Friday, February 1, 2013

ಪಾನ್ ಮಸಾಲ ಮಾರಾಟಗಾರನ ಬಂಧನಮಂಜೇಶ್ವರ:ನಿಷೇಧಿತ ಪಾನ್ ಮಸಾಲ ವಸ್ತುಗಳನ್ನು ತಂದು ರಸ್ತೆ ಬದಿಗಳಲ್ಲಿ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುತ್ತಾರೆ.
ಬಂಧಿತನಾದ ವ್ಯಕ್ತಿ ಸ್ಥಳೀಯ ನಿವಾಸಿ ಮೊಯ್ದಿನಬ್ಬ(೪೨) ಎಂಬವನಾಗಿದ್ದಾನೆ.ಸಂಜೆ ಹೊತ್ತು ಇಲ್ಲಿಗೆ ಸಮೀಪದ ಅಂಗಡಿ ಪದವು ಎಂಬ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಪಾನ್ ಮಸಾಲ  ಮಾರಾಟ ಮಾಡುತಿದ್ದ ವೇಳೆ ಈತನನ್ನು ಬಂಧಿಸಲಾಗಿದೆ.ಈತನಿಂದ ೨೫ ಪ್ಯಾಕೆಟ್ ಪಾನ್ ಮಸಾಲ ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ

No comments:

Post a Comment