Thursday, February 14, 2013

ಗಡಿ ಪ್ರದೇಶಗಳಲ್ಲಿ ವ್ಯಾಪಕ ಗಾಂಜಾ ಮಾರಾಟ


ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು,ಉಳ್ಳಾಳ ಮೊದಲಾದ ಕಡೆಗಳಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟಮಾಡುತಿದ್ದ ಯುವಕರು ಇದೀಗ ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿ,ತೂಮಿನಾಡು ಹಾಗು ತೂಮಿನಾಡಿನ ಹಳೆಯ ಆರ್.ಟಿ.ಓ ದ ಹಿಂಬಾಗ,ಕುಂಜತ್ತೂರಿನ ಕೆಲವು ಸ್ಥಳಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದಾಗಿ ನಾಗರಿಕರಿಂದ ಕೇಳಿ ಬಂದಿದೆ.
ಕತ್ತಲಾಗುವ ಹೊತ್ತಿನಲ್ಲಿ ಬೈಕ್ ಹಾಗು ಬಣ್ಣ ಬಣ್ಣದ ಕಾರುಗಳಲ್ಲಿ ಆಗಮಿಸುತ್ತಿರುವ ಇವರು ಸ್ಥಳೀಯ ಯಾರನ್ನಾದರೊಬ್ಬ ವ್ಯಕ್ತಿಯನ್ನು ಪರಿಚಯಿಸಿಕೊಂಡು ಅವರ ಜತೆಯಾಗಿ ಸೇರಿ ಕೊಂಡು  ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ.ಇವರಲ್ಲಿ ಗಾಂಜಾ ಮಾತ್ರವಲ್ಲ ಇನ್ನೂ ಹಲವು ರೀತಿಯ ಸಿರಿಂಜ್ ನಲ್ಲಿ ನಶೆ ಏರಿಸಬಹುದಾಂತಹ ಮಾದಕ ವಸ್ಥುಗಳು ಇರುವುದಾಗಿ ಕೇಳಿ ಬಂದಿದೆ.ಇವರ ಮಾರಾಟಕ್ಕೆ ಈ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶಗಳು ಮಾದಕ ವಸ್ಥುಗಳ ಮಾರಾಟ ಕೇಂದ್ರವಾಗುವುದರಲ್ಲಿ ಎರಡು ಮಾತಿರಲಾರದೆಂಬುದು ಸ್ಥಳೀಯರೊಬ್ಬರ ಅಭಿಪ್ರಾಯ.ಕೆಲವೊಂದು ಗಾಂಜಾ ಪಡೆಗಳು ಉದ್ಯಾವರ ಮಾಡದ ಪೋಸ್ಟ್ ಆಫೀಸ್ ಬಳಿ ಹಾಗು ಮಂಜೇಶ್ವರ ಕರೋಡ ದ ಬಳಿ
 ಕೂಡಾ ಪ್ರತ್ಯಕ್ಷವಾಗುತಿದ್ದಾರೆಂಬುದುದಾಗಿ ಇಲ್ಲಿಯ ಕೆಲವು ವ್ಯಾಪಾರಿಗಳು ಆರೋಪಿಸುತಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟಗಾರರಿಗೆ ನೆಲೆನಿಲ್ಲಲು ಸಾದ್ಯವಾಗದ ಕಾರಣ ಇದೀಗ ಕೇರಳ ಕರ್ನಾಟಕದ ಗಡಿ ಪ್ರದೇಶವನ್ನು ಇವರು ಆಯ್ಕೆ ಮಾಡಿದ್ದಾರೆ.
ಮಂಗಳೂರು ಬಾಗದಿಂದಲೇ ಆಗಮಿಸುತ್ತಿರುವ ಇವರು ತೂಮಿನಾಡು ಹಳೆ ಆರ್.ಟಿ.ಓ ರೀತಿಯ ಕತ್ತಲು ಪ್ರದೇಶಗಳನ್ನೇ ಆಯ್ಕೆ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದು ಇವರಿಂದ ಖರೀದಿಸಲು ಆಗಮಿಸುತ್ತಿರುವ ಗಾಂಜಾ ವ್ಯಸನಿಗಳು ಇಂತದ್ದೇ ಸ್ಥಳಗಳಲ್ಲಿ ಗಾಂಜಾ ಸೇವಿಸುತ್ತಿರುವುದಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ಪತ್ರಿಕೆಗೆ ತಿಳಿಸಿರುತ್ತಾರೆ.ಎಳೆಯ ವಯಸ್ಸಿನ ಮಕ್ಕಳು,ವಿದ್ಯಾರ್ಥಿಗಳು,ಹಾಗು ಕೆಲಸವಿಲ್ಲದೆ ಅಲೆಯುವ ದಂಡಪಿಂಡಗಳು ಇದರ ಚಟಕ್ಕೆ ಬಲಿಯಾಗುತಿದ್ದಾರೆ.ತಂದೆ ತಾಯಿಯವರೀಗೆ ಗೊತ್ತಾಗದ ರೀತಿಯಲ್ಲಿ ಈ ಪ್ರದೇಶಗಳಲ್ಲಿ ಗಾಂಜಾ ಸೇವನೆ ನಡೆಯುತ್ತಿದೆ.
ಮಾದಕ ವಸ್ಥುಗಳನ್ನು ಖರೀದಿಸಲು ಮಾದಕ ವ್ಯಸನಿಗಳು ಮಾರ್ಗದ ಬದಿಯಲ್ಲಿರುವ ದನ ಹಾಗು ಆಡುಗಳನ್ನು ಎತ್ತಿಕೊಂಡು ಹೋಗಿ ಕಸಾಯಿ ಖಾನೆಗಳಿಗೆ ಮಾರಾಟ ಮಾಡಿ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಕೂಡಾ ಆರೋಪವಿದೆ.ಇತ್ತೀಚೆಗೆ ಸ್ಥಳೀಯ ಪರಿಸರದ ಇಬ್ಬರು ಎಳೆ ಪ್ರಾಯದ ಮಕ್ಕಳು ರಾತ್ರಿ ವೇಳೆ ಉದ್ಯಾವರ ಮಾಡ ಸಮೀಪದ  ವ್ಯಾಪಾರಿಯೊಬ್ಬರ ಆಡನ್ನು ಕದ್ದು ಕೊಂಡೊಯ್ಯುತಿರುವಾಗ ಸಿಕ್ಕಿ ಬಿದ್ದು ಆಡನ್ನು ಕಾರಿನಿಂದ ಕೆಳಗಿಳಿಸಿ ಪೆಚ್ಚುಮೋರೆಯಿಂದ ಹಿಂತಿರುಗಿದ ಘಟನೆ ಕೂಡಾ ನಡೆದಿದೆ.ಮಾತ್ರವಲ್ಲದೆ ಕೆಲವು ದಿನಗಳ ಹಿಂದೆ ತೂಮಿನಾಡು ಪ್ರದೇಶದಲ್ಲಿ  ಹೆಸರನ್ನು ಬಹಿರಂಗಗೊಳಿಸಲು ಇಷ್ಟಪಡದ ಖಸಾಯಿ ವ್ಯಾಪಾರಿಯೊಬ್ಬರ ದನವೊಂದು ಕಾಣೆಯಾಗಿದ್ದು ಅವರು ಕೂಡಾ ಇದು ಗಾಂಜಾ ವ್ಯಸನಿಗಳ ಕೃತ್ಯವೆಂದೇ ಆರೋಪಿಸಿದ್ದಾರೆ.ಈ ಪ್ರದೇಶಗಳಲ್ಲಿ ಇದೀಗ  ಹೆತ್ತವರು ಮಕ್ಕಳನ್ನು ಹೊರಗೆ ಕಳುಹಿಸಲು ಹೆದರುತಿದ್ದಾರೆ ಈ ಪ್ರದೇಶಗಳಲ್ಲಿ ಗಾಂಜಾ ಮಾರಾಟಗಾರರ ಹಾಗು ಗಾಂಜಾ ವ್ಯಸನಿಗಳ ಸದ್ದನ್ನು ಅಡಗಿಸಲು ಪೊಲೀಸರು ಮಾರು ವೇಷದಲ್ಲಿ ಬಂದು ಕಾರ್ಯಾಚರಿಸದರೆ ಮಾತ್ರ ಸಾಧ್ಯ ವೆಂಬುದು ಇಲ್ಲಿಯ ನಾಗರಿಕರ ಹೇಳಿಕೆ .ಕರ್ನಾಟಕದಿಂದ ಕೇರಳ ಗಡಿ ಪ್ರದೇಶಕ್ಕೆ ತಲುಪುವ ಮೊದಲೇ ಕರ್ನಾಟಕ ಪೊಲೀಸರಿಗೆ ಇವರನ್ನು ಹತ್ತಿಕ್ಕಲು ಸಾಧ್ಯವಿದೆ. ಸಂಜೆ ಸುಮಾರು 6 ಗಂಟೆಯಿಂದ ರಾತ್ರಿ 10 ಮಧ್ಯೆ ತಪಾಸನೆಯನ್ನು ಸ್ವಲ್ಪ ಬಿಗಿಗೊಳಿಸಿದರೆ ಗಾಂಜಾ ಮಾರಾಟಗಾರರನ್ನು ಹತ್ತಿಕ್ಕಲು ಸಾಧ್ಯವಿದೆ ಎಂಬುದು ಸ್ಥಳೀಯರ ಮಾತು.ಕೇರಳ ಕರ್ನಾಟಕ ದ ಪೊಲೀಸರು ಜಂಟಿಯಾಗಿ ಕಾರ್ಯಾಚರಿಸದರೆ ಖಂಡಿತವಾಗಿಯೂ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಮಾದಕ ವಸ್ಥುಗಳ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯತೆ ಇದೆಯೆಂಬುದು ನಾಗರಿಕರ ಅಭಿಪ್ರಾಯ. ಸಂಭಂಧ ಪಟ್ಟವರು ಇತ್ತ ಕಡೆ ಗಮನಹರಿಸಲು ಇಲ್ಲಿಯ ನಾಗರಿಕರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.

No comments:

Post a Comment