Sunday, February 17, 2013

ಮಂಜೇಶ್ವರ ಉಪ್ಪಳದಲ್ಲಿ ಧಾರಾಕಾರ ಮಳೆ: ಹಲವೆಡೆ ನಾಶ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ನಿನ್ನೆ ರಾತ್ರಿ ಹಾಗು ಮರುದಿನ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಲ್ಲಿ ಹಲವೆಡೆ ನಾಶ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.
ರವಿವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಲ್ಲಿ ಕೆಲವೊಂದು ಮರಗಳು ಬುಡ ಸಹಿತ ನೆಲಕ್ಕುರುಳಿದ ಪರಿಣಾಮ ಪಚ್ಲಂಪಾರೆ ಕಾಲನಿ,ಉಪ್ಪಳ ಹಿದಾಯತ್ ನಗರದಲ್ಲಿ ಯುಮುನಾ ಹಾಗು ರಾದ್ಘವ ಎಂಬವರ ಮನೆಗಳು ಕುಸಿದು ಬಿದ್ದಿದ್ದು ಇದರ ಜತೆಯಾಗಿ ಇದೇ ಪರಿಸರದಲ್ಲಿ ಇತರ ಎರಡು ಮನೆಗಳು ಕೂಡಾ ಕುಸಿದು ಬಿದ್ದ ಬಗ್ಗೆ ವರದಿಯಾಗಿದೆ.ಕುಸಿದು ಬೀಳುವಾಗ ಮನೆಯೊಳಗೆ ಜನರಿದ್ದರೂ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.ಉಪ್ಪಳದ ಹಿದಾಯತ್ ನಗರ ಹಾಗು ಪಚ್ಲಂಪಾರೆ ರಸ್ತೆಗಳಲ್ಲಿ ಬೃಹತ್ ಮರಗಳು ಬುಡಸಹಿತ ಕಿತ್ತು ವಿದ್ಯುತ್ ಲೈನ್ ಮೇಲೆ ಬಿದ್ದಿರುತ್ತದೆ.ಇದರಿಂದಾಗಿ ರವಿವಾರ ಬೆಳಿಗ್ಗೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಯ್ತು.ವಿದ್ಯುತ್ ಸಂಪರ್ಕ ತಕ್ಷಣವೇ ವಿಚ್ಚೇಧಿಸಲ್ಪಟ್ಟ ಹಿನ್ನೆಲೆಯಲ್ಲಿ ಭಾರೀ ಒಂದು ದುರಂತ ಕೈ ತಪ್ಪಿ ಹೋಗಿದೆ.ಮಂಜೇಶ್ವರ ಉಪ್ಪಳ ಪ್ರದೇಶಗಳಲ್ಲಿ ನಿನ್ನೆ ರಾತ್ರಿಯಿಂದ ಗುಡುಗು ಸಹಿತ ಆರಂಭವಾದ ಮಳೆಯು ಇಂದು ಬೆಳಿಗ್ಗೆಯೂ ಮುಂದುವರಿದಿದ್ದು ಇದರಿಂದಾಗಿ ಹಲವು ಕಡೆಗಳಲ್ಲಿ ಕೃಷಿ ನಾಶ ಸಂಭವಿಸಿದ ಬಗ್ಗೆಯೂ ವರದಿಯಾಗಿದೆ.

No comments:

Post a Comment