Sunday, February 24, 2013

ಸಮಾಜ ಸೇವಕ ಹೃದಯಾಘಾತದಿಂದ ಮೃತ್ಯು
ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:ಸಮಾಜ ಸೇವಕರೂ ಬಡವರ ಬಂಧು ಎಂದೇ ಪ್ರಖ್ಯಾತರಾಗಿದ್ದ ಕುಂಜತ್ತೂರು ನಿವಾಸಿ ಜೆ.ಕೆ.ಅಬ್ದುಲ್ ಖಾದರ್(48) ರವರು ಇಂದು ಸಂಜೆ ಮಂಗಳೂರಿನ .ಜೆ.ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತಿದ್ದ ಇವರನ್ನು  ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂಧಿಸದ ಇವರು ಇಂದು ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಕುಂಜತ್ತೂರಿನ ಬಡ ಜನತೆಯ ಬಾಳಿಗೆ ಬೆಳಕಾಗಿದ್ದ  ಜೆ.ಕೆ.ಯವರ ಅಗಲಿಕೆಯಿಂದ ಕುಂಜತ್ತೂರು ಶೋಕ ಸಾಗರದಿಂದ ಮುಳುಗಿದೆ.ಇವರ ನಿಧನದ ವಾರ್ತೆ ಹರಡುತಿದ್ದಂತೆ ಮನೆಯ ಮುಂಬಾಗದಲ್ಲಿ ಜನ ಸಾಗರವೇ ನೆರೆದಿತ್ತು.ರಾಜಕೀಯ ನೇತಾರರು,ಗಣ್ಯ ವ್ಯಕ್ತಿಗಳು ಹಾಗು ಪೊಲೀಸ್ ಅಧಿಕಾರಿಗಳು ಇವರ ಅಂತಿಮ ದರ್ಶನ ಪಡೆದರು

No comments:

Post a Comment