Saturday, February 9, 2013

ಅನಧಿಕೃತ ಹೊಯ್ಗೆ ಸಾಗಾಟ:ಓರ್ವನ ಸೆರೆ



ಮಂಜೇಶ್ವರ: ಓಮ್ನಿ ವ್ಯಾನೊಂದರಲ್ಲಿ ಅನಧಿಕೃತವಾಗಿ ಹೊಯ್ಗೆ ಸಾಗಾಟ ಮಾಡುತಿದ್ದ ಓರ್ವನನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿರುತ್ತಾರೆ.
ಮಂಜೇಶ್ವರ ಬಾಗದಿಂದ ಹೊಸಂಗಡಿ ಕಡೆಗೆ ಖಾಸಗಿ ಓಮ್ನಿ ವ್ಯಾನೊಂದರಲ್ಲಿ ಗೋಣಿ ಚೀಲಗಳಲ್ಲಿ ತುಂಬಿಸಿ ಅನಧಿಕೃತವಾಗಿ ಸಾಗಿಸಲಾಗುತಿದ್ದ ಹೊಯ್ಗೆಯನ್ನು ಬಂಗ್ರ ಮಂಜೇಶ್ವರದ ಮೇಲಂ ಗಡಿಯಲ್ಲಿ ಪೊಲೀಸರು ವಶಪಡಿಸಿ ಈ ಸಂಭಂಧ ಚಾಲಕ ಮಂಜೇಶ್ವರ ನಿವಾಸಿ ನಿಸಾರ್(೨೮) ಎಂಬಾತನನ್ನು ಸೆರೆ ಹಿಡಿದಿರುತ್ತಾರೆ.

No comments:

Post a Comment