡುವ ಸಹಾಯಧನ ಮನಿ ಯಾರ್ಡರ್ ಮೂಲಕ ವಿತರಿಸಬೇಕು ಎಂದು ಪುರಸಭೆಯಲ್ಲಿ ಒತ್ತಾಯಿಸಲಾಯಿತು. ಜಿಪಂ ಅಧ್ಯಕ್ಷೆ ಪಿ.ಪಿ.ಶ್ಯಾಮಲಾ ದೇವಿ ಅಧ್ಯಕ್ಷತೆ ವಹಿಸಿದ್ದರು.
ಸಂಸದ ಪಿ. ಕರುಣಾಕರನ್, ಶಾಸಕ ಇ.ಚಂದ್ರ ಶೇಖರನ್, ಎನ್.ಎ. ನೆಲ್ಲಿಕುನ್ನು, ಕೆ.ಕುಂಞಿರಾಮನ್ (ಉದುಮ), ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್, ಎಸ್. ವೆಂಕಟೇಶ್‌ಪತಿ, ಪಿ.ಕೆ. ಸುಧೀರ್ ಬಾಬು ಉಪಸ್ಥಿತರಿದ್ದರು.

No comments:

Post a Comment