Wednesday, February 20, 2013

ಜನರ ಮುಷ್ಕರವಾಗಲಿಸಾಧಾರಣವಾಗಿ ಮುಷ್ಕರಗಳು ಜನರ ಎದೆಯ ಸಿಟ್ಟಿನ ಆಸ್ಫೋಟ. ಈ ಹಿಂದೆ ಅಕ್ಕಿಗೆ 50ಪೈಸೆ ಏರಿದರೂ ಜನರು ಬೀದಿಗಿಳಿಯುತ್ತಿದ್ದರು. ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯ ಹೊತ್ತಿನಲ್ಲಿ ಸರಕಾರ ತನ್ನ ಪ್ರಾಣವನ್ನು ಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತಿತ್ತು. ಜನರ ಆಕ್ರೋಶ ಗೌರವಾನ್ವಿತವಾಗಿತ್ತು. ಒಂದು ಸರಕಾರದ ಏಳು ಬೀಳಿನಲ್ಲಿ ಅದು ಮಹತ್ವದ ಪಾತ್ರವನ್ನು ವಹಿಸುತ್ತಿತ್ತು. ಆದರೆ ಯಾವಾಗ ಸರಕಾರವನ್ನು ಪರೋಕ್ಷವಾಗಿ ಕಾರ್ಪೊರೇಟ್ ವಲಯ ನಿಯಂತ್ರಿಸಲು ತೊಡಗಿತೋ, ಕಾರ್ಮಿಕ ಸಂಘಟನೆಗಳು ಅಸ್ತಿತ್ವವನ್ನು ಕಳೆದು ಕೊಂಡವು. ಹಣದಿಂದಲೂ, ರಾಮಜನ್ಮ ಭೂಮಿಯಿಂದಲೂ ಸರಕಾರ ನಿರ್ಮಿಸುವು ದಕ್ಕಾಗುತ್ತದೆಯಾದರೆ, ಜನರ ಬದುಕನ್ನು ನಾವು ಯಾಕೆ ಗೌರವಿಸಬೇಕು ಎನ್ನುವಂತಹ ಉಡಾಫೆಯನ್ನು ಸರಕಾರ ಬೆಳೆಸಿಕೊಂಡಿತು. ಉದಾರೀಕರಣ ತೆರೆದುಕೊಂಡಂದಿನಿಂದ ಕಾರ್ಮಿಕರ ಹಕ್ಕುಗಳ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಹಾಕಲಾಯಿತು.
ಕಾರ್ಮಿಕ ಸಂಘಟನೆಗಳು ರಾಜಕೀಯ ಪಕ್ಷಗಳ ಮುಖವಾಣಿಯಾಗಿ, ಉಪ ವಿಭಾಗವಾಗಿಯಷ್ಟೇ ಕೆಲಸ ಮಾಡ ತೊಡಗಿದವು. ಒಂದು ರೀತಿಯಲ್ಲಿ ಸಂಘಟನಾ ಶಕ್ತಿಯ ಆತ್ಮವನ್ನು ಸರಕಾರವೇ ಕೊಂದು ಹಾಕಿತು. ಒಂದು ಪ್ರತಿಕೃತಿಯಂತೆ ಅಥವಾ ಬೆರ್ಚಪ್ಪನಂತೆ ಇಂದು ಕಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ. 20 ಜನರನ್ನು ಸೇರಿಸಿ ಅಲ್ಲಲ್ಲಿ ಧರಣಿ, ವರ್ಷಕ್ಕೊಂದು ಭಾರತ ಬಂದ್ ಹರಕೆ ಸಂದಾಯವಾದರೆ ಅದರ ಕೆಲಸ ಮುಗಿಯಿತು.
ಯಾವುದೇ ಬೇಡಿಕೆಗಳ ಹಿಂದೆ ಬಿದ್ದು ಅವುಗಳು ಕೆಲಸ ಮಾಡುತ್ತಿರುವುದು ಕಡಿಮೆ. ಒಂದು ಮುಷ್ಕರ, ಧರಣಿ ನಡೆಸುವುದರೊಂದಿಗೆ ಅವುಗಳ ಕರ್ತವ್ಯ ಮುಗಿಯುತ್ತದೆ. ಎಷ್ಟರ ಮಟ್ಟಿಗೆ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗಿವೆ ಎನ್ನುವುದನ್ನು ಆಧರಿಸಿ ಅವುಗಳ ಮುಷ್ಕರ ಯಶಸ್ವಿಯಾಗಿದೆಯೇ ಇಲ್ಲವೆ ಎನ್ನುವುದು ನಿರ್ಧಾರವಾಗುತ್ತದೆ ಹೊರತು ಕಾರ್ಮಿಕರ ಬೇಡಿಕೆಗಳು ಈಡೇರಬೇಕೆಂದೇನೂ ಇಲ್ಲ.
ಕಾರ್ಮಿಕ ಸಂಘಟನೆಗಳ ಈ ನಿಲುವು ಗಳಿಂದಾಗಿಯೇ ಇಂದು ಮುಷ್ಕರ ಎಂದಾಗ ಜನರಿಗೆ ಅದು ತಮ್ಮದಲ್ಲದ ಯಾವುದೋ ವ್ಯವಹಾರ ಅನ್ನಿಸತೊಡಗಿದೆ. ಯಾರಾದರೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಧರಣಿ, ಭಾರತಬಂದ್, ರಸ್ತೆತಡೆ ಹಮ್ಮಿಕೊಂಡರೆ ಸಾರ್ವಜನಿಕರು ಅಸಹನೆ ವ್ಯಕ್ತಪಡಿಸುತ್ತಾರೆ. ನಿಜಕ್ಕೂ ಮುಷ್ಕರ ಸಾರ್ವಜನಿಕರ ಧ್ವನಿಯೇ ಆಗಿದ್ದರೆ ಅದಕ್ಕೆ ಅವರು ಸ್ಪಂದಿಸುತ್ತಿದ್ದರು. ರಾಜಕೀಯ ಪಕ್ಷಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚುವ ಅಗತ್ಯವಿರಲಿಲ್ಲ. ಬಸ್‌ಗಳಿಗೆ ಕಲ್ಲು ತೂರಾಟ ನಡೆಸುವ, ವಿಧ್ವಂಸಕ ಕೃತ್ಯಗಳನ್ನು ನಡೆಸುವ ಅಗತ್ಯವೂ ಇರಲಿಲ್ಲ.
ಆದರೆ ಇಂದು ಜನರಿಗೆ ಈ ಮುಷ್ಕರ ಲಾಭ ಮಾಡುವುದಿರಲಿ, ಹಾಗೂ ಹೀಗೂ ಸಾಗುತ್ತಿರುವ ಬದುಕಿಗೆ ಇನ್ನಷ್ಟು ತೊಂದರೆ ಕೊಟ್ಟು ಹೋಗುವ ಅನಿಷ್ಟ ರಾಜಕೀಯ ಅನ್ನಿಸತೊಡಗಿದೆ. ಆದುದರಿಂದ ಕಾರ್ಮಿಕ ಸಂಘಟನೆಗಳು, ರಾಜಕೀಯ ಸಂಘಟನೆಗಳು ಮುಷ್ಕರಕ್ಕಿಳಿದಾಗ ಸಾರ್ವಜನಿಕರು ಹಿಡಿಶಾಪ ಹಾಕಲು ಆರಂಭಿಸುತ್ತಾರೆ.
ವಿವಿಧ ಕಾರ್ಮಿಕ ಸಂಘಟನೆಗಳು ಈ ಬಾರಿ ಕೇಂದ್ರ ಸರಕಾರದ ವಿರುದ್ಧ ಭಾರೀ ಮುಷ್ಕರಕ್ಕೆ ಅಣಿಯಾಗಿದೆ. ಎರಡು ದಿನಗಳ ಈ ಮುಷ್ಕರ ಸರಕಾರವನ್ನು ಅಲುಗಾಡಿಸುತ್ತದೆಯೋ ಇಲ್ಲವೋ, ಜನ ಸಾಮಾನ್ಯರ ಬದುಕನ್ನಂತೂ ಅಲ್ಲೋಲ ಕಲ್ಲೋಲಗೊಳಿಸಲಿದೆ. ಎರಡು ದಿನಗಳ ಮುಷ್ಕರವೆಂದರೆ ಸಾಮಾನ್ಯವಲ್ಲ. ಕೂಲಿ ಕಾರ್ಮಿಕರು ಇದರಿಂದಾಗಿ ಎರಡು ದಿನದ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.
ರೈತರು, ಕಾರ್ಮಿಕರಿಗೂ ಇದರಿಂದ ನಷ್ಟವುಂಟಾಗಲಿದೆ. ರೋಗಿಗಳೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.  ಮದುವೆ ಶುಭ ಕಾರ್ಯಕ್ರಮಗಳಿಗೂ ಈ ಮುಷ್ಕರ ತೊಂದರೆಯನ್ನುಂಟು ಮಾಡಲಿದೆ. ಆದರೆ ಈ ಮುಷ್ಕರ ಯಾವ ರೀತಿಯಲ್ಲಿ ಸರಕಾರದ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು ಊಹಿಸುವುದು ಕಷ್ಟ. ಡೀಸೆಲ್, ಪೆಟ್ರೋಲ್ ದರವನ್ನು ಇಳಿಸುತ್ತಾರೆ ಎನ್ನುವುದನ್ನು ನಂಬುವುದಕ್ಕೇ ಸಾಧ್ಯವಿಲ್ಲ.
ಹಾಗೆಯೆ ಇಡೀ ಕಾರ್ಮಿಕರ ಬದುಕೇ ಹರಿದು ಹಂಚಿ ಹೋಗಿರುವಾಗ, ಹೊಸದಾಗಿ ಕಾರ್ಮಿಕರ ಹಕ್ಕುಗಳನ್ನು ಈ ಮುಷ್ಕರ ಮರುಸ್ಥಾಪಿಸುತ್ತದೆ ಎನ್ನುವುದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭ ದಲ್ಲಿ ಸರಕಾರವನ್ನು ಮುಜುಗರಕ್ಕೀಡು ಮಾಡಲು ರಾಜಕೀಯ ಪಕ್ಷಗಳು ಈ ಮುಷ್ಕರವನ್ನು ಒಂದು ಅಸ್ತ್ರವಾಗಿ ಬಳಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಆದರೆ ಈ ಮುಷ್ಕರಕ್ಕೆ ಜನ ಸಾಮಾನ್ಯರು ಪೂರಕವಾಗಿ ಸ್ಪಂದಿಸಿದ್ದೇ ಆದರೆ ಅದು ಸರಕಾರವನ್ನು ನಡುಗಿಸಲೂ ಬಹುದು.
ಎರಡು ದಿನದ ಮುಷ್ಕರಕ್ಕಷ್ಟೇ ಇದು ಸೀಮಿತಗೊಳ್ಳದೆ ಈ ಹೋರಾಟ ಮುಂದು ವರಿಯಬೇಕು.  ಸರಕಾರ ಕಂಗಾಲಾಗಬೇಕು. ಜನ ಎಚ್ಚೆತ್ತಿದ್ದಾರೆ ಎನ್ನುವುದು ಸರಕಾರಕ್ಕೆ ಗೊತ್ತಾಗಬೇಕು. ಆಗ ಮಾತ್ರ ಜನರಿಗೆ ಪೂರಕ ವಾಗಿ ಕೆಲಸ ಮಾಡಲು ಸರಕಾರ ಮುಂದಾ ಗಬಹುದು. ಕನಿಷ್ಠ ಜನರಿಗೆ ಮಾರಕವಾಗುವ ತೀರ್ಮಾನಗಳನ್ನು ತೆಗೆದುಕೊಳ್ಳುವ
ಸಂದರ್ಭದಲ್ಲಿ ಹಿಂದು ಮುಂದು ನೋಡಬಹುದು.ಮುಷ್ಕರದ ಹೆಸರಿನಲ್ಲಿ ಯಾವ ಕಾರಣಕ್ಕೂ ದೊಂಬಿ, ಹಿಂಸೆ ನಡೆಯಬಾರದು. ನಡೆದದ್ದೇ ಆದಲ್ಲಿ ಮುಷ್ಕರಕ್ಕೆ ಕರೆಕೊಟ್ಟರಾಜಕೀಯ ಪಕ್ಷಗಳನ್ನೇ ಗುರಿಮಾಡಬೇಕು. ವಿದ್ಯಾರ್ಥಿಗಳು, ರೋಗಿಗಳ ಕುರಿತಂತೆ ಮೃದು ಧೋರಣೆ ತಳೆಯಬೇಕು. ಬಲವಂತದ ಬಂದ್ ಎಲ್ಲೂ ನಡೆಯಬಾರದು. ಜನರೇ ಹಾರ್ದಿಕವಾಗಿ ಮುಷ್ಕರಕ್ಕೆ ಸ್ಪಂದಿಸಿದ್ದೇ ಆದಲ್ಲಿ, ಮುಷ್ಕರ ನಿಜಕ್ಕೂ ಯಶಸ್ವಿಯಾದಂ

No comments:

Post a Comment