Wednesday, February 13, 2013

ಅಂಗಡಿ ತೆರವುಗೊಳಿಸಲು ಆದೇಶ:ಪ್ರತಿಭಟನೆಗೆ ಸಜ್ಜಾದ ವ್ಯಾಪಾರಿಗಳು



ಮಂಜೇಶ್ವರ:ಗ್ರಾಮ ಪಂಚಾಯತಿನ ಸಂಕೀರ್ಣದಲ್ಲಿರುವ 18 ಅಂಗಡಿಗಳನ್ನು ತೆರವು ಗೊಳಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದು ವಿಶಯವನ್ನು ಅರಿತ ವ್ಯಾಪಾರಿಗಳು ಪ್ರತಿಭಟನೆಗೆ ಸಜ್ಜಾದ ಹಿನ್ನಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತಲುಪದೇ  ಸ್ಥಳದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹಿಂತಿರುಗಿ ಹೋದ ಘಟನೆ ಇಲ್ಲಿಗೆ ಸಮೀಪದ ಉಪ್ಪಳದಲ್ಲಿ ನಡೆದಿದೆ.
ಮಂಗಲ್ಪಾಡಿ ಪಂಚಾಯತಿನ ಉಪ್ಪಳದಲ್ಲಿರುವ ವಾಣಿಜ್ಯ ಸಂಕಿರ್ಣದಲ್ಲಿ ಕಾರ್ಯಾಚರಿಸುತ್ತಿರುವ ೧೮ ಅಂಗಡಿಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶವಿತ್ತಿದ್ದರು ಹಿನ್ನಲೆಯಲ್ಲಿ ಪಂಚಾಯತ್ ಅಧಿಕಾರಿಗಳು ಪೊಲೀಸರ ಸಹಾಯದಿಂದ ತೆರವುಗೊಳಿಸಲು ಸ್ಥಳಕ್ಕೆ ತಲುಪುವುದಾಗಿ ವ್ಯಾಪಾರಿಗಳಿಗೆ ಲಭಿಸಿದ ಮಾಹಿತಿಯಂತೆ ನೂರಾರು ವ್ಯಾಪಾರಿಗಳು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ದವಾಗಿದ್ದರು.ಆದರೆ ಅಧಿಕಾರಿಗಳು ಸ್ಥಳಕ್ಕೆ ತಲುಪದೇ ಇದ್ದುದರಿಂದ ಪ್ರತಿಭಟನೆಗೆ ಸಿದ್ದರಾಗಿದ್ದ ನೂರಾರು ವ್ಯಾಪಾರಿಗಳು ಸ್ಥಳದಿಂದ ಚದುರಿದ ದೃಷ್ಯ ಕಂಡು ಬಂತು.
೧೨ ವರ್ಷಗಳ ಹಿಂದೆ ಪಂಚಾಯತ್ ನಡೆಸಿದ ಏಲಂ ನಂತೆ ಅಂಗಡಿಯ ಕೊಠಡಿಗಳನ್ನು ವ್ಯಾಪಾರಿಗಳಿಗೆ ನೀಡಲಾಗಿತ್ತು.ಇದನ್ನು ತೆರವುಗೊಳಿಸಲು ಫೆಬ್ರವರಿ 6ರಂದು ನೋಟೀಸು ನೀಡಲಾಗಿತ್ತು.ಇದರ ವಿರುದ್ದ ವ್ಯಾಪಾರಿಗಳು ನೀಡಿದ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.ನ್ಯಾಯಾಲಯದ ಆದೇಶದಂತೆ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಯತ್ನಿಸಿದ ಪ್ರಯತ್ನಗಳೆಲ್ಲಾ ವಿಫಲವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯಿಂದ ಆದೇಶ ಬಂದಿರುವುದಾಗಿ ಹೇಳಲಾಗಿದೆ.ಇದೀಗ ಪೊಲೀಸ್ ಹಾಗು ಪಂಚಾಯತ್ ಅಧಿಕಾರಿಗಳು ವ್ಯಾಪಾರಿಗಳಿಗೆ ಇನ್ನಷ್ಟು ಕಾಲಾವಧಿ ನೀಡಿರುವುದಾಗಿ ತಿಳಿದು ಬಂದಿದೆ

No comments:

Post a Comment