Monday, February 18, 2013

ಆಟೋದಲ್ಲಿ ಅನಧಿಕೃತ ಮರಳು ಸಾಗಾಟ: ಚಾಲಕನ ಸೆರೆ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಆಟೋ ರಿಕ್ಷಾದಲ್ಲಿ ಅನಧಿಕೃತವಾಗಿ ಮರಳು ಸಾಗಾಟ ಮಾಡುತಿದ್ದ ಮರಳು ಸಹಿತ ಚಾಲಕನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಪ್ಪಳ ಬಾಗದಿಂದ ಹೊಸಂಗಡಿ ಕಡೆ  ಮರಳನ್ನು ಹೇರಿಕೊಂಡು ಬರುತಿದ್ದ ಆಟೋ ರಿಕ್ಷಾವನ್ನು ಪೊಲೀಸರು ಭಗವತೀ ಗೇಟ್ ಬಳಿ ವಶಕ್ಕೆ ತೆಗೆದು ಕೊಂಡಿದ್ದಾರೆ.ರಿಕ್ಷಾದಲ್ಲಿ ಸುಮಾರು ೧೦ ರಷ್ಟು ಗೋಣಿ ಚೀಲಗಳಲ್ಲಿ ಮರಳನ್ನು ತುಂಬಿಸಿಡಲಾಗಿತ್ತು. ಸಂಭಂಧ ಚಾಲಕ ಮುಸೋಡಿ ನಿವಾಸಿ ಅಬ್ದುಲ್ ಅಝೀಝ್ (೧೮) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿರುತ್ತಾರೆ.

No comments:

Post a Comment