Friday, February 15, 2013

ಬೈಕ್ ಗಳು ಮುಖಾಮುಖಿ ಡಿಕ್ಕಿ:ಓರ್ವ ಮೃತ್ಯು ಮತ್ತೊಬ್ಬ ಗಂಭೀರಮಂಜೇಶ್ವರ:ಬೈಕ್ ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಓರ್ವ ದಾರುಣವಾಗಿ ಮೃತಪಟ್ಟು ಇನ್ನೊಂದು ಬೈಕ್ ಸವಾರ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಳಕ್ಕೆ ಸಮೀಪದ ಒಡಿಯೂರು ಬಂಡಿತಡ್ಕದಲ್ಲಿ ನಡೆದಿದೆ.
ದಾರುಣವಾಗಿ ಮೃತಪಟ್ಟವರು ಒಡಿಯೂರು ಸಮೀಪದ ಮಕ್ಕೂರಿ ಮಾತೃ ಕೃಪಾ ನಿಲಯದ ವಾಸ್ತು ಶಿಲ್ಪಿ ದಿವಾಕರ ಆಚಾರ್ಯ(೫೫) ಎಂಬವರಾಗಿದ್ದಾರೆ.ಮಂಡಿಯೂರು ನಿವಾಸಿ ದಾಮೋದರ ಆಚಾರ್ಯ (೩೮) ಎಂಬವರು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.ನಿನ್ನೆ ಕೆಲಸದ ನಿಮಿತ್ತ ದಿವಾಕರ ರವರು ಮುಡಿಪುನತ್ತ ಸಾಗುತ್ತಿರುವಾಗ ಬಂಡಿತಡ್ಕ ಎಂಬಲ್ಲಿ ಎದುರು ಬಾಗದಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದಿವಾಕರ ರವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು ನಾಗರಿಕರು ಇವರನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮ್ರ್ತಪಟ್ಟಿದ್ದರೆನ್ನಲಾಗಿದೆ.

No comments:

Post a Comment