Monday, February 25, 2013

ಅವಸಾನದಂಚಿನಲ್ಲಿ ಏಷ್ಯದ ಹೆಬ್ಬಾವು!: ಯುರೋಪಿಯನ್ನರ ಹಾವಿನ ಚರ್ಮದ ಶೋಕಿಹೊಸದಿಲ್ಲಿ,: ಯುರೋಪ್‌ನ ಫ್ಯಾಶನ್ ಕ್ಷೇತ್ರದಲ್ಲಿ ಆಗ್ನೇಯ ಏಷ್ಯದ ಹೆಬ್ಬಾವಿನ ಚರ್ಮಕ್ಕೆ ಭಾರೀ ಬೇಡಿಕೆ ಯುಂಟಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವವಿಖ್ಯಾತ ಹೆಬ್ಬಾವುಗಳು ಅಳಿವಿ ನಂಚಿನಲ್ಲಿವೆ.
ಅಧ್ಯಯನವೊಂದರ ಪ್ರಕಾರ, ದೈತ್ಯದೇಹಿ, ವಿಷಕಾರಿಯಲ್ಲದ ಮತ್ತು ಆಕರ್ಷಕ ಬಣ್ಣ ಹೊಂದಿರುವ ಆಗ್ನೇಯ ಏಷ್ಯದ ವಿಶಿಷ್ಟವಾದ ಈ ಹೆಬ್ಬಾವಿಗೆ ಯುರೋಪ್‌ನ ಫ್ಯಾಶನ್ ಕ್ಷೇತ್ರದಲ್ಲಿ ಭಾರೀ ಬೇಡಿಕೆಯಿರುವುದರಿಂದ ಅವುಗಳ ಕಳ್ಳಸಾಗಣೆಯೂ ಹೆಚ್ಚಾಗಿ ರುವುದರಿಂದ ಅವುಗಳ ಸಂಖ್ಯೆಯು ಕ್ಷೀಣಿಸುತ್ತಿದೆ ಎಂದು ಹೇಳಲಾಗಿದೆ.
ಚೀನಾದ ಸಾಂಪ್ರದಾಯಿಕ ಔಷಧಿ, ಚರ್ಮ ಮತ್ತು ಆಹಾರಕ್ಕಾಗಿ ಆಗ್ನೇಯ ಏಷ್ಯದ ವಿಶಿಷ್ಟವಾದ ಹೆಬ್ಬಾವುಗಳನ್ನು ಈಗಾಗಲೆ ಹೆಚ್ಚಿನ ಪ್ರಮಾಣದಲ್ಲಿ ಕೊಲ್ಲಲಾಗುತ್ತಿದೆ. ಇದೀಗ ಯುರೋ ಪ್‌ನ ಫ್ಯಾಶನ್ ಕ್ಷೇತ್ರದಲ್ಲಿ ಇವುಗಳ ಚರ್ಮಕ್ಕೆ ಭಾರೀ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಇವುಗಳ ಚರ್ಮದ ರಫ್ತಿನ ಶೇ. 96 ಭಾಗದ ವ್ಯವಹಾರ ಅಲ್ಲಿನ ಫ್ಯಾಷನ್ ಕ್ಷೇತ್ರದ ಹಿಡಿತದಲ್ಲಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಮತ್ತು ಟ್ರಾಫಿಕ್ ಸಿದ್ಧಪಡಿಸಿರುವ ತಾಂತ್ರಿಕ ವರದಿಯ ಅಧ್ಯಯನದಲ್ಲಿ ತಿಳಿಸಿದೆ.
ವ್ಯಾಪಾರ ಕೊಂಡಿಯಲ್ಲಿನ ಪಾರದರ್ಶಕತೆಯ ಲೋಪ ಮತ್ತು ಕಳಪೆ ನಿಯಂತ್ರಣದಿಂದಾಗಿ ಹೆಬ್ಬಾವಿನ ಚರ್ಮದ ಅಕ್ರಮ ವ್ಯಾಪಾರ ಬಿರುಸಿನಿಂದ ಸಾಗಿದೆ ಎಂದು ವರದಿ ಹೇಳಿದೆ.
ಯುರೋಪಿಯನ್ ಫ್ಯಾಶನ್ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಉತ್ತಮ ಗುಣಮಟ್ಟದ ಮತ್ತು ಅವರಿಗೆ ಬೇಕಾದ ರೀತಿ ಯಲ್ಲಿ ಚರ್ಮವನ್ನು ಸಂಸ್ಕರಿಸುವುದರಿಂದ ಹೆಬ್ಬಾವುಗಳ ಕಚ್ಚಾ ಚರ್ಮಕ್ಕೆ ಯುರೋಪ್‌ನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಅದು ಹೇಳಿದೆ.
ಯುರೋಪ್‌ನಲ್ಲಿರುವ ಕಸಾಯಿಖಾನೆಗೆ ಮಾರಾಟಗಾರ ಚರ್ಮದ ಪ್ರತಿ ಮೀಟರ್‌ಗೆ 10 ಅಮೆರಿಕನ್ ಡಾಲರ್ (500 ರೂ.)ಗಳಿಗೆ ಮಾರಾಟ ಮಾಡುತ್ತಾನೆ. ಆನಂತರ ಸಿದ್ಧಪಡಿಸಿದ ಚರ್ಮದ ಕೈಚೀಲವೊಂದನ್ನು 10,000 ಅಮೆರಿಕನ್ ಡಾಲರ್‌ವರೆಗೂ ಮಾರಾಟಗೊಳ್ಳುತ್ತದೆ. ಮೂರರಿಂದ ನಾಲ್ಕು ಮೀಟರ್ ಉದ್ದದ ಚರ್ಮಕ್ಕೆ ಇಲ್ಲಿ ಭಾರೀ ಬೇಡಿಕೆಯಿದೆ ಎಂದು ವರದಿ ಹೇಳಿದೆ.
ಇಂಡೋನೇಷ್ಯ, ಭಾರತ ಮತ್ತು ಮಲೇಷ್ಯದಿಂದ ವಾರ್ಷಿಕ ಅರ್ಧ ಮಿಲಿಯನ್‌ನಷ್ಟು ಹೆಬ್ಬಾವಿನ ಚರ್ಮಗಳು ಯುರೋಪ್‌ಗೆ ರಫ್ತಾಗುತ್ತಿದೆ. ಮಲೇಷ್ಯದಿಂದ ಹೆಬ್ಬಾವಿನ ಚರ್ಮವನ್ನು ಆಮದು ಮಾಡಿಕೊಳ್ಳುವುದಕ್ಕೆ ಐರೋಪ್ಯ ಒಕ್ಕೂಟ ಇತ್ತೀಚೆಗೆ ನಿಷೇಧ ಹೇರಿದೆ ಎಂದು ವರದಿ ಹೇಳಿದೆ.

No comments:

Post a Comment