Tuesday, February 26, 2013

ತೀವ್ರ ಸ್ವರೂಪ ಪಡೆದ ಎಂಡೋ ಸಂತ್ರಸ್ತರ ಹೋರಾಟ


ತೀವ್ರ ಸ್ವರೂಪ ಪಡೆದ ಎಂಡೋ ಸಂತ್ರಸ್ತರ ಹೋರಾಟ


ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಜನಪರ ಒಕ್ಕೂಟ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹ 8 ನೆ ದಿನಕ್ಕೆ ಕಾಲಿರಿಸಿದ್ದು, ಹೋರಾಟದ ಅಂಗವಾಗಿ ಇಂದು ಬೆಳಗ್ಗೆ ನಗರದ ಹೊಸ ಬಸ್ ನಿಲ್ದಾಣ  ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತ್ರಸ್ತ ವಲಯದ  ಗೃಹಿಣಿಯರು ರಸ್ತೆ ತಡೆ ನಡೆಸಿದರು. ರಸ್ತೆ ತಡೆಯನ್ನು ಎಂಡೋಸಲ್ಫಾನ್ ಸಂತ್ರಸ್ತೆ ಮನೀಶಾ ಉದ್ಘಾಟಿಸಿದರು. ಹೋರಾಟ ಸಮಿತಿಯ ಸಂಚಾಲಕ ಅಂಬತ್ತರ ಕುಂಞಿ ಕೃಷ್ಣನ್, ಡಾ. ಸುರೇಂದ್ರನಾಥ್, ಟಿ.ಶೋಭನ, ಎನ್. ಮುರಳೀಧರನ್, ಪಿ.ನಳಿನಿ ವೊದಲಾದವರು ಮಾತನಾಡಿದರು.
ಎಂಡೋ ಸಂತ್ರಸ್ತರು ಕಳೆದ ಎಂಟು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದರೂ, ಅಧಿಕಾರಿಗಳು ಹಾಗೂ ಸರಕಾರ ಗಮನ ಹರಿಸದಿರುವುದನ್ನು ಪ್ರತಿಭಟಿಸಿ ತೀವ್ರ ಸ್ವರೂಪದ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. ಸರಕಾರ ಸೂಕ್ತ ಗಮನ ನೀಡದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೋಳಿಸಲು ಒಕ್ಕೂಟ ತೀರ್ಮಾನಿಸಿದೆ.

No comments:

Post a Comment