Monday, February 11, 2013

ಕುಡಿಯುವ ನೀರು ಕ್ಷಾಮ:ಜಿಲ್ಲಾಡಳಿತ ಹಾಗು ಶಾಸಕರ ನಿಷ್ಕ್ರಿಯತೆ ಖಂಡನೀಯ:ಸಿಪಿಐ



ಕುಂಜತ್ತೂರು:ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಮಂಜೇಶ್ವರ,ಮೀಂಜ,ವರ್ಕಾಡಿ,ಮಂಗಲ್ಪಾಡಿ,ಪೈವಳಿಕೆ,ಕುಂಬಳೆ,ಪುತ್ತಿಗೆ,ಎಣ್ಮಕಜೆಮೊದಲಾದ ಎಂಟು ಪಂಯತುಗಳಲ್ಲಿ ಹಾಗು ಕರಾವಳಿ ಪ್ರದೇಶಗಳಲ್ಲಿ ಮತ್ತು ಪರಿಶಿಷ್ಟ ಜಾತಿ ಕಾಲನಿಗಳಲ್ಲಿ ಕುಡಿ ನೀರು ಕ್ಷಾಮ ಅತ್ಯಂತ ತೀವೃವಾಗಿದೆ.ನೂರಾರು ಕೊಳವೆ ಬಾವಿಗಳು ದುರಸ್ಥಿಯಿಲ್ಲದೆ ಉಪಯೋಗ ಶೂನ್ಯವಾಗಿದೆ.ಪುರ್ತಿಗೊಂಡ ಹಲವಾರು ಕುಡಿ ನೀರು ಯೋಜನೆಗಳಲ್ಲಿ ಇನ್ನು ಕೂಡಾ ನೀರು ಸರಬರಾಜು ಆರಂಭಿಸಿಲ್ಲ ಹಾಗು ಪೈಪ್ ಲೈನ್ ದುರಸ್ಥಿಗೆ ಕ್ರಮ ಕೈಗೊಂಡಿಲ್ಲ ಮಾತ್ರವಲ್ಲದೆ ಕ್ಷಾಮ ಇರುವ ಕಡೆ ತಲುಪಿಸುವ ಕ್ರಮ ಕೂಡಾ ಕೈಗೊಂಡಿಲ್ಲಜಿಲ್ಲಾಡಳಿತ ಚಿಕ್ಕಾಣಿ ಹಿಡಿದಿರುವ ಜಿಲ್ಲಾಧಿಕಾರಿ ಹಾಗು ಮಂಜೇಶ್ವರ ಶಾಸಕರು ನಿಷ್ಕ್ರೀಯರಾಗಿದ್ದಾರೆಂದು ಸಿಪಿಐ ಮಂಜೇಶ್ವರ ಮಂಡಲ ಕಮಿಟಿ ಆರೋಪಿಸಿದೆ.
 ಬಗ್ಗೆ ಮುಖ್ಯ ಮಂತ್ರಿಯವರಿಗೂ,ನೀರಾವರಿ ಸಚಿವರಿಗೂ ಫ್ಯಾಕ್ಸ್ ಸಂದೇಶ ಕಳುಹಿಸಿ ಬಡ ಜನತೆಯ ಸ್ಥಿತಿಗತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಆಗ್ರಹಿಸಲಾಗಿದೆ.
ತೂಮಿನಾಡು,ಅಂಗಡಿಪದವು,ಕೋಡಿಬೈಲು,ಎಸ್.ಸಿ.ಕಾಲನಿ,ಪುಳಿಕುತ್ತಿ,ಕೆದಂಬಾಡಿ,ಉಪ್ಪಳ ರೈಲ್ವೇ ಕಾಲನಿ,ಮೊದಲಾದ ಕಡೆಗಳಿಂದ ಕಚೇರಿಗೆ ದೂರುಗಳು ಬಂದಿರುವುದಾಗಿ ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ.ರಾಜನ್,ಪತ್ರಿಕೆಗೆ ತಿಳಿಸಿರುತ್ತಾರೆ..

No comments:

Post a Comment