Sunday, February 3, 2013

ಮಂಗಳೂರು ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದರೆ ಉಡಾಫೆಯ ಉತ್ತರ:ಉನ್ನತ ಅಧಿಕಾರಿಗಳಿಗೆ ದೂರು


ವಿಶೇಷ ವರದಿ-ರಹಿಮಾನ್ ಉದ್ಯಾವರ 
ಮಂಜೇಶ್ವರ:ಕಾಸರಗೋಡಿನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಸಾಗಿಸುತ್ತಿರುವ ಕರ್ನಾಟಕ ಸಾರಿಗೆ ಬಸ್ ಸಿಬಂಧಿಗಳ ಅಟ್ಟ ಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಇವರ ಬಗ್ಗೆ ದೂರು ನೀಡಲು ಮಂಗಳೂರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಛೇರಿಗೆ ದೂರವಾಣಿಯಲ್ಲಿ ದೂರು ನೀಡಲು ಕರೆ ಮಾಡಿದರೆ ಅಧಿಕಾರಿಗಳಿಂದ ಉಡಾಫೆಯ ಉತ್ತರ ಕೇಳಿ ಬರುತ್ತಿರುವುದಾಗಿ ದೂರಲಾಗಿದೆ.
ದಿನಾಂಕ 02-02-2013 ಶನಿವಾರ ಸಂಜೆ 4.17 ಹೊತ್ತಿಗೆ ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣಿಕರನ್ನು ಹೇರಿಕೊಂಡು ಬರುತಿದ್ದ ಕರ್ನಾಟಕದ ಸಾರಿಗೆ ಸಂಸ್ಥೆಯ (ರಿಜಿಶ್ಟ್ರೇಶನ್ ನಂಬ್ರ ಕೆ..19.ಎಫ್ 2888 ನಂಬ್ರದ ಬಸ್ಸೊಂದು   ಉದ್ಯಾವರದ ಮಾಡ   ನಿಲ್ದಾನದಲ್ಲಿ ನಿಲ್ಲಿಸದೆ ಸುಮಾರು ದೂರ ಹೋಗಿ ನಿಲ್ಲಿಸಿ ಹೋಯ್ತು.ನಂತ್ರ ಪ್ರಯಾಣಿಕರು ಬಸ್ಸನ್ನು ಹಿಂಬಾಲಿಸುವಾಗ ವೃದ್ದನಾದ ಒಬ್ಬರು ಎಡವಿ ಬಿದ್ದು ಗಾಯ ಗೊಂಡರು ಕೂಡಾ ಅವರಿಗೆ ಬಸ್ಸನ್ನು ತಲುಪಲು ಸಾಧ್ಯವಾಗಲಿಲ್ಲವೆಂದು ದೂರಲಾಗಿದ್ದು ಇದಕ್ಕಿಂತ ಮೊದಲು 2 ನಿಮಿಷದ ಅಂತರದಲ್ಲಿ ಅಂದ್ರೆ ಇದೇ ರಸ್ತೆಯಲ್ಲಿ ಪ್ರಯಾಣಿಕರನ್ನು ಹೇರಿ ಕೊಂಡು ಸಾಗಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ಕೂಡಾ ಉದ್ಯಾವರ ಮಾಡ  ಬಸ್ಸು ನಿಲ್ದಾನದಲ್ಲಿ ಪ್ರಯಾಣಿಕರಿದ್ದರೂ ಸ್ಥಳದಲ್ಲಿ ನಿಲ್ಲಿಸದೆ ಹೋಗಿರುವುದಾಗಿ ಕೂಡಾ ಪ್ರಯಾಣಿಕರೊಬ್ಬರು ದೂರಿದ್ದಾರೆ.ಕೂಡಲೇ ಸ್ಥಳದಲ್ಲಿ ದೃಶ್ಯವನ್ನು ವೀಕ್ಷಿಸಿದ ಅಂಗವಿಕಲಾಂಗ ರಾಗಿರುವ ಮಂಜೇಶ್ವರ ಗ್ರಾಹಕರ ವೇದಿಕೆಯ ಅಧಿಕೃತರೊಬ್ಬರು  ಕೂಡಲೇ ಮಂಗಳೂರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕಛೇರಿಯ ದೂರವಾಣಿ ಸಂಖ್ಯೆ 221243 ನಂಬ್ರಕ್ಕೆ ಶನಿವಾರ ಸಂಜೆ 4.20 ಹೊತ್ತಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಪೋನ್ ಎತ್ತಿದ ಅಧಿಕಾರಿಯೊಬ್ಬರು ಕರೆ ಮಾಡಿದ ವಿಷಯದ ಬಗ್ಗೆ ಗಮನ ಹರಿಸಿದೆ ಅವಾಚ್ಯ ಶಭ್ದಗಳಿಂದ ನಿಂದಿಸಿ ಉಡಾಫೆಯ ಉತ್ತರ ನೀಡಿದ್ದಲ್ಲದೆ  ರೀತಿ ತಾವುಗಳು ಅಸಭ್ಯರೀತಿಯಲ್ಲಿ ಉತ್ತರಿಸಿದರೆ ಉನ್ನತ ಅಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ತಿಳಿಸಿದಾಗ ಎಲ್ಲಿಗೆ ಬೇಕಾದರೂ ದೂರು ನೀಡು ನಮಗೆ ಯಾರ ಹೆದರಿಕೆ ಕೂಡಾ ಇಲ್ಲವೆಂಬುದಾಗಿ ಉತ್ತರಿಸಿ ಪೋನ್ ಕೆಲಗಿಟ್ಟರೆಂದು ತಿಳಿಸಿರುತ್ತಾರೆ. ಬಗ್ಗೆ .ರಾ..ಸಾ.ಸಂ.ಉನ್ನತ ಅಧಿಕಾರಿಗಳಿಗೆ ಹಾಗು ಸಾರಿಗೆ ವಿಜಿಲೆನ್ಸ್ ಗೆ ದೂರು ನೀಡಲಾಗುವುದೆಂದು ಗ್ರಾಹಕರ ವೇದಿಕೆಯ ಅಧಿಕೃತರು ತಿಳಿಸಿದ್ದಾರೆ.
ಉದ್ಯಾವರ ಮಾಡ ಬಸ್ಸು ನಿಲ್ದಾನದಿಂದ ತಲಪಾಡಿ ಕೆ.ಸಿ ರೋಡ್ ಗೆ  ಟಿಕೆಟ್ ದರ 13 ರೂಪಾಯಿ ನಿಗದಿಪಡಿಸಿದ್ದರೂ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳ ನಿರ್ವಾಹಕರು ಪ್ರಯಾಣಿಕರಿಂದ ಕೇವಲ 10 ರೂ ಪಡೆದು ಟಿಕೆಟ್ ಗಳನ್ನು ನೀಡದೆ ಹಣವನ್ನು ತನ್ನ ಜೇಬಿನೊಳಗೆ ಹಾಕುತ್ತಿರುವುದಾಗಿ ಕೂಡಾ ಪ್ರಯಾಣಿಕರಿಂದ ದೂರು ಕೇಳಿ ಬಂದಿದೆ.ಮಾತ್ರವಲ್ಲದೆ ಇದೇ ಸಂಸ್ಥೆಯ ಬಸ್ಸುಗಳ ಕೆಲವೊಂದು ನಿರ್ವಾಹಕರು ಪ್ರಯಾಣಿಕರಲ್ಲಿ ಚಿಲ್ಲರೆ ಸರಿಯಾಗಿ ಲಭಿಸದಿದ್ದರೆ ಸೂ..... ಮಗ ಬೋ... ಮಗ ಎಂದೆಲ್ಲಾ ನಿಂದಿಸುತ್ತಿರುವುದಾಗಿ ಕೂಡಾ ದೂರಲಾಗುತ್ತಿದೆ.ಇತ್ತೀಚೆಗೆ ಇಲ್ಲಿಗೆ ಸಮೀಪದ ತೂಮಿನಾಡಿನಲ್ಲಿ ಪ್ರಯಾಣಿಕರೊಬ್ಬರನ್ನು ಇದೇ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿದಾಗ ಪ್ರಯಾಣಿಕನಿಗೂ ಬಸ್ ನಿರ್ವಾಹಕನಿಗೂ ಮಾರಾಮಾರಿಯಾದ ಘಟನೆ ಕೂಡಾ ನಡೆದಿದೆ.ಮಾತ್ರವಲ್ಲದೆ ತೂಮಿನಾಡು ನಿಂದ ಮಂಜೇಶ್ವರಕ್ಕೆ ಪ್ರಯಾಣಿಸುವ ಪ್ರಯಾಣಿಕರು 1 ರೂಪಾಯಿಗಾಗಿ 10 ರೂಪಾಯಿ ನೀಡಿದರೆ ಬಾಕಿ ಹಣ ನೀಡದೆ  ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಸ್ಸಿನಿಂದ ದೂಡಿ ಕೆಳಗಿಳಿಸಿದ ಘಟನೆ ಕೂಡಾ ಬಸ್ಸುಗಳಲ್ಲಿ ನಡೆದಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ.ತಲಪಾಡಿಯ ನಂತ್ರ ಬಸ್ಸಿನ ಸಿಬಂಧಿಗಳ ಅಟ್ಟಹಾಸ ಅತಿಯಾಗುತಿದ್ದು  ಪ್ರಯಾಣಿಕರಲ್ಲಿ ಅಸಭ್ಯರೀತಿಯಲ್ಲಿ ವರ್ತಿಸುತ್ತಿರುವ ಸಿಬ್ಬಂಧಿಗಳನ್ನು ಗುರುತಿಸಿ  ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment