Wednesday, February 20, 2013

ಗಡಿನಾಡ ಪ್ರದೇಶ,ಮಂಜೇಶ್ವರಗಳಲ್ಲಿ ಹಣ ಎಗರಿಸುವ ತಂಡ ಸಕ್ರಿಯ ಎಚ್ಚರಿಕೆ



*ರಹಿಮಾನ್ ಉದ್ಯಾವರ
ಮಂಜೇಶ್ವರ:ಆರ್ಥಿಕ ವ್ಯವಹಾರದ ಉದ್ದೇಶದಲ್ಲಿ ಗಡಿನಾಡ ಪ್ರದೇಶಕ್ಕೆ ಹಾಗು ಮಂಜೇಶ್ವರದ ಪರಿಸರಕ್ಕೆ ತಲುಪುವ ವ್ಯಕ್ತಿಗಳು ಎಚ್ಚರಿಕೆಯನ್ನು ಪಾಲಿಸಬೇಕಾದ ಪರಿಸ್ಥಿತಿ ಬಂದೊದಗಿದೆ.ಹಣ ಎಗರಿಸುವ ತಂಡವೊಂದು ಪ್ರದೇಶಗಳಲ್ಲಿ ಸಕ್ರಿಯವಾಗಿದ್ದು ಹೊರರಾಜ್ಯಗಳಿಂದ ಉದ್ಯೋಗವನ್ನು ಹರಸಿ ಕೊಂಡ ವ್ಯಕ್ತಿಗಳು,ಏಕಾಂಗಿಯಾಗಿ ವ್ಯವಹಾರವನ್ನು ನಡೆಸಲು ಬರುತ್ತಿರುವ ಮಹಿಳೆಯರು ಹಾಗು ಇತರ ಕೆಲವು ವ್ಯಕ್ತಿಗಳನ್ನು ಗುರುತಿಸಿ ಕೊಂಡು ಪರಿಸರ ಪ್ರದೇಶಗಳಲ್ಲಿ ತಂಡವೊಂದು ಹೊಂಚುಹಾಕುತ್ತಿರುವುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ ಬ್ಯಾಂಕೊಂದರಿಂದ 28,೦೦೦ ರೂ ನಗದು ಹಿಂಪಡೆದು ಬ್ಯಾಂಕ್ ನಿಂದ ಹೊರಬರುತಿದ್ದ ಮಹಿಳೆಯೋರ್ವೆಯನ್ನು ಆಟೋ ರಿಕ್ಷಾದಲ್ಲಿ ಅಪಹರಿಸಿ ಆಕೆಯ ಹಣ ಎಗರಲೆತ್ನಿಸಿದ ಘಟನೆ ಉಪ್ಪಳದಲ್ಲಿ ನಡೆದಿದೆ.ಉಪ್ಪಲ ಮುಟ್ಟಂ ನಿವಾಸಿಯಾಗಿರುವ  ಮಹಿಳೆಯೊಬ್ಬಳು ಬ್ಯಾಂಕ್ ನಿಂದ ಹಣಪಡೆದು ಹಿಂತಿರುಗುತ್ತಿರುವಾಗ ರಿಕ್ಷಾವೊಂದು ದಿಡೀರ್ ಆಗಿ ಮಹಿಳೆಯ ಮುಂಬಾಗದಲ್ಲಿ ನಿಂತು ಮುಟ್ಟಂ ಹೋಗುತ್ತಿರುವುದಾಗಿ ನಂಬಿಸಿ ಆಟೋ ಚಾಲಕ ಮಹಿಳೆಯನ್ನು ರಿಕ್ಷಾಕ್ಕೆ ಹತ್ತಿಸಿ ಉಪ್ಪಳ ಪೆಟ್ರೋಲ್ ಬಂಕ್ ಗೆ ಸಾಗಿದ್ದು ಆದರೆ ಪೆಟ್ರೋಲ್ ತುಂಬಿಸದೆ ಆಯಿಲ್ ಇಲ್ಲವೆಂಬ ನೆಪವೊಡ್ಡಿ ರಿಕ್ಷಾವನ್ನು ಹೊಸಂಗಡಿ ಪೆಟ್ರೋಲ್ ಬಂಕ್ ನತ್ತ ಸಾಗಿಸಿ ಬಂಕ್ ಗೆ ನುಗ್ಗಿಸಿದ ಆಟೋವನ್ನು ಅಲ್ಲೂ ಪೆಟ್ರೋಲ್ ತುಂಬಿಸದೆ ರಿಕ್ಷಾವನ್ನು ಕಡಂಬಾರಿನತ್ತ ಸಾಗಿಸಿದ್ದ ವೇಳೆ ಗಾಬರಿಗೊಂಡ ಮಹಿಳೆ ಚಾಲಕನಿಗೆ ರಿಕ್ಷಾ ನಿಲ್ಲಿಸಲು ಸೂಚಿಸಿದ್ದರೂ ನಿಲ್ಲಿಸದೆ ಮುಂದಕ್ಕೆ ಸಾಗತೊಡಗಿದ್ದ ಇನ್ನು ಬೊಬ್ಬೆ ಹಾಕಿದರೆ ಅಪಾಯ ಖಂಡಿತವೆಂದು ಭಾವಿಸಿ ರಿಕ್ಷಾದಲ್ಲೇ ಮಹಿಳೆ ಕುಳಿತಳು ಬಳಿಕ ರಿಕ್ಷಾ ಶಾಫಿ ನಗರಕ್ಕೆ ತಲುಪುವಾಗ ದಿಡೀರ್ ಆಗಿ ಅಲ್ಲೇ ನಿಂತು ಹೋಯ್ತು. ಸಂದರ್ಭ ಮಹಿಳೆ ರಿಕ್ಷಾದಿಂದ ಜಿಗಿದು ಹತ್ತಿರದಲ್ಲೇ ನಿಲ್ಲಿಸಲಾಗಿದ್ದ ಬಸ್ಸೊಂದಕ್ಕೆ ಹತ್ತಿ ಅಪಾಯದಿಂದ ಪಾರಾಗಿದ್ದಾಳೆ. ಸಂದರ್ಭ ಮಹಿಳೆಯ ಕೈಯಲ್ಲಿ 28,೦೦೦ ರೂ ನಗದು ಹಾಗು 10 ಪವನ್ ಗಳಿಗಿಂತಲೂ ಅಧಿಕದ ಚಿನಾಭರಣದ ಒಡವೆಗಳನ್ನು ಧರಿಸಿದ್ದಳು.
 ಇತ್ತೀಚೆಗೆ ಗಡಿನಾಡ ಪ್ರದೇಶವಾದ ತೂಮಿನಾಡಿನಲ್ಲಿ ಹೊರರಾಜ್ಯಗಳಿಂದ ಬಂದ ಐಸ್ ಕೇಂಡಿ ವ್ಯಾಪಾರಿಗಳನ್ನು ತಡೆದು ನಿಲ್ಲಿಸಿ ಹಲ್ಲೆಗೈದ ತಂಡವೊಂದು ಹಣವನ್ನು ಎಗರಿಸಿ ವಿವರವೇನಾದರೂ ಯಾರಿಗಾದರೂ ತಿಳಿಸಿದರೆ ಸುಟ್ಟು ಹಾಕುವುದಾಗಿ ಬೆದರಿಕೆ ನೀಡಿ ಪರಾರಿಯಾಗಿತ್ತು. ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.ಇದೇ ಪ್ರದೇಶದಲ್ಲಿ ಇನ್ನೊಂದು ಘಟನೆ ಹಿಂದೆಯೇ ನಡೆದಿತ್ತು ಇದರಲ್ಲಿ ಶಾಮೀಲಾದ ವ್ಯಕ್ತಿಗಳನ್ನು ಗುರುತಿಸಿಕೊಂಡ ಪೊಲೀಸರು ಆರೋಪಿಗಳನ್ನು ಹಿಡಿದು ಕೇಸು ದಾಖಲಿಸಿದ್ದರು ನಂತ್ರ ಊರವರ ಮದ್ಯಸ್ಥಿಕೆಯಲ್ಲಿ ಮುಚ್ಚಳಿಕೆಯನ್ನು ಬರೆದು ಎಚ್ಚರಿಕೆ ನೀಡಿ ಬಿಟ್ಟಿದ್ದರು.ಇದೀಗ ನೂತನವಾಗಿ ಮಂಜೇಶ್ವರ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಿಜುಲಾಲ್ ರವರ ಮಾರು ವೇಷಗಳಲ್ಲಿ ಬಂದು ಜೂಜು ಅಡ್ಡೆಯ ಸದ್ದನ್ನು ಅಡಗಿಸಿದ ರೀತಿಯಲ್ಲಿ ಧರೋಡೆಯ ಸಂಚನ್ನು ರೂಪಿಸುವ ವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಠಾಣಾಧಿಕಾರಿಯವರು ಮುತುವರ್ಜಿ ತೆಗೆಯಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment