Tuesday, February 26, 2013

ಹಗಲೇ ಮಹಿಳೆಯ ಚಿನ್ನದ ಬ್ಯಾಗ್ ಎಗರಿಸಿ ಪರಾರಿ



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಜ್ಯುವೆಲ್ಲರಿಯಿಂದ ಚಿನ್ನಾಭರಣ ಖರೀದಿಸಿ ಮನೆಗೆ ಹಿಂತಿರುಗುತಿದ್ದ ಮಹಿಳೆಯೊಬ್ಬಳ ಬ್ಯಾಗನ್ನು ಹಾಡುಹಗಲೇ ಎಗರಿಸಿ ಪರಾರಿಯಾದ ಬಗ್ಗೆ ಇಲ್ಲಿಗೆ ಸಮೀಪದ ಕಡಂಬಾರ್ ನಿಂದ ವರದಿಯಾಗಿದೆ.
ಕಡಂಬಾರ್ ನಿವಾಸಿ ಸರ್ಪುದ್ದೀನ್ ರವರ ಪತ್ನಿ ಆಯಿಷಾ(29) ಎಂಬವರು ನಿನ್ನೆ ಹೊಸಂಗಡಿಯ ಜ್ಯುವಲ್ಲರಿಯಿಂದ ಮಗುವಿನ ಪಾದರಸ ಖರೀದಿಸಿ ಬಸ್ಸಿಳಿದು ಹೋಗುವಾಗ ದಾರಿ ಮದ್ಯೆ ಕಾರಿನಲ್ಲಿ ಬಂದ ಯುವಕನೊಬ್ಬ ಕೈಯಲ್ಲಿರುವ 1 ಪವನ್ ಚಿನ್ನದ ಪಾದರಸ ಹಾಗು 6000 ನಗದು ಇದ್ದ ಬ್ಯಾಗನ್ನು ಎಗರಿಸಿ ಪರಾರಿಯಾಗಿರುವುದಾಗಿ ದೂರಲಾಗಿದೆ.ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತಿದ್ದಾರೆ.

No comments:

Post a Comment