Tuesday, February 12, 2013

ಪ್ರಚಾರವಿಲ್ಲದೆ ಪ್ರಚಾರ ಗಿಟ್ಟಿಸಿದ ಮಂಜೇಶ್ವರ ಫೇಮಸ್ ತಂಡ


ವಿಶೇಷ ವರದಿ:ರಹಿಮಾನ್ ಉದ್ಯಾವರ

ಮಂಜೇಶ್ವರ:ಮೃತಪಟ್ಟ ವ್ಯಕ್ತಿಯ ನಿರ್ಗತಿಕ ಕುಟುಂಬವನ್ನು ಗುರುತಿಸಿ ಕುಟುಂಬದ ಜೀವನೋಪಾಯಕ್ಕೆ ಬೆಳಕಾಗುವ ರೀತಿಯಲ್ಲಿ ಧನಸಹಾಯವನ್ನು ನೀಡಿದ ಮಂಜೆಶ್ವರ ಫೇಮಸ್ ತಂಡವು ಪ್ರಚಾರವಿಲ್ಲದೆ ಪರಚಾರವನ್ನು ಗಿಟ್ಟಿಸಿ ಎಲ್ಲರ ಪ್ರಶಂಶೆಗೆ ಪಾತ್ರವಾಯ್ತು.
ಇತ್ತೀಚೆಗೆ ಕಾಯಿಲೆಯೊಂದರಲ್ಲಿ ಮೃತಪಟ್ಟ ಮಂಜೇಶ್ವರ ಪಾಂಡ್ಯಾಲ್ ನಿವಾಸಿಯಾಗಿರುವ ಕ್ರೀಡಾಪಟು ಅಬ್ದುಲ್ ರಜಾಕ್ ಕುಟುಂಬಕ್ಕೆ ಮಂಜೇಶ್ವರ ಫೇಮಸ್ ಕ್ಲಬ್ ತಂಡದ ಯುವಕರು ಒಂದು ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಧನ ಸಹಾಯವಾಗಿ ನೀಡಿದರು.ಫೇಮಸ್ ತಂಡದಲ್ಲಿ ಸದಸ್ಯನಾಗಿದ್ದ ಕ್ರೀಡಾ ಪಟು ಅಬ್ದುಲ್ ರಜಾಕ್ ಬಡ ಕುಟುಂಬದಲ್ಲಿ ಜನಿಸಿ ದಾರಿದ್ರ್ಯದಲ್ಲಿ ಜೀವನ ಬೆಂದು ಹೋಗಿತ್ತು.ಮದುವೆಯಾಗಿ ಮೂರು ಮಕ್ಕಳಿದ್ದು ಸಾಯುವ ಸಂದರ್ಭ ಹಂಡ್ತಿ ಗರ್ಭಿಣಿ ಕೂಡಾ ಆಗಿದ್ದಳು.ಕುಟುಂಬದ ಯಜಮಾನನಾಗಿದ್ದ ಅಬ್ದುಲ್ ರಜಾಕ್ ನಿಗೆ ಅನಿರೀಕ್ಷಿತವಾಗಿ ಬಾಧಿಸಿದ ಕಾಯಿಲೆಯಿಂದ ಆಸ್ಪತ್ರೆಗೆ ವೆಚ್ಚಮಾಡುವ ಹಣದ ಕೊರತೆಯಿಂದ  ಕುಟುಂಬದ ಬಗ್ಗೆ ಚಿಂತಿಸುವುದೇ ಕಷ್ಟ ಸಾಧ್ಯವಾಗಿತ್ತು.ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಕುಟುಂಬದ ಆಧಾರ ಸ್ಥಂಭವಾಗಿದ್ದ ಅಬ್ದುಲ್ ರಜಾಕ್ ರವರು ಇಹಲೋಕವನ್ನು ತ್ಯಜಿಸಿದರು.ಗರ್ಭಿಣಿಯಾದ ಹೆಂಡ್ತಿ ಹಾಗು ಮೂರು ಮಕ್ಕಳು ಅನಾಥವಾಗಿರುವುದನ್ನು ಮನಗಂಡ ಸಹೃದಯಿ ಯುವಕರನ್ನೊಳಗೊಂಡ ಮಂಜೇಶ್ವರ ಫೇಮಸ್ ತಂಡವು ಒಂದು ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಫೇಮಸ್ ತಂಡ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಅಬ್ದುಲ್ ರಜಾಕ್ ಕುಟುಂಬಕ್ಕೆ ೧ಲಕ್ಷ ರೂಪಾಯಿಯ ಚೆಕ್ ನ್ನು ಹಸ್ತಾಂತರಿಸಿತು.
ಊರಿನ ಹಲವಾರು ನಿರ್ಗತಿಕ ಕುಟುಂಬವನ್ನು ಗುರುತಿಸಿ ಪ್ರಾಮಾಣಿಕವಾದ ರೀತಿಯಲ್ಲಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲುತ್ತಿರುವ ಫೇಮಸ್ ತಂಡದವರ ಸಾಧನೆಯು ಕಾಸರಗೋಡು ಜಿಲ್ಲೆಯಲ್ಲೇ ಪ್ರಚಾರವಿಲ್ಲದೆ ಪ್ರಚಾರವನ್ನು ಗಿಟ್ಟಿಸಿ ಎಲ್ಲರಿಂದಲೂ ಪ್ರಶಂಶೆಗೆ ಪಾತ್ರವಾಯ್ತು.  

No comments:

Post a Comment